ಉತ್ತರಪ್ರದೇಶ:ಪೊಲೀಸ್ ಉದ್ಯೋಗದ ಆಕಾಂಕ್ಷಿಯಾಗಿದ್ದ ಬುಲಂದ್‌ಶಹರ್‌ನ ಮಹಿಳೆಯೊಬ್ಬರು ಸದ್ಯಕ್ಕೆ ರಾಜ್ಯ ರಸ್ತೆಮಾರ್ಗದಲ್ಲಿ ಬಸ್ ಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬೆನ್ನಿಗೆ ನಿಂತಿರುವ ಪತಿಯು ಕಂಡಕ್ಟರ್ ಆಗಿ ಸಹಾಯ ಮಾಡುತ್ತಿರುವುದು ವಿಶೇಷ.
ಸ್ನಾತಕೋತ್ತರ ಪದವಿ ಪಡೆದಿರುವ ಈ ಮಹಿಳೆ ದೆಹಲಿಯಲ್ಲಿ ಪೋಲೀಸ್‌ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರು. ಈಗ ರಾಜ್ಯದ ರಸ್ತೆಮಾರ್ಗದಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಹೌದು,ವೇದ್ ಕುಮಾರಿ ಎಂಬ ಹೆಸರಿನ ಈಕೆ ತಮ್ಮ ಈ ದಿಟ್ಟ ನಡೆಯಿಂದ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.
ಸಂಸ್ಕೃತದಲ್ಲಿ ಎಂಎ ಪಡೆದಿರುವ ವೇದ್ ಕುಮಾರಿ ಪೊಲೀಸ್ ಉದ್ಯೋಗದ ತಯಾರಿಯಲ್ಲಿದ್ದಾಗ ಚಾಲಕರ ಉದ್ಯೋಗದ ಜಾಹೀರಾತನ್ನು ನೋಡಿದ್ದಾರೆ. ಕೌಶಲ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಉತ್ತರ ಪ್ರದೇಶದ ರಸ್ತೆ ಸಾರಿಗೆ ನಿಗಮದ ಬೆಂಬಲದೊಂದಿಗೆ 2021 ರಲ್ಲಿ ಕಾನ್ಪುರದ ಮಾದರಿ ಡ್ರೈವಿಂಗ್ ತರಬೇತಿ, ಸಂಶೋಧನಾ ಸಂಸ್ಥೆಯಿಂದ ವಾಹನ ಚಾಲನಾ ತರಬೇತಿ ಹಾಗೂ 2023ರಲ್ಲಿ 10 ತಿಂಗಳುಗಳ ಕಾಲ ಕೌಶಂಬಿ ಡಿಪೋನಲ್ಲಿ ತರಬೇತಿ ಪಡೆದಿದ್ದಾರೆ. ಕೌಶಂಬಿ-ಘಾಜಿಯಾಬಾದ್‌ನಿಂದ ಬುಡೌನ್ ಮಾರ್ಗದಲ್ಲಿ ಮೊದಲ ಮಹಿಳಾ ಬಸ್ ಚಾಲಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
बस चलाती इस महिला की कहानी बेहद ही दिलचस्प है।दरअसल, बुलंदशहर में यूपी रोडवेज की इस बस में यह महिला ड्राइवर है। वहीं पति बस में कंडक्टर हैं।बस चलाने वाली महिला का नाम वेद कुमारी है, जो कभी पुलिस में भर्ती होना चाहती थी। ख़ैर इनका यह सपना सपना ही रह गया।आज ये संविदा पर यूपी…pic.twitter.com/xzIP8PYVXm
— Priya singh (@priyarajputlive)November 6, 2023

ವೇದ್ ಕುಮಾರಿ ಮತ್ತು ಮುಖೇಶ್ ಪ್ರಜಾಪತಿ ದಂಪತಿಗೆ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ಹಾಗೂ ಪುಟ್ಟ ಮಗಳು ಇದ್ದಾರೆ. ದಂಪತಿ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ಹಿರಿಯ ಮಗನೇ ತನ್ನ ತಂಗಿಯನ್ನು ನೋಡಿಕೊಳ್ಳುತ್ತಾನೆ.
ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ಮಹಿಳೆ ಗುತ್ತಿಗೆ ಉದ್ಯೋಗಿಯಾಗಿದ್ದಾರೆ. ಆದರೂ ತಾನು ನಿರ್ವಹಿಸುತ್ತಿರುವ ಕೆಲಸದಲ್ಲಿ ಯಾವುದಕ್ಕೂ ಹೆದರುವಂತಹ ಯಾವುದೇ ಕಾರಣವಿಲ್ಲ ಎಂದು ಮುಂದುವರಿದಿದ್ದಾರೆ.
ಈ ಕುರಿತಾಗಿ ಮಾತನಾಡಿದ ವೇದ್​​ ಕುಮಾರಿ, ಪ್ರಸ್ತುತ ಕಾಲಘಟ್ಟದಲ್ಲಿ ಯಾವ ಕೆಲಸವೂ ಕಷ್ಟವಲ್ಲ, ಮಹಿಳೆಯರು ತಮಗೆ ಸರಿ ಎನಿಸಿದ ಕೆಲಸವನ್ನು ಮಾಡಬಹುದಾಗಿದೆ” ಎಂದು ಹೇಳುವ ಮೂಲಕ ಎಲ್ಲಾ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ.
‘ತಪ್ಪಾಗಿ ಅರ್ಥೈಸಬೇಡಿ, ಸಿಎಂ ಮಾತನಾಡಿದ್ದು ಲೈಂಗಿಕ ಶಿಕ್ಷಣದ ಬಗ್ಗೆ’: ಸಮರ್ಥಿಸಿಕೊಂಡ ತೇಜಸ್ವಿ ಯಾದವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eleven =
Remember me
