ಬದೌನ್:19 ವರ್ಷದ ಸೊಸೆಯನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸಲು 40 ವರ್ಷದ ಮಹಿಳೆಯೊಬ್ಬರು ಪತಿಯ ಕತ್ತು ಸೀಳಿದ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ.ಇದನ್ನೂ ಓದಿ:ಕಲ್ಯಾಣ ರಥ ಐಷಾರಾಮಿ ಸ್ಲೀಪರ್ ಬಸ್ ಸೇವೆ: ಕೆಕೆಆರ್ ಟಿಸಿಗೆ ಪ್ರಥಮ ಬಾರಿಗೆ ವೋಲ್ವೋ ಸೇರ್ಪಡೆ
ಆಟಿಕೆ ಮಾರಾಟಗಾರ ತೇಜೇಂದ್ರ ಸಿಂಗ್ (43) ಮೃತ ವ್ಯಕ್ತಿಯಾಗಿದ್ದು, ಆತನ ಹೆಂಡತಿ ಮಿಥಿಲೇಶ್​ ದೇವಿಯೇ ಹತ್ಯೆಗೈದ ಆರೋಪಿಯಾಗಿದ್ದಾಳೆ. ಮನೆ ಹೊರಗೆ ಮಲಗಿದ್ದ ವೇಳೆ ಈ ಘಟನೆ ನಡೆದಿದ್ದು, ಯಾರೋ ಅಪರಿಚಿತರು ಈ ಕೊಲೆ ಮಾಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ನಂತರ ವಿಷಯ ಬೆಳಕಿಗೆ ಬಂದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
ತನಿಖೆ ವೇಳೆ ಸತ್ಯ ಬಯಲು:ಆಗಸ್ಟ್​ 14ರ ರಾತ್ರಿ ಈ ಘಟನೆ ನಡೆದಿದ್ದು, ತನಿಖೆಯ ಸಂದರ್ಭದಲ್ಲಿ, ತೇಜೇಂದ್ರನ ಪತ್ನಿ ಮಿಥಿಲೇಶ್ ದೇವಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಳು. ಈ ವೇಳೆ ಅನುಮಾನಗೊಂಡು ಪೊಲೀಸರು, ಆಕೆಯನ್ನು ತೀವ್ರ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾಗಿರುವ ಮಿಥಿಲೇಶ್, ಪತಿ ಆಗಾಗ ತನಗೆ ಥಳಿಸುತ್ತಿದ್ದು, ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಮನವೊಲಿಸಲು ಒತ್ತಡ ಹೇರುತ್ತಿದ್ದ’ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.ಇದನ್ನೂ ಓದಿ:ಡಾಲಿ ತಾರಾ ಹುಟ್ಟುಹಬ್ಬ ; ಯಶ್​, ನಿಖಿಲ್​, ರಕ್ಷಿತ್​, ವಿಜಿ, ಯೋಗಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿಇದರಿಂದ ಬೇಸತ್ತಿದ್ದ ಆಕೆ ತನ್ನ ಗಂಡನನ್ನು ತೊಡೆದುಹಾಕಲು ಅವಕಾಶವನ್ನು ಹುಡುಕುತ್ತಿದ್ದು, ಆ ದಿನ ರಾತ್ರಿ ಆತ ಕುಡಿದ ಅಮಲಿನಲ್ಲಿ ಮನೆಯ ಹೊರಗೆ ಮಲಗಿದ್ದನು. ಆದರೆ ಕೆಲ ಹೊತ್ತಿನ ಬಳಿಕ ಇದ್ದಕ್ಕಿದ್ದಂತೆ ಸೊಸೆ ಕೂಗಾಟ ಕೇಳಲಾರಂಭಿಸಿದೆ. ಈ ವೇಳೆ ಆರೋಪಿಯು ಕೋಣೆಗೆ ಹೋಗಿ ನೋಡಿದಾಗ ಆತ ಆಕೆಯ ಮೇಲೆ ಕೃತ್ಯಕ್ಕೆ ಪ್ರಯತ್ನಿಸುತ್ತಿದ್ದ. ಈ ವೇಳೆ ಆರೋಪಿಯು ಕೂಡಲೇ ಸೊಸೆ ಮಾನ ಮತ್ತು ಪ್ರಾಣವನ್ನು ಉಳಿಸುವ ಸಲುವಾಗಿ ಆತನನ್ನು ಹೊರಗೆ ನೂಕಿದ್ದು, ಆ ಬಳಿಕ ಗಂಡನ ಕತ್ತು ಸೀಳಲು ಕುಡುಗೋಲು ಬಳಸಿದ್ದಾಗಿ ಒಪ್ಪಿಕೊಂಡಿದ್ದಾಳೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
