ಲಖನೌ:ಸ್ಥಳೀಯ ಕೆರೆಯೊಂದರಲ್ಲಿ ಮೊಸಳೆ ಇರುವುದನ್ನು ಪತ್ತೆ ಮಾಡಿ ಗ್ರಾಮದ ಜನರಿಗೆ ಎಚ್ಚರಿಕೆ ನೀಡಿದ ಗ್ರಾಮಸ್ಥರು ತದನಂತರದಲ್ಲಿ ಮೊಸಳೆಯನ್ನು ಹಿಡಿದು ಒತ್ತೆ ಇರಿಸಿಕೊಂಡು ಬಿಡುಗಡೆಗಾಗಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ಅರಣ್ಯ ಮೀಸಲು ಏರಿಯಾದಲ್ಲಿದ್ದ ಸುಮಾರು 8 ಅಡಿ ಉದ್ದದ ಮೊಸಳೆಯು ಮಂಗಳವಾರ ಸುರಿದ ಮಾನ್ಸೂನ್​ ಮಳೆ ರಭಸಕ್ಕೆ ಪ್ರವಾಹ ಉಂಟಾಗಿ ಅದರಲ್ಲಿ ಕೊಚ್ಚಿಕೊಂಡು ಬಂದು ಪಕ್ಕದ ಮಿದಾನಿಯಾ ಗ್ರಾಮದ ಕೆರೆಯೊಂದರಲ್ಲಿ ಸೇರಿಕೊಂಡಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ದುಧ್ವಾ ಹುಲಿ ಸಂರಕ್ಷಣಾ ಸುತ್ತಲೂ ಇರುವ ಬಫರ್​ ಝೋನ್​ನ ಉಸ್ತುವಾರಿ ಅಧಿಕಾರಿ ಅನಿಲ್​ ಪಟೇಲ್​ ಮಾತನಾಡಿ, ಗ್ರಾಮಸ್ಥರು ಮೊಸಳೆಯನ್ನು ಹಿಡಿದುಕೊಂಡು ಅದನ್ನು ಬಿಡುವುದಕ್ಕಾಗಿ 50 ಸಾವಿರ ರೂ.ಗೆ ಬೇಡಿ ಇಡುತ್ತಿದ್ದಾರೆಂದು ಹೇಳಿದ್ದಾರೆ.
ಇದನ್ನೂ ಓದಿ:ಕರೊನಾ ಸೋಂಕಿತರಿಗೆ ಗುಂಡಿಕ್ಕಲು ಆದೇಶ ನೀಡಿದೆ ಈ ಸರ್ವಾಧಿಕಾರಿ ರಾಷ್ಟ್ರ!
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಗ್ರಾಮಸ್ಥರಿಗೆ ಮನದಟ್ಟು ಮಾಡಲು 1 ಗಂಟೆಗೂ ಅಧಿಕ ಕಾಲ ಚರ್ಚಿಸಲಾಯಿತು. ಮೊಸಳೆಯನ್ನು ಬಿಡದೇ ಹೋದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಏಳು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕುತ್ತದೆ ಎಂದು ಎಚ್ಚರಿಕೆ ನೀಡಲಾಯಿತು. ಆ ಬಳಿಕ ಮೊಸಳೆಯನ್ನು ಬಿಡುಗಡೆ ಮಾಡಿದರು. ಅದೇ ದಿನ ಮೊಸಳೆಯನ್ನು ಗಂಗಾ ನದಿಗೆ ಬಿಡಲಾಯಿತು ಎಂದು ಅನಿಲ್​ ಪಟೇಲ್​ ಮಾಹಿತಿ ನೀಡಿದರು.
“ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆ ಸಂರಕ್ಷಿತ ಪ್ರಾಣಿ ಎಂದು ಅವರಿಗೆ ತಿಳಿದಿರಲಿಲ್ಲ. ವನ್ಯಜೀವಿಗಳ ಬಗ್ಗೆ ಹೆಚ್ಚಿನ ಜನರಿಗೆ ಶಿಕ್ಷಣ ನೀಡುವುದು ನಮಗೆ ಮುಖ್ಯವಾಗಿದೆ “ಎಂದು ಅವರು ಹೇಳಿದರು.(ಏಜೆನ್ಸೀಸ್​)
ಊಟ ಮಾಡುವಾಗ ಮೊಬೈಲ್​ ಬಳಸಲು ಕಿರಿಕಿರಿಯೇ? ನಿಮಗಾಗಿ ಬಂದಿದೆ ನೋಡಿ ಆಧುನಿಕ ತಟ್ಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
