ನೋಯ್ಡಾ:ಕುಳ್ಳನೆಯ ವ್ಯಕ್ತಿಯೊಬ್ಬ ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆ ಸುದ್ದಿಯ ಬೆನ್ನಲ್ಲೇ ಇದೀಗ ವಧುವಿನ ನಿರೀಕ್ಷೆಯಲ್ಲಿರುವ ಯುವಕನನ್ನು ಭೇಟಿ ಮಾಡಲು ಬಾಲಿವುಡ್​ ನಟ ಸಲ್ಮಾನ್​ ಖಾನ್ ಮುಂದಾಗಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಮನ್ಸೂರಿ (26) ಇತ್ತೀಚೆಗೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ. ಅಲ್ಲಿದ್ದ ಮಹಿಳಾ ಪೊಲೀಸರ ಮುಂದೆ ಕುಳಿತು ತನ್ನ ಅಳಲನ್ನು ತೋಡಿಕೊಂಡಿದ್ದ. ನಾನು ಇರೋದು 2 ಅಡಿ 3 ಇಂಚು. ನಮ್ಮನೆಗೆ ಬರುವ ವಧುವಿನ ಕಡೆಯವರೆಲ್ಲ ನನ್ನ ಎತ್ತರ ಸಾಲದು ಎಂದು ವಾಪಾಸು ಹೋಗುತ್ತಾರೆ. ನಾನು ಕಾಸ್ಮೆಟಿಕ್​ ಅಂಗಡಿ ಇಟ್ಟುಕೊಂಡಿದ್ದೇನೆ. ಕುಟುಂಬಕ್ಕೆ ಬೇಕಾಗುವಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ. ಆದರೂ ಯಾರೂ ಹೆಣ್ಣು ಕೊಡುತ್ತಿಲ್ಲ. ನಮ್ಮ ಮನೆಯವರೂ ಹುಡುಗಿ ಹುಡುಕುವ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕ ಸೇವೆಗಿರುವ ನೀವಾದರೂ ನನಗೆ ಹುಡುಗಿ ಹುಡುಕಿಕೊಡಿ ಎಂದು ಕೇಳಿಕೊಂಡಿದ್ದ.
ಪೊಲೀಸರ ಎದುರು ಈ ರೀತಿಯ ವಿಚಿತ್ರ ಬೇಡಿಕೆಯನ್ನಿಟ್ಟು ಸಕತ್​ ವೈರಲ್​ ಆಗಿತ್ತು. ಅದೇ ಕಾರಣದಿಂದಾಗಿ ಸಲ್ಮಾನ್​ ಖಾನ್​ ಕೂಡ ಮನ್ಸೂರ್​ನನ್ನು ಭೇಟಿ ಮಾಡುವ ಮನಸ್ಸು ಮಾಡಿದ್ದಾರೆ. ಮುಂಬೈಗೆ ಬರುವಂತೆ ಹೇಳಿದ್ದಾರೆ. ಅವರು ಮನ್ಸೂರ್​ನೊಂದಿಗೆ ಏನು ಮಾತನಾಡಲಿದ್ದಾರೆ? ಹುಡುಗಿಯನ್ನು ಹುಡುಕಿ ಕೊಡಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಗಂಡು ಪಾರಿವಾಳವೂ ಮರಿಗೆ ಹಾಲುಣಿಸುತ್ತೆ! ಪಾರಿವಾಳದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

ಅಭ್ಯರ್ಥಿ ಪಟ್ಟಿಯಲ್ಲಿ ಹೆಸರಿಲ್ಲವೆಂದು ತಲೆ ಬೋಳಿಸಿಕೊಂಡು ಹೋರಾಟ ನಡೆಸಿದ ಕಾಂಗ್ರೆಸ್​ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + thirteen =
Remember me
