ಲಖನೌ:ಉತ್ತರಪ್ರದೇಶದ ಲಾಖಿಂಪುರ್​ ಖೇಲಿಯಲ್ಲಿ ನಡೆದ ಪ್ರತಿಭಟನಾನಿರತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಎಂಟು ಜನರು ಸಾವಪ್ಪಿದ್ದಾರೆ. ಈ ಘಟನೆಗೆ ಎರಡೂ ಕಡೆಗಳಿಂದ ಬೇರೆ ಬೇರೆ ಚಿತ್ರಣಗಳನ್ನು ನೀಡಲಾಗುತ್ತಿದ್ದು, ವಾಸ್ತವಿಕವಾಗಿ ಅಲ್ಲಿ ನಡೆದದ್ದೇನು ಎಂಬ ಸತ್ಯಾಂಶ ಇನ್ನೂ ಹೊರಬೀಳಬೇಕಿದೆ.
ಹೀಗಿರುವಾಗ, ರೈತರ ಮೇಲೆ ಕಾರನ್ನು ಚಲಾಯಿಸಿದರೆಂದು ಆರೋಪಿಸಲಾಗುತ್ತಿರುವ ಕೇಂದ್ರ ಸಚಿವ ಅಜಯ್​ ಮಿಶ್ರ ಅವರ ಮಗ ಆಶಿಶ್​ ಮಿಶ್ರ, ತಾವು ಘಟನಾ ಸ್ಥಳದಲ್ಲಿ ಇರಲೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇಂಡಿಯ ಟುಡೇಗೆ ನೀಡಿರುವ ಸಂದರ್ಶನದಲ್ಲಿ, ತಾವು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬನ್​ಬೀರ್​ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿದ್ದುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ತಿಂಗಳೊಳಗೆ ಮೇಕೆದಾಟು ಕೆಲಸ ಆರಂಭಿಸಿ: ಬೊಮ್ಮಾಯಿ ಸರ್ಕಾರಕ್ಕೆ ಡಿಕೆಶಿ ಗಡುವು
ಅವರ ಕಾನ್ವಾಯ್​ ಘಟನಾ ಸ್ಥಳದ ಮೂಲಕ ಉಪಮುಖ್ಯಮಂತ್ರಿ ಕೇಶವ್​ ಮೌರ್ಯ ಅವರನ್ನು ಕರೆದುತರಲು ಹೋಗುತ್ತಿತ್ತು. ಆಗ ಪ್ರತಿಭಟನಾನಿರತರಾಗಿದ್ದ ‘ತಮ್ಮನ್ನು ತಾವೇ ರೈತರು ಎಂದು ಕರೆದುಕೊಳ್ಳುವ ಜನರು’ ಅವರ ಕಾರಿನ ಚಾಲಕ ಹರಿಓಮ್​ ಮಿಶ್ರಗೆ ಕಲ್ಲೆಸೆದರು. ತಲೆಗೆ ಪೆಟ್ಟು ಬಿದ್ದು ಸಮತೋಲನ ತಪ್ಪಿದ್ದರಿಂದ, ಆತ ಕಾರನ್ನು ಒಂದು ಮೂಲೆಗೆ ಓಡಿಸಿದರು. ಅದರಿಂದಾಗಿ ಕೆಲವು ಪ್ರತಿಭಟನಾಕಾರರ ಮೇಲೆ ಕಾರು ಚಲಿಸಿ ಒಬ್ಬ ರೈತ ಮುಖಂಡರೂ ಸಾವಪ್ಪಿದರು ಎಂದು ಆಶಿಶ್​ ಮಿಶ್ರ ಹೇಳಿದ್ದಾರೆ.
“ಆಗ ಪ್ರತಿಭಟನಾಕಾರರು ಚಾಲಕನನ್ನು ಹೊರಗೆಳೆದು ಕೋಲುಗಳಿಂದ ಥಳಿಸಿ ಸಾಯಿಸಿದರು. ನಮ್ಮ ಇನ್ನೂ ನಾಲ್ಕೈದು ಜನರು ಸತ್ತಿದ್ದಾರೆ. ಮೂರ್ನಾಕು ಜನ ಕಾಣೆಯಾಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಇದೆ” ಎಂದಿರುವ ಆಶಿಶ್​ ಮಿಶ್ರ, “ಅವರು ನನ್ನ ಕಾರನ್ನು ಸುಟ್ಟು ಹಾಕಿದ್ದಾರೆ. ನಾನು ಅಲ್ಲಿದ್ದಿದ್ದರೆ ನಿಮ್ಮ ಮುಂದೆ ಸುರಕ್ಷಿತವಾಗಿ ನಿಂತಿರುತ್ತಿದ್ದೆನಾ?” ಎಂದು ಸಂದರ್ಶಕರನ್ನು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್)
‘ದೇಶದಲ್ಲಿರುವುದು ನೀಚ ರಾವಣ ರಾಜ್ಯ’; ಪ್ರಿಯಾಂಕ ಗಾಂಧಿ ಬಂಧನವನ್ನ ಖಂಡಿಸಿದ ಡಿಕೆಶಿ

ಪ್ಯಾಂಡೋರಾ ಪೇಪರ್ಸ್​ ವರದಿಯಲ್ಲಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್​ ಹೆಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fifteen =
Remember me
