ಲಖನೌ:ಸಾಮಾನ್ಯ ನಾಗರಿಕಳ ವೇಷದಲ್ಲಿ ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸರ ಕಾರ್ಯ ವೈಖರಿಯನ್ನು ಪರೀಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಗುರುವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಚಾರು ನಿಗಮ್​ ಅವರು ಕುರ್ತಾ ಧರಿಸಿ, ಮುಖಕ್ಕೆ ದುಪ್ಪಟ್ಟ ಸುತ್ತಿಕೊಂಡು, ಕಣ್ಣಿಗೆ ಸನ್​ ಗ್ಲಾಸ್​ ಹಾಕಿ, ತಮ್ಮನ್ನು ಗುರುತನ್ನು ಮರೆಮಾಚಿಕೊಂಡು ಬಂದಿದ್ದರು.
ಸುಲಿಗೆ ಪ್ರಕರಣದ ಸಂತ್ರಸ್ತೆ ರೀತಿ ನಟಿಸಿದ ಚಾರು ನಿಗಮ್​, 112 ಸಹಾಯವಾಣಿಗೆ ಕರೆ ಮಾಡಿ, ನನ್ನ ಹೆಸರು ಸರಿತಾ ಚೌಹಾಣ್​, ಸಶ್ತ್ರಾಸ್ತ್ರ ಹೊಂದಿದ್ದ ದುಷ್ಕರ್ಮಿಗಳು ನನ್ನ ಬಳಿ ಸುಲಿಗೆ ಮಾಡಿದ್ದಾರೆ ಎಂದು ದೂರು ನೀಡಿದರು. ನಿರ್ಜನ ಪ್ರದೇಶದಲ್ಲಿ ಚಾರು ನಿಗಮ್​ ಅವರು ಫೋನ್​ನಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ಔರೈಯಾ ಪೊಲೀಸರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸರಿತಾ ಹೆಸರಿನಲ್ಲಿ ಬಂದ ಕರೆಯನ್ನು ಸ್ವೀಕರಿಸಿದ ಬಳಿಕ ಸುಲಿಗೆ ನಡೆದ ಸ್ಥಳಕ್ಕೆ ತಕ್ಷಣ ಪೊಲೀಸರ ತಂಡ ಧಾವಿಸುವ ಮೂಲಕ ಉತ್ತಮವಾಗಿ ಸ್ಪಂದನೆ ಮಾಡಿದ್ದು, ಚಾರು ನಿಗಮ್​ ಅವರ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕರೆ ಮಾಡಿದ್ದ ಮಹಿಳೆ ಬಳಿ ದೂರು ಸ್ವೀಕರಿಸಿದ್ದಾರೆ. ಆದರೆ, ಅವರಿಗೆ ನಮ್ಮ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಎಂಬ ಸುಳಿವು ಸಿಗಲೇ ಇಲ್ಲ. ಆದರೆ, ಚಾರು ನಿಗಮ್​ ಅವರು ಪೊಲೀಸರ ಎಲ್ಲ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಎಲ್ಲ ನಡೆದ ಬಳಿಕ ಟ್ವೀಟ್​ ಮಾಡಿರುವ ಚಾರು ನಿಗಮ್​, ಪೊಲೀಸರು ನಡೆದುಕೊಂಡ ರೀತಿ ಸಮಾಧಾನ ತಂದಿದೆ ಎಂದಿದ್ದಾರೆ.
ಪರೀಕ್ಷೆ ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿರುವ ಅಧಿಕಾರಿ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಮನಗೆದ್ದಿದೆ.(ಏಜೆನ್ಸೀಸ್​)
जनपदीय पुलिस के रिस्पांस टाइम व सतर्कता को चेक करने हेतु पुलिस अधीक्षक औरैया@ipsCharuNigamने स्वयं की पहचान छुपाते हुए सुनसान रोड पर तमंचे के बल पर बाइक सवार अज्ञात व्यक्तियों द्वारा झूठी लूट की सूचना कंट्रोल रूम व डायल112 पर दी गयी जिसमे जनपदीय पुलिस की कार्यवाही संतोषजनक रही।pic.twitter.com/I4n3yJoUHP
— Auraiya Police (@auraiyapolice)November 3, 2022

ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ಜಾಹ್ನವಿ ಕಪೂರ್​: ವಿಡಿಯೋ ವೈರಲ್​

ಪೊಲೀಸ್​ ಕಾನ್​ಸ್ಟೆಬಲ್​ ನೇಮಕಾತಿ: ವಯೋಮಿತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven − seven =
Remember me
