
ಉತ್ತರ ಪ್ರದೇಶ:ಮಹಿಳಾ ಕಬಡ್ಡಿ ಆಟಗಾರರಿಗೆ ಟಾಯ್ಲೆಟ್​​ನಲ್ಲಿ ಊಟ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಟಗಾರರು ಟಾಯ್ಲೆಟ್​​ನಲ್ಲಿ ಊಟ ಪಡೆದುಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾಜಕೀಯ ವಲಯದಿಂದಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಅಂಡರ್-17 ಕಬಡ್ಡಿ ಪಂದ್ಯಾಟವನ್ನು ಆಡಲು ಮಹಿಳಾ ತಂಡ ಸಹರಾನ್ಪುರಕ್ಕೆ ಬಂದಿದ್ದರು. ಇವರಿಗೆ ಸೂಕ್ತ ರೀತಿಯಲ್ಲಿ ಊಟದ ವ್ಯವಸ್ಥೆ ಮಾಡದೇ ಇರುವುದು ವೈರಲ್ ಆಗಿರುವ ವಿಡಿಯೋದಿಂದ ತಿಳಿದು ಬಂದಿದೆ. ಆಟಗಾರರು ಟಾಯ್ಲೆಟ್​​ನ ಒಳಗಿದ್ದ ಪಾತ್ರೆಯಿಂದ ಅನ್ನ ತೆಗೆದುಕೊಳ್ಳುತ್ತಿರುವುದು ಕಾಣುತ್ತಿದೆ. ಅಲ್ಲೇ ಪಕ್ಕದಲ್ಲಿ ನೆಲೆದ ಮೇಲೆ ಕಾಗದ ಹಾಸಿ ‘ಪೂರಿ’ಗಳನ್ನು ಇರಿಸಿದ್ದಾರೆ. ಜೊತೆಗೆ ನೆಲದೇ ಮೇಲೆ ತರಕಾರಿಗಳನ್ನು ಚೆಲ್ಲಿರುವುದು ವೈರಲ್ ಆಗಿರುವ ವಿಡಯೋದಲ್ಲಿ ಕಂಡುಬಂದಿದೆ.
ಒಂದು ನಿಮಿಷದ ಈ ವಿಡಿಯೋದಲ್ಲಿ ಮೂತ್ರ ಮಾಡುವ ಜಾಗದಲ್ಲೇ ಆಹಾರ ಪದಾರ್ಥವನ್ನು ಇರಿಸಿರುವುದು ತಿಳಿಯುತ್ತದೆ. ಟಾಯ್ಲೆಟ್​​ನ ಒಳಗೆ ಇರಿಸಿದ್ದ ಅನ್ನವನ್ನು ಆಟಗಾರರು ತಮ್ಮ ತಟ್ಟೆಗೆ ಹಾಕಿಕೊಂಡು ಹೊರಹೋಗುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಸ್ವಿಮ್ಮಿಂಗ್ ಫೂಲ್ ಬಳಿ ಆಹಾರ ಸಿದ್ಧಪಡಿಸುತ್ತಿರುವುದು ಕಂಡು ಬಂದಿದೆ.
ವೈರಲ್ ಆಗಿರುವ ವಿಡಿಯೋಗೆ ಟೀಕೆಗಳು ಬರುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶ ಸರ್ಕಾರ ಸಹರಾನ್ಪುರದ ಕ್ರೀಡಾ ಅಧಿಕಾರಿ ಅನಿಮೇಶ್​ ಸಕ್ಸೇನಾ ಅವರನ್ನು ಅಮಾನತು ಮಾಡಿದೆ. ಆಟಗಾರರಿಗೆ ಸರಿಯಾದ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸೂಕ್ತ ತನಿಖೆಗೆ ಸೂಚಿಸಲಾಗಿದೆ. ಈ ಬಗ್ಗೆ ಮೂರು ದಿನದಲ್ಲಿ ವರದಿ ತರಿಸಲಾಗುವುದು ಎಂದು ಸಹರಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಖಿಲೇಶ್ ಸಿಂಗ್ ಪ್ರತಿಕ್ರಿಯಸಿದ್ದಾರೆ.
ಕ್ರೀಡಾಂಗಣದಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದೆ. ಈ ವೇಳೆ ಮಳೆಯಾಗುತ್ತಿದ್ದರಿಂದ ಸ್ವಿಮ್ಮಿಂಗ್ ಫೂಲ್ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು. ಸಿದ್ಧವಾದ ಆಹಾರ ಇಡಲು ಸ್ಥಳಾವಕಾಶದ ಕೊರತೆ ಉಂಟಾಗಿದ್ದರಿಂದ ಈಜುಕೊಳದ ಪಕ್ಕದ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಆಹಾರ ಇಡಲಾಗಿತ್ತು ಎಂದು ಅಮಾನತಾದ ಕ್ರೀಡಾ ಅಧಿಕಾರಿ ಅನಿಮೇಶ್​ ಸಕ್ಸೇನಾ ತಿಳಿಸಿದ್ದಾರೆ.(ಏಜೆನ್ಸೀಸ್)
यूपी की कबड्डी खेलने वाली बेटियों को टॉयलेट में खाना परोसा गया।झूठे प्रचार पर करोड़ों खर्च करने वाली BJP सरकार के पास हमारे खिलाड़ियों के लिए अच्छी व्यवस्था करने के पैसे नहीं हैं।धिक्कार है!pic.twitter.com/UazJvCrWPB— Congress (@INCIndia)September 20, 2022
यूपी की कबड्डी खेलने वाली बेटियों को टॉयलेट में खाना परोसा गया।झूठे प्रचार पर करोड़ों खर्च करने वाली BJP सरकार के पास हमारे खिलाड़ियों के लिए अच्छी व्यवस्था करने के पैसे नहीं हैं।धिक्कार है!pic.twitter.com/UazJvCrWPB

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
