ನವದೆಹಲಿ:ಕಾಂಗ್ರೆಸ್ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಹಾಥರಸ್​ಗೆ ಹೋದಾಗ ಅವರನ್ನು ಪೊಲೀಸರು ತಳ್ಳಿದ್ದಾರೆಂಬ ಆರೋಪ ಕೇಳಿಬಂದಿದೆ.
ಮೊದಲ ದಿನ ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಹಾಥರಸ್​ಗೆ ತೆರಳಿದ್ದಾಗ ನಡೆದ ನೂಕುನುಗ್ಗಲು, ಪೊಲೀಸರ ಲಾಠಿ ಚಾರ್ಜ್​ ವೇಳೆ ರಾಹುಲ್​ ಗಾಂಧಿಯವರು ಪೊದೆಗೆ ಬಿದ್ದಿದ್ದರು. ಆದರೂ ಬೆಂಬಿಡದೆ ಎರಡನೇ ಬಾರಿ ಭೇಟಿಗೆ ತೆರಳಿದ ಸಂದರ್ಭದಲ್ಲಿ ಪುರುಷ ಅಧಿಕಾರಿಯೋರ್ವ ಪ್ರಿಯಾಂಕಾ ಗಾಂಧಿಯವರ ಬಟ್ಟೆಯನ್ನು ಹಿಡಿದು ಎಳೆದಿದ್ದಾರೆ. ಈ ಫೊಟೋ ಕೂಡ ಎಲ್ಲೆಡೆ ವೈರಲ್ ಆಗಿ, ಪೊಲೀಸರ ಕ್ರಮಕ್ಕೆ ವಿರೋಧವೂ ವ್ಯಕ್ತವಾಗಿದೆ.
ಇದೀಗ ಉತ್ತರ ಪ್ರದೇಶ ಪೊಲೀಸರು ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಬಳಿ ಕ್ಷಮೆ ಯಾಚಿಸಿದ್ದಾರೆ. ನಿನ್ನೆಯಷ್ಟೇ ಹಾಥರಸ್​ಗೆ ಭೇಟಿ ಕೊಟ್ಟು, ಜಿಲ್ಲಾ ಮ್ಯಾಜಿಸ್ಟ್ರೇಟ್​​ನ್ನು ಅಮಾನತು ಮಾಡಬೇಕು ಎಂದು ಇವರಿಬ್ಬರೂ ಆಗ್ರಹಿಸಿದ್ದರು. ಅದಾದ 24 ಗಂಟೆಯೊಳಗೆ ಅಂದರೆ ಇಂದು ಉತ್ತರ ಪ್ರದೇಶ ಪೊಲೀಸರು ಕ್ಷಮೆ ಕೋರಿದ್ದಾರೆ.ಇದನ್ನೂ ಓದಿ:ರಾಹುಲ್​ ಗಾಂಧಿಗೆ ಮಾಡೋಕೇನೂ ಇಲ್ಲ: ಹರಿಯಾಣ ಸಿಎಂ
ಅದರಲ್ಲೂ ನಿನ್ನೆ ಪ್ರಿಯಾಂಕಾ ಗಾಂಧಿಯವರ ತೋಳಿಗೆ ಕೈ ಹಾಕಿ, ಬಟ್ಟೆ ಎಳೆದ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದೂ ಹೇಳಿದ್ದಾರೆ. ಈ ಘಟನೆ ಬಗ್ಗೆ ಸುಮೊಟೊ ದಾಖಲಿಸಿಕೊಂಡಿರುವ ಡಿಸಿಪಿ, ತನಿಖೆಗಾಗಿ ಹಿರಿಯ ಮಹಿಳಾ ಪೊಲೀಸ್​ ಅಧಿಕಾರಿಯನ್ನು ನೇಮಿಸಿದ್ದಾರೆ. (ಏಜೆನ್ಸೀಸ್)
ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್​ ಆರೋಗ್ಯ ತುಸು ಗಂಭೀರ; ಸಭೆ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
