ಗಾಜಿಯಾಬಾದ್‌:ಬಿಸಿಲಿನ ಬೇಗೆಯಿಂದ ಧಣಿದಿರುವ ಉತ್ತರ ಪ್ರದೇಶದ ಜನ, ಇದೀಗ ವಿದ್ಯುತ್ ಕಡಿತದಿಂದ ಹೈರಾಣಾಗಿದ್ದಾರೆ. ಈ ನಡುವೆ ಲೋನಿಯ ಬಲರಾಮ್ ನಗರದಲ್ಲಿ ಪವರ್​ ಕಟ್​ ಸಮಸ್ಯೆಯಿಂದ ರೋಸಿ ಹೋದ ಮಹಿಳೆಯರ ಗುಂಪೊಂದು ಪವರ್ ಹೌಸ್‌ಗೆ ನುಗ್ಗಿ ದಾಂಧಲೆ ನಡೆಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ವಿದ್ಯುತ್ ದರ ಏರಿಕೆ ವಿರೋಧಿಸಿ ಜೂನ್ 22ರಂದು ಕರ್ನಾಟಕ ಬಂದ್
ಮಹಿಳೆಯೊಬ್ಬರು ಪವರ್ ಹೌಸ್​ನ ಕಿಟಕಿ ಗಾಜನ್ನು ಪುಡಿ ಮಾಡುತ್ತಿರುವುದು, ಮತ್ತೊಬ್ಬ ಮಹಿಳೆ ದೊಣ್ಣೆ ಹಿಡಿದುಕೊಂಡು ಬಂದು ಬಾಗಿಲು ಒಡೆಯುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಜೂನ್ 15ರಂದು ಮಹಿಳೆಯರಿಂದ ದಾಂಧಲೆ ಸಂಭವಿಸಿದ್ದು, ಬಳಿಕ ಇಲಾಖೆಯ ಕಿರಿಯ ಇಂಜಿನಿಯರ್ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಘಟನೆ ಬಗ್ಗೆ ದೂರು ದಾಖಲಾಗಿದ್ದು, ಆರೋಪಿ ಮಹಿಳೆಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಧನ ಸಚಿವ ಎ.ಕೆ.ಶರ್ಮಾ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಪವರ್ ಕಟ್ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚುವರಿ ವಿದ್ಯುತ್ ಖರೀದಿಸಿ, ಹಣದ ಕೊರತೆ ಇಲ್ಲ. ಒಂದು ವೇಳೆ ಟ್ರಾನ್ಸ್​ಫಾರ್ಮರ್ ಕೆಟ್ಟು ಹೋಗಿದ್ದಲ್ಲಿ ಬದಲಾಯಿಸಿ. ರಾಜ್ಯದಲ್ಲಿ ವಿದ್ಯುತ್ ಸರಬರಾಜಿನ ಕುರಿತು ಪ್ರತಿ ಜಿಲ್ಲೆಯಿಂದ ವರದಿ ತರಿಸಿಕೊಂಡು ಪರಿಶೀಲಿಸುತ್ತಿರಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
