ಲಖನೌ:ಒಬ್ಬ ಶಿಕ್ಷಕ ಒಂದು ಶಾಲೆಯಲ್ಲಿ ದಿನಕ್ಕೆ ನಾಲ್ಕರಿಂದ ಐದು ಗಂಟೆ ಅಂದರೆ ನಾಲ್ಕರಿಂದ 5 period ತರಗತಿ ತೆಗೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಅವಧಿಗೆ ಪಾಠ ಮಾಡುವಂತೆ ಹೇಳಿದರೆ ಯಾವುದೇ ಶಿಕ್ಷಕರಿಗೂ ಅದು ಸಾಧ್ಯವಾಗುವುದಿಲ್ಲ. ಇದು ಜಾಗತಿಕ ಸತ್ಯ.ಆದರೆ, ಇಲ್ಲೊಬ್ಬ ಶಿಕ್ಷಕರು ಏಕಕಾಲಕ್ಕೆ 25 ಶಾಲೆಗಳಲ್ಲಿ ನಿರಂತರವಾಗಿ ಬೋಧಿಸಿ, ಒಂದು ವರ್ಷದ ಅವಧಿಯಲ್ಲಿ 1 ಕೋಟಿ ರೂ.ಗೂ ಹೆಚ್ಚಿನ ವೇತನ ಪಡೆದುಕೊಂಡಿದ್ದಾರೆ! ಗಿನ್ನೆಸ್​ ದಾಖಲೆಗೆ ಅರ್ಹವಾದ ಇಂಥ ಚಮತ್ಕಾರವನ್ನು ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ:ಕಳ್ಳತನ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ​ತಗೋಬೇಕಂತೆ.. ವಿದ್ಯಾರ್ಥಿಗಳಿಗೆ ಪ್ರೊಫೆಸರ್​ ವಾರ್ನಿಂಗ್!
ಮೂಲ ಶಿಕ್ಷಣ ಕಾರ್ಯಕ್ರಮದಡಿ ಉತ್ತರಪ್ರದೇಶದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಶಿಕ್ಷಕಿಯಾಗಿರುವ ಅನಾಮಿಕಾ ಶುಕ್ಲಾ ಇಂಥ ಚಮತ್ಕಾರ ಮಾಡಿ ತೋರಿಸಿದವರಾಗಿದ್ದಾರೆ!ಕೆಜಿಬಿವಿಯಲ್ಲಿ ಪೂರ್ಣಕಾಲಿಕ ಶಿಕ್ಷಕಿಯಾಗಿರುವ ಅನಾಮಿಕಾ ಶುಕ್ಲಾ ಅಮೇಠಿ, ಅಂಬೇಡ್ಕರ್​ನಗರ, ರಾಯ್​ಬರೇಲಿ, ಪ್ರಯಾಗ್​ರಾಜ್​, ಆಲಿಗಢ ಮತ್ತಿತರ ಜಿಲ್ಲೆಗಳು ಸೇರಿ ಒಟ್ಟು 25 ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ! ಆ ಶಾಲೆಗಳಲ್ಲಿ ಕೂಡ ಇವರು ವೇತನವನ್ನೂ ಪಡೆದುಕೊಳ್ಳುತ್ತಿದ್ದಾರೆ!
ಇದನ್ನೂ ಓದಿ:ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ
ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುತ್ತೇನೆ ಎಂದರೂ ವಿವಿಧ ಜಿಲ್ಲೆಗಳ ಶಾಲೆಗಳಿಗೆ ತೆರಳಿ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅನಾಮಿಕಾ ಶುಕ್ಲಾ ಅವರಿಂದ ಇಂಥ ಚಮತ್ಕಾರ ಸಾಧ್ಯವಾಗಿದ್ದಾದರೂ ಹೇಗೆ?ಆಗಿದ್ದೇನೆಂದರೆ, ಅನಾಮಿಕಾ ಶುಕ್ಲಾ ಅವರು ಕೆಜಿಬಿವಿ ಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ನೇಮಕಾತಿ ಸಂದರ್ಭದಲ್ಲಿ ಅವರು ಸಲ್ಲಿಸಿದ್ದ ದಾಖಲೆಗಳು ನಾಲ್ಕು ಜಿಲ್ಲೆಗಳ 25 ಶಾಲೆಗಳಿಗೂ ಸಲ್ಲಿಸಲ್ಪಟ್ಟಿವೆ. ಹಾಗಾಗಿ, ಅವರನ್ನು ಅಲ್ಲೆಲ್ಲ ನೇಮಕಗೊಂಡಿದ್ದಾರೆ. ಅವರ ಹಾಜರಾತಿಯನ್ನೂ ಪರಿಶೀಲಿಸದೆ ಅಧಿಕಾರಿಗಳು ಅನಾಮಿಕಾ ಸಲ್ಲಿಸಿದ್ದ ಬ್ಯಾಂಕ್​ ಖಾತೆಗೆ ಅವರ ವೇತನವನ್ನೂ ನೇರವಾಗಿ ವರ್ಗಾಯಿಸುತ್ತಲೇ ಬಂದಿದ್ದಾರೆ. 25 ಶಾಲೆಗಳಿಂದ ಪ್ರತಿ ಶಾಲೆಗೆ 5 ಲಕ್ಷ ರೂ.ನಂತೆ ಇದುವರೆಗೆ ಅವರ ಬ್ಯಾಂಕ್​ ಖಾತೆಗೆ 1.25 ಕೋಟಿ ರೂ. ಹಣ ಸಂದಾಯವಾಗಿದೆ!
ಇದನ್ನೂ ಓದಿ:ಇನ್ಮುಂದೆ ನರೇಗಾದಡಿ ಸಿಗಲಿದೆ 150 ದಿನ ಕೆಲಸ.. ಕೂಲಿದರ ಹೆಚ್ಚಳ ಸಾಧ್ಯತೆ
ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಅನಾಮಿಕಾ ಶುಕ್ಲಾ ಅವರ ಚಮತ್ಕಾರದ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಇದು ಉತ್ತರ ಪ್ರದೇಶದ ಶಿಕ್ಷಣ ಸಚಿವ ಡಾ. ಸತೀಸ್​ ದ್ವಿವೇದಿ ಅವರ ಗಮನಕ್ಕೆ ಬರಲು ತಡವಾಗಲಿಲ್ಲ. ತಕ್ಷಣವೇ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಅಷ್ಟರಲ್ಲೇ ಅನಾಮಿಕಾ ಶುಕ್ಲಾ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.ಅನಾಮಿಕಾ ಶುಕ್ಲಾ ಮೂಲತಃ ಮೈನ್​ಪುರಿ ಜಿಲ್ಲೆಯವರು ಎನ್ನಲಾಗಿದೆ. ಇದೀಗ ಅವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
12 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಮ್ಮ ಸಮೀಪದಲ್ಲೇ ಪರೀಕ್ಷೆ ಕೇಂದ್ರ ಹಂಚಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 3 =
Remember me
