ಉತ್ತರಪ್ರದೇಶ:ಮನೆಯಲ್ಲಿ ಯಾರು ಮೊದಲು ಸ್ನಾನ ಮಾಡುತ್ತಾರೆ ಎನ್ನುವ ಜಗಳದಲ್ಲಿ ಯುವಕನೊಬ್ಬ ತನ್ನ ಸಹೋದರನನ್ನು ಹೊಡೆದು ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಫಕೀರ್ (35) ಮೃತ. ಗ್ಯಾಸ್ ವೆಲ್ಡಿಂಗ್ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ. ಫಕೀರ್‌ನ ಕಿರಿಯ ಸಹೋದರ ಶಾದಾಬ್ ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಸಹೋದರನನ್ನು ಕೊಂದು ನಂತರ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಸ್ಥಳಕ್ಕೆ ತಲುಪಿದಾಗ ಫಕೀರ್‌ನ ದೇಹವು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಫಕೀರ್ ತನ್ನ ಪತ್ನಿ ನಸೀಮ್ ಜಹಾನ್ ಮತ್ತು ಪುತ್ರಿಯರೊಂದಿಗೆ ಚಕ್ಕರ್ ಕಿ ಮಿಲಾಕ್‌ನ ಚರಂಡಿಯ ಬಳಿ ವಾಸಿಸುತ್ತಿದ್ದನು. ಈ ಮನೆಯಲ್ಲಿ ಫಕೀರನ ಐವರು ಸಹೋದರರೂ ವಾಸವಾಗಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆಯುತ್ತಿತ್ತು.
ಇದನ್ನೂ ಓದಿ:ಟಾಲಿವುಡ್​ ನಿರ್ಮಾಪಕನ ಕಾಲ್​ ಲೀಸ್ಟ್​ ರಹಸ್ಯ: ನಟಿ ಆಶು ರೆಡ್ಡಿಗೆ ಎದುರಾಯ್ತು ಭಾರೀ ಸಂಕಷ್ಟ
ಫಕೀರ್ ಅವರ ಹಿರಿಯ ಮಗಳು ಖೈರುಲ್ ನಿಶಾ ಶುಕ್ರವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ಸ್ನಾನ ಮಾಡಲು ಹೋಗುತ್ತಿದ್ದರು. ಅಷ್ಟರಲ್ಲಿ ಅವಳ ಅತ್ತೆ ಬಂದರು. ಆಗ ಇಬ್ಬರ ನಡುವೆ ಜಗಳ ಪ್ರಾರಂಭವಾಯ್ತು. ಫಕೀರನೂ ಮಧ್ಯೆ ಬಂದು ಜಗಳವಾಡತೊಡಗಿದ. ಈ ವಿಚಾರವಾಗಿ ಫಕೀರ್ ತನ್ನ ಕಿರಿಯ ಸಹೋದರ ಶಾದಾಬ್ ಜತೆ ಜಗಳವಾಡಿದ.
ಶಾದಾಬ್ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟರಲ್ಲಿ ಶಾದಾಬ್ ಜತೆಗೆ ಅವನ ಇತರ ಸಹೋದರರೂ ಬಂದರು. ಎಲ್ಲರೂ ಫಕೀರನನ್ನು ಹೊಡೆದು ಸಾಯಿಸಿದರು. ನಂತರ ಆರೋಪಿ ಶಾದಾಬ್ ಠಾಣೆಗೆ ಬಂದು ಠಾಣೆಗೆ ತೆರಳಿ ಅಣ್ಣನನ್ನು ಕೊಂದು ಬಂದಿರುವುದಾಗಿ ತಿಳಿಸಿದ್ದಾನೆ.ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನನ್ನ ಪತಿಗೆ ಅಕ್ರಮ ಸಂಬಂಧ ಇದೆ; ಫೇಸ್‌ಬುಕ್ ಲೈವ್‌ನಲ್ಲಿ ಪ್ರಾಣ ಕಳೆದುಕೊಂಡ ಮಹಿಳಾ ಟೆಕ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 14 =
Remember me
