ಲಖನೌ:ಪಾಕಿಸ್ತಾನ ಗುಪ್ತಚರ ಏಜೆನ್ಸಿ ಐಎಸ್​ಐ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದ ಮೀರತ್​ ಮೂಲದ ಯುವಕನ್ನು ಉತ್ತರ ಪ್ರದೇಶ ವಿಶೇಷ ಕ್ರಿಯಾ ಪಡೆ (ಯುಪಿ-ಎಸ್​ಟಿಎಫ್​) ಗುರುವಾರ (ಆ.17) ಬಂಧಿಸಿದೆ.
ಬಂಧಿತನನ್ನು ಕಲೀಮ್​ ಎಂದು ಗುರುತಿಸಲಾಗಿದೆ. ಈತ ಅಕ್ರಮವಾಗಿ ಆಯುಧಗಳನ್ನು ಸಂಗ್ರಹಿಸುತ್ತಿದ್ದ. ಪಾಕಿಸ್ತಾನದ ಐಎಸ್​ಐ ಜತೆ ಸೇರಿ ಸಂಚು ರೂಪಿಸುತ್ತಿದ್ದ. ದೇಶದಲ್ಲಿ ಉದ್ವಿಗ್ನತೆ ಮತ್ತು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ದಾಳಿ ನಡೆಸಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ಎಸ್​ಟಿಎಫ್​ ತಿಳಿಸಿದೆ.
ಎಸ್‌ಟಿಎಫ್ ಹೇಳಿಕೆಯ ಪ್ರಕಾರ ಆರೋಪಿ ಸಲೀಂ, ಚಿತ್ರಗಳನ್ನು ಸೆರೆಹಿಡಿದು ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು ಮತ್ತು ಅದನ್ನು ಪಾಕಿಸ್ತಾನದಲ್ಲಿರುವ ಐಎಸ್‌ಐ ಜತೆಗೆ ವಾಟ್ಸ್​ಆ್ಯಪ್​ ಮೂಲಕ ಹಂಚಿಕೊಳ್ಳುತ್ತಿದ್ದ. ಅವರು ಕೇಳಿದಾಗಲೆಲ್ಲ ಮಾಹಿತಿ ಸಂಗ್ರಹಿಸಿ ರವಾನಿಸುತ್ತಿದ್ದ ಎಂದು ಎಸ್‌ಟಿಎಫ್ ಹೇಳಿಕೆ ನೀಡಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ದೇಶದ ಮೊದಲ 3D ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌
ಭಾರತದಲ್ಲಿನ ಭದ್ರತೆಗೆ ಸಂಬಂಧಿಸಿದ ಸ್ಥಳಗಳ ಛಾಯಾಚಿತ್ರಗಳು ಮತ್ತು ವಾಟ್ಸ್​ಆ್ಯಪ್​ ಸಂದೇಶಗಳನ್ನು ಐಎಸ್‌ಐ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ವಾಟ್ಸ್​ಆ್ಯಪ್​ ಮೂಲಕ ಕಳುಹಿಸಲಾಗಿದೆ. ಅಲ್ಲದೆ, ಆರೋಪಿ ರಾಫೆಲ್​ ಜೆಟ್ಸ್​ ಫೋಟೋಗಳನ್ನು ಐಎಸ್​ಐ ಜತೆಗೆ ಹಂಚಿಕೊಂಡಿದ್ದಾನೆಂದು ವರದಿಗಳು ತಿಳಿಸಿವೆ.
Special Task Force Uttar Pradesh has arrested a man namely Kaleem for collecting illegal weapons under a criminal conspiracy with Pakistani intelligence agency. By gathering illegal weapons under the conspiracy, they were planning to carry out some major incidents in an attempt…pic.twitter.com/KyZJnzbWR4
— ANI UP/Uttarakhand (@ANINewsUP)August 18, 2023

ಆರೋಪಿಯು ಪ್ರಸ್ತುತ ಬಂಧನದಲ್ಲಿದ್ದಾನೆ ಮತ್ತು ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ನಡೆಸಲಾಗುತ್ತಿದೆ. ಆತನೊಬ್ಬನೆ ಈ ಕೆಲಸ ಮಾಡಿದ್ದಾನಾ? ಅಥವಾ ಪಾಕಿಸ್ತಾನದ ಏಜೆನ್ಸಿಗಳಿಗೆ ಮಾಹಿತಿಯನ್ನು ರವಾನಿಸುವ ದೊಡ್ಡ ಜಾಲದ ಭಾಗವಾಗಿದ್ದಾನಾ? ಎಂಬ ಆಯಾಮದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಅಶ್ಲೀಲ ಚಿತ್ರದ ದೃಶ್ಯ ತೋರಿಸಿ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಧರ್ಮಗುರು ಅಂದರ್​..

ಭಿಕ್ಷಾಟನೆ ಮಾಫಿಯಾ; ವೃದ್ಧರ ಬಳಿ ಭಿಕ್ಷೆ ಬೇಡಿಸುತ್ತಿದ್ದ ದಂಧೆಕೊರ ಅರೆಸ್ಟ್​​

ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ಸರ್ಕಾರಕ್ಕೆ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವೆಂದ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
