ಲಖನೌ:ಆಕೆ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕಿ. ಅದರಲ್ಲೇನೂ ವಿಶೇಷವಿಲ್ಲ. ಆದರೆ, ಆಕೆ ವರ್ಷಕ್ಕೆ ಬರುತ್ತಿದ್ದ ವೇತನ 1.25 ಕೋಟಿ ರೂ. ಅದೆಂಥಾ ಹುದ್ದೆ ಎಂದು ಅಚ್ಚರಿ ಪಡಬೇಕಿಲ್ಲ. ಎಲ್ಲರಂತೆ ಆಕೆ ಕೂಡ ಸಾಮಾನ್ಯ ಶಿಕ್ಷಕಿಯೇ ಆಗಿದ್ದಳು. ಆಕೆಗೆ ಸಂಬಳ ಕೇವಲ ಒಂದು ಶಾಲೆಯಿಂದಷ್ಟೇ ಬರುತ್ತಿರಲಿಲ್ಲ. ಬದಲಾಗಿ ಬರೋಬ್ಬರಿ 25 ಕಡೆಗಳಿಂದ ವೇತನ ಗಿಟ್ಟಿಸಿದ್ದಳು. ಈಗ ಪೊಲೀಸರ ಬಲೆಗೆ ಬಿದ್ದಿದ್ದು, ತನಿಖೆ ನಡೆಸಲಾಗುತ್ತಿದೆ.
ಉತ್ತರಪ್ರದೇಶದ ಫರೀದ್​ಪುರ್​ನ ಕಸ್ತೂರಬಾ ಬಾಲಿಕಾ ಶಾಲೆಯಲ್ಲಿ ಪೂರ್ಣಕಾಲಿಕ ವಿಜ್ಞಾನ ಶಿಕ್ಷಕಿಯಾಗಿದ್ದ ಅನಾಮಿಕ ಶುಕ್ಲಾ ಮೂಲತಃ ಮೈನ್​ಪುರಿ ಜಿಲ್ಲೆಯವಳು.ಇಲ್ಲಿ ಮಾತ್ರವಲ್ಲದೇ, ಅಂಬೇಡ್ಕರ್​ನಗರ, ಭಾಗಪತ್​, ಅಲಿಗಢ್​, ಸಹರನ್​ಪುರ, ಹಾಗೂ ಪ್ರಯಾಗ್ ರಾಜ್​ ಜಿಲ್ಲೆಯ ವಿವಿಧ ಶಾಲೆಗಳಲ್ಲಿಯೂ ಕೆಲಸ ಮಾಡುತ್ತಿದ್ದಳು…! ಎಂದರೆ ನಂಬಲೇಬೇಕು. ಏಕೆಂದರೆ ಆ ಎಲ್ಲ ಶಾಲೆಗಳಿಂದಲೂ ಆಕೆಗೆ ವೇತನ ಪಾವತಿಯಾಗುತ್ತಿತ್ತು.
ಇದನ್ನೂ ಓದಿ;ಎರಡು ಲಕ್ಷ ಸೋಂಕಿತರಿದ್ದರೂ ಭಾರತ ಭಯಪಡಬೇಕಿಲ್ಲ; ವಿಶ್ವ ಆರೋಗ್ಯ ಸಂಸ್ಥೆಗೆ ಏಕಿಂಥ ವಿಶ್ವಾಸ…?
ಬೆಳಕಿಗೆ ಬಂದಿದ್ದು ಹೇಗೆ?:ಶಿಕ್ಷಣ ಇಲಾಖೆಯಲ್ಲಿರುವ ಶಿಕ್ಷಕರು ಹಾಗೂ ಇತರ ಸಿಬ್ಬಂದಿಯ ಮಾನವ ಸಂಪನ್ಮೂಲದ ವಿವರ ಸಂಗ್ರಹಿಸಲಾಗುತ್ತಿದೆ. ಈ ವೇಳೆ ಅನಾಮಿಕ ಶುಕ್ಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಕುರಿತು 25 ಶಾಲೆಗಳಿಂದ ದಾಖಲೆ ಸಲ್ಲಿಕೆಯಾಗಿತ್ತು. ಕೂಡಲೇ ಆಕೆಗೆ ಸಂಬಳ ಪಡೆಯುವುದನ್ನು ತಡೆಹಿಡಿದ ಅಧಿಕಾರಿಗಳು, ನೋಟಿಸ್​ ಜಾರಿಗೊಳಿಸಿದ್ದರು. ಇದಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅನಾಮಿಕ, ಸ್ನೇಹಿತರ ಮೂಲಕ ಖಾಸಗಂಜ್​ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಳು. ಈತನ ಮೂಲಕ ಅನಾಮಿಕಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ;ಅಮೆರಿಕ ತಯಾರಿಸಿದೆ 20 ಲಕ್ಷ ಡೋಸ್​ ಕರೊನಾ ಲಸಿಕೆ; ಟ್ರಂಪ್​ ಬಹಿರಂಗ
ಪ್ರಕರಣದ ಹಿನ್ನೆಲೆ:ಶಿಕ್ಷಕಿಯಾಗಿ ನೇಮಕ ಬಯಸಿ ಅನಾಮಿಕ ಹಲವು ಜಿಲ್ಲೆಗಲ್ಲಿ ಅರ್ಜಿ ಸಲ್ಲಿಸಿದ್ದಳು. ಒಂದೆಡೆ ನೇಮಕವಾದ ಬಳಿಕವೂ ಇತರ ಹುದ್ದೆಗಳನ್ನು ಆಕೆ ನಿರಾಕರಿಸಿಲ್ಲ. ಅಲ್ಲಿಯೂ ದಾಖಲೆಗಳನ್ನು ಸಲ್ಲಿಸಿ ನೇಮಕವಾಗಿದ್ದಾಳೆ. ಎಲ್ಲ ಕಡೆಗಳಿಂದಲೂ ಒಂದು ವರ್ಷದಿಂದ ವೇತನ ಗಿಟ್ಟಿಸುತ್ತಿದ್ದಳು. ಆದರೆ, ಇದು ಅಧಿಕಾರಿಗಳ ” ನೆರವು ” ಇಲ್ಲದೇ ಸಾಧ್ಯವಾಗುವ ಮಾತಲ್ಲ. ಹೀಗಾಗಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.
ಕರೊನಾ ಲಸಿಕೆಗೆ ಇನ್ನೊಂದೇ ಹೆಜ್ಜೆ…! ಜುಲೈನಲ್ಲಿ 30 ಸಾವಿರ ಜನರ ಮೇಲೆ ಅಂತಿಮ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 5 =
Remember me
