ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲೆ ಮಾಡುವ ಬೆದರಿಕೆ ವಾಟ್ಸ್ಆ್ಯಪ್ ಸಂದೇಶದ ಮೂಲಕ ಪೊಲೀಸರಿಗೆ ತಲುಪಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ಸೋಷಿಯಲ್ ಮೀಡಿಯಾ ಸೆಲ್​ಗೆ ಗುರುವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶ ರವಾನಿಸಿದ್ದು, ಬಾಂಬ್​ ಮೂಲಕ ಮುಖ್ಯಮಂತ್ರಿಯನ್ನು ಕೊಲೆಮಾಡುವುದಾಗಿ ಬೆದರಿಸಿದ್ದ. ವಾಟ್ಸ್​ಆ್ಯಪ್ ಮೂಲಕ ಪೊಲೀಸರಿಗೆ ತಲುಪಿದ ಸಂದೇಶದಲ್ಲಿ, ಮುಖ್ಯಮಂತ್ರಿ ಮುಸ್ಲಿಂ ವಿರೋಧಿ ಆಗಿರುವ ಕಾರಣ ಅವರನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು.
ಇದನ್ನೂ ಓದಿ:VIDEO| ಕೆನಡಾ ಮೂಲದ ಕನ್ನಡಿಗನಿಂದ ಕರೊನಾಗೆ ಔಷಧಿ: ವಿಶ್ವದ ಗಮನ ಸೆಳೆದ ಸಂಶೋಧನೆ!
ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 505(1)(ಬಿ) ಪ್ರಕಾರ ಮತ್ತು ಸೆಕ್ಷನ್ 506, 507ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಖನೌನ ಗೋಮತಿ ನಗರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಧೀರಜ್ ಕುಮಾರ್ ಎಫ್​ಐಆರ್ ದಾಖಲಿಸಿದ್ದು, ಯುಪಿ 112ರ ವಾಟ್ಸ್​ಆ್ಯಪ್ ಸಂಖ್ಯೆ 7570000100 ನಂಬರ್​ಗೆ ಬೆದರಿಕೆ ಸಂದೇಶ ಗುರುವಾರ ತಡರಾತ್ರಿ 12.30ಕ್ಕೆ ಬಂದಿದೆ ಎಂದು ಧೀರಜ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭವಾಗಿದ್ದು, ಆರೋಪಿ ಪತ್ತೆಗೆ ಶೋಧ ಆರಂಭವಾಗಿದೆ. (ಏಜೆನ್ಸೀಸ್)
VIDEO: 107 ಜನರಿದ್ದ ಪಾಕಿಸ್ತಾನದ ವಿಮಾನ ಪತನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 18 =
Remember me
