ಲಖನೌ:ನಗರ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಚಿರತೆಯೊಂದು ಹಾದುಹೋಗಿರುವ ದೃಶ್ಯ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಒಂದೆರಡು ಹೆಜ್ಜೆ ಅಂತರದಲ್ಲಿ ಬೈಕ್​ ಸವಾರ ಬಚಾವ್​ ಆಗಿದ್ದಾನೆ. ಚಿರತೆ ತನ್ನ ಮುಂದೆ ಹೋಗುವುದನ್ನು ಬೈಕ್​ ಸವಾರ ಭಯಭೀತಿಯಿಂದ ನೋಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ
ಇದನ್ನೂ ಓದಿ:ಗೂಗಲ್ ಮಹತ್ವದ ನಿರ್ಧಾರ: ಈ ಮ್ಯಾಟ್ರಿಮೋನಿ ಆ್ಯಪ್​ಗಳಿನ್ನು ಕಾರ್ಯನಿರ್ವಹಿಸುವುದಿಲ್ಲ..!​
ಶುಕ್ರವಾರ ಮುಂಜಾನೆ ಮೀರತ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅದು ನಗರದ ಕಂಕೇರ್ ಖೇರಾ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಬೈಕ್ ಸವಾರನೊಬ್ಬ ಸಮೀಪಿಸಿದ್ದಾನೆ. ಪಕ್ಕದಲ್ಲೇ ಓಡುತ್ತಿದ್ದ ಚಿರತೆಗೆ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ವಾಹನದ ಹೆಡ್​ಲೈಟ್​ನ ಬೆಳಕು ಕಣ್ಣಿಗೆ ಬಿದ್ದ ನಂತರ ಚಿರತೆ ಓಡಿಹೋಗುತ್ತಿರುವುದು ಕಂಡುಬಂದಿದೆ. ವ್ಯಕ್ತಿ ಬರುವ ಕೆಲವೇ ಸೆಕೆಂಡುಗಳ ಮೊದಲು ಚಿರತೆ ಅವನ ಮಾರ್ಗವನ್ನು ದಾಟಿದೆ. ಇದು ಆತ ಚಳಿಯಲ್ಲೂ ಬೆವೆತುಹೋಗುವಂತೆ ಮಾಡಿದೆ.
ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊವು ಕೇವಲ ಒಂದೆರಡು ಹೆಜ್ಜೆಗಳ ಅಂತರದಲ್ಲಿ ಚಿರತೆ ತನ್ನ ಮುಂದೆ ನಡೆದುಕೊಂಡು ಹೋಗುವುದನ್ನು ಬೈಕ್ ಸವಾರ ನೋಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಅವನು ಇದ್ದಕ್ಕಿದ್ದಂತೆ ವೇಗವನ್ನು ಕಡಿಮೆ ಮಾಡಿ ತನ್ನ ವಾಹನವನ್ನು ನಿಲ್ಲಿಸಿ ವನ್ಯಜೀವಿಗಳನ್ನು ಯಾವುದೇ ತೊಂದರೆಯಿಲ್ಲದೆ ರಸ್ತೆ ದಾಟಲು ಬಿಟ್ಟಿದ್ದಾನೆ.
ರಸ್ತೆ ನಡುವೆ ಚಿರತೆಯನ್ನು ಕಂಡ ವ್ಯಕ್ತಿಯನ್ನು ಅಕ್ಷಯ್ ಠಾಕೂರ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಆತ ಕೂಡಲೇ ಅಧಿಕಾರಿಗಳಿಗೆ ಘಟನೆ ಕುರಿತು ವಿವರಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮಕ್ಕಾಗಿ ಚಿರತೆಯ ಚಲನವಲನ ಗಮನಿಸಿದ್ದಾರೆ.
ಕಾಲೋನಿ ನಿವಾಸಿಗಳು ತಮ್ಮ ಮತ್ತು ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯ ಭಯದಲ್ಲಿದ್ದರೆ, ಅಧಿಕಾರಿಗಳು ಭಯಪಡಬೇಡಿ ಎಂದು ಭರವಸೆ ನೀಡಿದರು. ಆದಾಗ್ಯೂ, ಚಿರತೆಯನ್ನು ಇನ್ನೂ ಸೆರೆಹಿಡಿಯಲಾಗಿಲ್ಲ. ಅಲ್ಲಿರುವ ಫಾರ್ಮ್ ಒಂದರಲ್ಲಿ ಅಡಗಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಜಿಯೋದಿಂದ ಭಾರತದಲ್ಲೇ ಅಗ್ಗದ 5ಜಿ ಫೋನ್: ಬೆಲೆ ಇಷ್ಟು ಕಡಿಮೆನಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + one =
Remember me
