ಲಖನೌ:ಉತ್ತರ ಪ್ರದೇಶದಲ್ಲಿ ನಡೆದ ಭಯಾನಕ ಘಟನೆಯಲ್ಲಿ ಸರ್ಕಸ್​ ಕಲಾವಿದ ಅಜಾಬ್​ ಸಿಂಗ್​ ಎಂಬುವರ ಬರ್ಬರ ಹತ್ಯೆಯಾಗಿ‘ತ್ತು. ಈ ಪ್ರಕರಣದ ಇತ್ತೀಚಿನ ಅಪ್​ಡೇಟ್​ ಹೊರಬಿದ್ದಿದ್ದು, ಕೊಲೆ ನಡೆದ ಸ್ಥಳದಲ್ಲಿ ಪತ್ತೆಯಾದ ಕಾಂಡೋಮ್​ ಪ್ಯಾಕೆಟ್​ ಪೊಲೀಸರ ತನಿಖೆಗೆ ನೆರವು ನೀಡಿದ್ದು, ಕೊಲೆ ನಿಗೂಢವನ್ನು ಭೇದಿಸಲು ಮಹತ್ವದ ಸುಳಿವು ನೀಡಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಜೂನ್​ 11ರಂದು ಸರ್ಕಾರಿ ಶಾಲೆಯ ಆವರಣದಲ್ಲಿ ಸುಟ್ಟ ಸ್ಥಿತಿಯಲ್ಲಿ ಕಲಾವಿದ ಅಜಾಬ್​ ಸಿಂಗ್​ ದೇಹ ಪತ್ತೆಯಾಯಿತು. ಈ ವೇಳೆ ಪೊಲೀಸರಿಗೆ ಆ ಪ್ರದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಕಾಂಡೋಮ್​ ಬ್ರ್ಯಾಂಡ್​ ಟೈಮೆಕ್ಸ್ ಕಾಂಡೋಮ್​ ಪ್ಯಾಕೆಟ್ ಸಿಕ್ಕಿತು. ತನಿಖಾಧಿಕಾರಿಗಳ ಪ್ರಕಾರ ಆರೋಪಿಗಳಾದ ಇಮ್ರಾನ್​, ಫರ್ಮಾನ್​ ಮತ್ತು ಇರ್ಫಾನ್ ಭಿತ್ರಿ ದೀಹ್​ ಗ್ರಾಮದಲ್ಲಿ ಸರ್ಕಸ್​ ಅಳವಡಿಸಲು ಶಹರಾನ್​ಪುರದಿಂದ ಬಂದಿದ್ದರು. ಅಂದು ರಾತ್ರಿ ಆರತಿ ಎಂಬ ಮಹಿಳೆಯೊಂದಿಗೆ ಮೂವರು ಉಳಿದುಕೊಂಡಿದ್ದರು. ಅದಕ್ಕಾಗಿ ಕಾಂಡೋಮ್​ ಖರೀದಿ ಮಾಡಿದ್ದರು.
ಇದನ್ನೂ ಓದಿ:ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಯುವತಿ; ಇತ್ತ ಕೆಲಸ ಕಳೆದುಕೊಂಡ ಪೊಲೀಸರು!
ಕೊಲೆಯಾದ ಸಿಂಗ್​ ಓರ್ವ ಮ್ಯಾಜಿಕ್​ ಕಲಾವಿದ. ಈತ ಅರೋಪಿಗಳಾದ ಇಮ್ರಾನ್​ ಮತ್ತು ಇರ್ಫಾನ್​ ಸಹೋದರಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ. ಇದು ಇರ್ಫಾನ್​ ಮತ್ತು ಇಮ್ರಾನ್​ ಕೋಪಕ್ಕೆ ಕಾರಣವಾಗಿತ್ತು. ಅದೇ ದಿನ ಇಬ್ಬರು ಸಹೋದರು ಫರ್ಮಾನ್​ ಜತೆ ಸೇರಿ ಕಂಠಪೂರ್ತಿ ಕುಡಿದಿದ್ದರು. ಬಳಿಕ ಕುಡಿದ ಮತ್ತಿನಲ್ಲಿ ಸಿಂಗ್​ ಜತೆಗೆ ಗಲಾಟೆ ಆರಂಭಿಸಿದ್ದರು. ಕೊಲೆ ಮಾಡಲು ಇರ್ಫಾನ್​ಗೆ ಇಷ್ಟವಿರಲಿಲ್ಲ. ಬೆದರಿಕೆ ಹಾಕುವುದು ಆತನ ಉದ್ದೇಶವಾಗಿತ್ತು. ಆದರೆ, ಇಮ್ರಾನ್​ ತನ್ನ ಕೋಪವನ್ನು ನಿಯಂತ್ರಿಸಲಾಗದೇ ಆತನನ್ನು ಕೊಲೆ ಮಾಡಿದನು.
ಕೊಲೆ ಮಾಡಿದ ಬಳಿಕ ಮೂವರು ಸೇರಿ ಅಜಾಬ್​ ಸಿಂಗ್​ ಮೃತದೇಹವನ್ನು ಸುಟ್ಟು ಹಾಕಿ ಪರಾರಿಯಾಗಿದ್ದರು. ಅದೇ ಜಾಗದಲ್ಲಿ ಕಾಂಡೋಮ್​ ಪತ್ತೆಯಾಗಿತ್ತು. ಅದರ ಜಾಡನ್ನು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.(ಏಜೆನ್ಸೀಸ್​)
ಗಂಡನ ದುಡಿಮೆಯಲ್ಲಿ ಸರ್ಕಾರಿ ಕೆಲ್ಸ ಗಿಟ್ಟಿಸಿ ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ದ ಮಹಿಳಾಧಿಕಾರಿಯ ಹಳೇ ಹೇಳಿಕೆ ವೈರಲ್​!

ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶ; ಸ್ಥಳದಲ್ಲೇ ಪ್ರಾಣ ಬಿಟ್ಟ ಇಬ್ಬರು ಕಾರ್ಮಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 9 =
Remember me
