ಲಖನೌ :ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಫೋಟೊಗಳನ್ನು ಬಳಸಿಕೊಂಡು ಮೊಬೈಲ್ ಫೋನ್​ ಬ್ರ್ಯಾಂಡ್ ಪ್ರೊಮೋಟ್ ಮಾಡಿದ ಉತ್ತರ ಪ್ರದೇಶದ ಸಚಿವರೊಬ್ಬರ ಸಹೋದರನ ವಿರುದ್ಧ ಚೀಟಿಂಗ್ ಕೇಸ್ ದಾಖಲಾಗಿದೆ.
ಉತ್ತರ ಪ್ರದೇಶದ ವೃತ್ತಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ರಾಜ್ಯ ಸಚಿವ (ಸ್ವತಂತ್ರ ಖಾತೆ) ಕಪಿಲ್ ದೇವ್ ಅಗರವಾಲ್ ಅವರ ಸಹೋದರ ಲಲಿತ್ ಅಗರವಾಲ್​ ಆರೋಪಿ. ಹಜರತ್​ಗಂಜ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಲಲಿತ್ ಅಗರವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ನಡುವೆ ಸಚಿವ ಕಪಿಲ್ ದೇವ್ ಅಗರವಾಲ್ ಪ್ರತಿಕ್ರಿಯಿಸಿದ್ದು, ನನ್ನ ಸಹೋದರ ಟೀಕಾಕಾರರಿಗೆ, ವಿರೋಧಿಗಳಿಗೆ ಹಗುರ ಗುರಿಯಾಗಿದ್ದಾರೆ. ಈ ಕೇಸ್​ನಲ್ಲಿ ಹುರುಳಿಲ್ಲ. ಆದಷ್ಟು ಬೇಗ ಆರೋಪಮುಕ್ತರಾಗಲಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸುಧಾರಾಣಿಯ ಬರ್ಬರ ಹತ್ಯೆ
ವರದಿಗಳ ಪ್ರಕಾರ, ಜಾಹೀರಾತು ಏಜೆನ್ಸಿಯೊಂದನ್ನು ಲಲಿತ್ ಅಗರವಾಲ್ ನಡೆಸುತ್ತಿದ್ದು, ಮೊಬೈಲ್ ಫೋನ್ ಬ್ರ್ಯಾಂಡ್ ಅನಾವರಣ ಸಂದರ್ಭದಲ್ಲಿ ಹೋರ್ಡಿಂಗ್ ಒಂದರಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಫೊಟೋ ಬಳಸಲಾಗಿದೆ. ಇದು ಅರಿವು ಮೀರಿ ನಡೆದ ಘಟನೆಯಾಗಿತ್ತು. ಕಾರ್ಯಕ್ರಮ ಡಿಸೆಂಬರ್ 22ರಂದು ನಡೆದಿತ್ತು. ಹೋರ್ಡಿಂಗ್​ನಲ್ಲಿ ಫೋಟೊ ಬಳಸಿದ ಬಗ್ಗೆ ಆಕ್ಷೇಪ ವ್ಯಕ್ತವಾದ ಕೂಡಲೇ ಅದನ್ನು ಅಲ್ಲಿಂದ ತೆರವುಗೊಳಿಸಿತ್ತು. ಬಳಿಕ ಈ ವಿಚಾರವಾಗಿ ಜಾಹೀರಾತು ಏಜೆನ್ಸಿ ಕ್ಷಮೆಯನ್ನೂ ಯಾಚಿಸಿತ್ತು. (ಏಜೆನ್ಸೀಸ್)
‘ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಭೀಕರ ರಸ್ತೆ ಅಪಘಾತ : ಅಪ್ಪನ ಮತಎಣಿಕೆಗೆ ಹೊರಟ ಮಗ ಮತ್ತು ಇನ್ನೊಬ್ಬನ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 9 =
Remember me
