ಮಿರ್ಜಾಪುರ:ರಸ್ತೆಯಲ್ಲಿ ಎಲ್ಲಾದರೂ ಹಸು, ಎಮ್ಮೆಗಳನ್ನು ಕಂಡರೆ ಹಗ್ಗದಿಂದ ಕಟ್ಟಿ ಹಾಕಿ ಎಂದು ಉತ್ತರಪ್ರದೇಶ ರಾಜ್ಯದ ಲೋಕೋಪಯೋಗಿ ಇಲಾಖೆ ತನ್ನ ಇಂಜಿನಿಯರ್​ಗಳಿಗೆ ಸೂಚನೆ ನೀಡಿದೆ.
ಜನವರಿ 29ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗಂಗಾ ಯಾತ್ರಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ದಾರಿಯಲ್ಲಿ ಜಾನುವಾರುಗಳು ಕಂಡರೆ ಅವುಗಳನ್ನು ಕಟ್ಟಿ ಹಾಕಿ. ಅವುಗಳಿಂದಾಗಿ ಮುಖ್ಯಮಂತ್ರಿ ಯೋಗಿ ಅವರ ದಾರಿಗೆ ಅಡ್ಡ ಬರದಂತೆ ತಡೆಯಿರಿ. ಅಲ್ಲದೆ ಎಲ್ಲ ಜೂನಿಯರ್​ ಇಂಜಿನಿಯರ್​ಗಳ ನಿಮ್ಮ ನಿಮ್ಮ ತಂಡದೊಂದಿಗೆ ಹಾಜರಿರತಕ್ಕದ್ದು. ಜತೆಗೆ 8ರಿಂದ 10 ಹಗ್ಗಗಳನ್ನು ತನ್ನಿ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಈ ಸೂಚನೆಗೆ ಪ್ರತಿಕ್ರಿಯಿಸಿರುವ ಮಿರ್ಜಾಪುರ ಇಂಜಿನಿಯರ್ಸ್​ ಅಸೋಸಿಯೇಷನ್​, ನಮ್ಮ ಇಂಜಿನಿಯರ್​ಗಳಿಗೆ ಜಾನುವಾರುಗಳನ್ನು ಹಿಡಿದು ಅಭ್ಯಾಸವಿಲ್ಲ. ಹಾಗಾಗಿ ಪ್ರಾಣಿಗಳನ್ನು ಹಿಡಿಯಲು ಹೋದಾಗ ಅನಾಹುತವಾಗಿ ಗಾಯಗೊಂಡರೆ ಅಸೋಸಿಯೇಷನ್​ ಜವಾಬ್ದಾರವಾಗುವುದಿಲ್ಲ ಎಂದಿದೆ. ಮತ್ತೆ ಈ ಕಾರ್ಯವನ್ನು ಯಾರಾದರೂ ಪರಿಣಿತ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ನೀಡುವುದು ಉತ್ತಮ ಎಂದು ಸಲಹೆಯನ್ನೂ ನೀಡಿದೆ.
ಈ ಮುಂಚೆ ಸಾಮೂಹಿಕ ಮದುವೆಯಲ್ಲಿ ಭಾಗವಹಿಸುವ ವಧುಗಳಿಗೆ ಶೃಂಗಾರಗೊಳ್ಳಲು ಸಹಕರಿಸಲು ಶಾಲಾ ಶಿಕ್ಷಕರನ್ನು ನೇಮಿಸಿ ವಿವಾದವಾಗಿತ್ತು. ನಂತರ ಈ ಸೂಚನೆಯನ್ನು ವಾಪಸ್​ ಪಡೆಯಲಾಗಿತ್ತು.
ಇದರ ಬೆನ್ನಲ್ಲೇ ಮತ್ತೊಂದು ಸೂಚನೆ ವೈರಲ್​ ಆಗಿದೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್​ಗಳಿಗೆ ಜಾನುವಾರು ಕಟ್ಟಿ ಹಾಕಲು ತಿಳಿಸಿದ ಇಲಾಖೆ ಪೇಚಿಗೊಳಗಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 1 =
Remember me
