ಕಾನ್ಪುರ:ಕುಖ್ಯಾತ ಗ್ಯಾಂಗ್​ಸ್ಟರ್ ವಿಕಾಸ್​ ದುಬೆ ಬೆಂಬಲಿಗರು 8 ಪೊಲೀಸರನ್ನು ಹತ್ಯೆಗೈದ ಬಳಿಕ, ಆತನ ಬಂಧನಕ್ಕೆ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದಾರೆ. ಬಂಧನದ ವಿಚಾರ ದುಬೆಗೆ ಪೊಲೀಸರು ತಲುಪುವ ಮೊದಲೇ ತಲುಪಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೂ ಪೊಲೀಸರು ಪ್ರಯತ್ನಿಸಿದ್ದಾರೆ.ಕಾನ್ಪುರದ ಬಿಕ್ರು ಗ್ರಾಮದಲ್ಲಿ ಪೊಲೀಸರನ್ನೇ ಹತ್ಯೆಗೈದ ದುಬೆಗೆ ಬಂಧನ ವಿಚಾರ ತಲುಪಿದ್ದು ಹೇಗೆ? ಪೊಲೀಸ್ ಠಾಣೆಯಿಂದಲೇ ಮಾಹಿತಿ ಸೋರಿಕೆಯಾಗಿರಬೇಕು ಎಂಬ ಸಂದೇಹ ತನಿಖಾಧಿಕಾರಿಗಳಿಗೆ ಉಂಟಾಗಿದೆ. ಹೀಗಾಗಿ ತನಿಖೆಯನ್ನು ಅಲ್ಲಿಂದಲೇ ಶುರುಮಾಡಿದ್ದಾರೆ.ಉತ್ತರ ಪ್ರದೇಶದ ಡಿಜಿಪಿ ಹಿತೇಶ್ ಚಂದ್ರ ಅವಸ್ಥಿ ಈ ಬಗ್ಗೆ ಹೇಳಿಕೆ ನೀಡಿದ್ದು, ಕಾನ್ಪುರದ ಎನ್​ಕೌಂಟರ್ ಪಿತೂರಿಯಂತೆ ಭಾಸವಾಗುತ್ತಿದೆ. ಯಾವುದೇ ಆದರೂ ಪೊಲೀಸರು ಈ ಪ್ರಕರಣದ ರಹಸ್ಯ ಭೇದಿಸಿ ನ್ಯಾಯ ಒದಗಿಸಲಿದ್ದಾರೆ.
ಇದನ್ನೂ ಓದಿ:ಗಣ್ಯರ ಹತ್ಯೆಗೂ ಸ್ಕೆಚ್ ಹಾಕಿದ್ದ ದುಬೆ!
ಪ್ರಾಥಮಿಕ ಮಾಹಿತಿ ಪ್ರಕಾರ ತನಿಖಾಧಿಕಾರಿಗಳಿಗೆ ಚೌಬೇಪುರ ಸ್ಟೇಷನ್ ಆಫೀಸರ್​ ವಿನಯ್ ತಿವಾರಿ ಮೇಲೆ ಸಂದೇಹ ಉಂಟಾಗಿದ್ದು, ಅವರೇ ಮಾಹಿತಿ ಸೋರಿಕೆ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಹೀಗಾಗಿ ವಿನಯ್ ತಿವಾರಿಯನ್ನು ಜುಲೈ 3ರ ಸಂಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ತೀವ್ರವಾಗಿ ತನಿಖೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದನ್ನು ಅರಿಯುವ ಪ್ರಯತ್ನವಾಗಿದೆ.
ವಿನಯ್​ ತಿವಾರಿ ಬಗ್ಗೆ ಸಂದೇಹ ಬರುವುದಕ್ಕೆ ಅನೇಕ ಕಾರಣಗಳಿವೆ. ವಿಕಾಸ್ ದುಬೆ ವಿರುದ್ಧ ದೂರು ತೆಗೆದುಕೊಂಡು ಬಂದ ಸಂತ್ರಸ್ತನ ಜತೆಗೆ ಸರಿಯಾಗಿ ವರ್ತಿಸಿಲ್ಲ. ಅಷ್ಟೇ ಅಲ್ಲ, ಕೇಸ್ ರಿಜಿಸ್ಟರ್ ಮಾಡುವುದಕ್ಕೂ ನಿರಾಕರಿಸಿದ್ದ. ಈ ಎಲ್ಲ ನೆಲೆಗಟ್ಟಿನ ಮೇಲೆ ತನಿಖಾಧಿಕಾರಿಗಳು ಸ್ಟೇಷನ್ ಆಫೀಸರ್ ವಿನಯ್​ ತಿವಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)
ಪೊಲೀಸರ ಹತ್ಯೆಗೈದ ನನ್ನ ಮಗನನ್ನು ಹೊಡೆದುರುಳಿಸಿ- ಗ್ಯಾಂಗ್​ಸ್ಟರ್ ದುಬೆಯ ಅಮ್ಮ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + one =
Remember me
