ಬಿಹಾರ:ಇಬ್ಬರು ಮಹಿಳೆಯರು ಸೇರಿ ಪತಿಯನ್ನು ಕೊಂದು ದೇಹವನ್ನು ಕೊಚ್ಚಿ ಎಸೆದಿದ್ದಾರೆ.  ಬಾಸೊಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಪುರ ಗ್ರಾಮದಲ್ಲಿ ಜೂನ್ 27 ರಂದು ಈ ಘಟನೆ ನಡೆದಿದೆ.
ರಾಮಪ್ರಸಾದ್ ಯಾದವ್ ಅಲಿಯಾಸ್ ಮಲಿಕ್ ಯಾದವ್ ಮೃತ. ಈ ಕೊಲೆ ಕುರಿತಾಗಿ ತನಿಖೆ ಕೈಗೊಂಡಾಗ ಸಿಕ್ಕಿ ಬಿದ್ದಿದ್ದೆ ಈತನ ಇಬ್ಬರು ಮುದ್ದಿನ ಪತ್ನಿಯರು. ಯಾಕೆ ಈ ಕೊಲೆ ನಡೆದಿದ್ದು ಎನ್ನುವ ರೋಚಕ ಸಂಗತಿಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.ಮೃತ ಹಾಗೂ ಆತನ ಕುಟುಂಬದ ಸದಸ್ಯರ ಮೊಬೈಲ್ ಪರಿಶೀಲನೆ ನಡೆಸಲಾಗಿದ್ದು, ಕೊಲೆಯಲ್ಲಿ ಭಾಗಿಯಾಗಿರುವ ಹಂತಕನ ಬಗ್ಗೆ ಪೊಲೀಸರಿಗೆ ಒಂದೊಂದೇ ಸುಳಿವು ಸಿಕ್ಕಿದೆ.
ಮಾಹಿತಿ ನೀಡಿದ ಜಯನಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ ವಿಪ್ಲವ್ ಕುಮಾರ್, ರಾಮಪ್ರಸಾದ್ ಯಾದವ್ ಅಲಿಯಾಸ್ ಮಲಿಕ್ ಯಾದವ್​​ ಇಬ್ಬರು ಪತ್ನಿಯರು, ಸೋದರ ಮಾವ ಹಾಗೂ ಮತ್ತೊಬ್ಬನನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಬಂಧಿತ ಪತ್ನಿಯರಾದ ಮಂಟೂತ್ ದೇವಿ ಮತ್ತು ರಾಮಕುಮಾರಿ ದೇವಿ, ಬಬ್ಲು ಯಾದವ್, ಸರೋಜ್ ಕುಮಾರ್ ಮಂಡಲ್ ಮತ್ತು ಸೂರದಾಸ್ ಅವರನ್ನು ಬಂಧಿಸಲಾಗಿದೆ.
ರಾಮಪ್ರಸಾದ್ ಯಾದವ್ ಅಲಿಯಾಸ್ ಮಲಿಕ್ ಯಾದವ್ ಕ್ರಿಮಿನಲ್ ಸ್ವಭಾವದವನು. ಪ್ರತಿದಿನ ಇಬ್ಬರು ಹೆಂಡತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದರ ಜತೆ ಕಿರುಕುಳ ನೀಡುತ್ತಿದ್ದನು. ಈತನ ಕ್ರೌರ್ಯಕ್ಕೆ ಬೇಸತ್ತು ಪತ್ನಿಯರಿಬ್ಬರೂ ಆತ ಕುಡಿದು ಮನೆಗೆ ಬಂದಾಗ ಕರೆದು ಗುಂಡು ಹಾರಿಸಿ ಆತನನ್ನು ಕೊಲೆ ಮಾಡಿದ್ದಾರೆ.
ಬಂಧಿತ ಅಪರಾಧಿಗಳಿಂದ ಒಂದು ಗನ್, ಎರಡು ಪಿಸ್ತೂಲ್ ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮಪ್ರಸಾದ್ ಯಾದವ್ ಅಲಿಯಾಸ್ ಮಲಿಕ್ ಯಾದವ್ ಎಂಬಾತನನ್ನು ಗುಂಡಿಕ್ಕಿ ಕೊಂದು ಆತನ ದೇಹವನ್ನು ಕತ್ತರಿಸಿ ಬಿಸಾಡಲಾಗಿದೆ. ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
