ಲಖನೌ:ಬರೋಬ್ಬರಿ ಹತ್ತು ವರ್ಷಗಳ ಬಳಿಕ ಗಂಡ ಮರಳಿ ಸಿಕ್ಕಿದನೆಂಬ ಭಾರೀ ಖುಷಿಯಲ್ಲಿದ್ದ ಮಹಿಳೆಯೊಬ್ಬಳಿಗೆ ಮರುಘಳಿಗೆಯಲ್ಲೇ ಭ್ರಮನಿರಸನವಾಗಿದೆ. ತಾನು ಕರೆದು ತಂದಿದ್ದು ತನ್ನ ಗಂಡನಲ್ಲ ಬೇರೆ ಯಾರೋ ಅಪರಿಚಿತನನ್ನು ಎಂದು ತಿಳಿದಾಗ ಆ ಮಹಿಳೆಯು ಅಕ್ಷರಶಃ ದುಃಖಿತಳಾದಳು.
ಇಂಥದ್ದೊಂದು ವಿಚಿತ್ರ ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಸುಖ್​ಪುರ ಪ್ರದೇಶದ ದೇವ್​ಕಳಿ ಗ್ರಾಮದ ನಿವಾಸಿಯಾಗಿರುವ ಮೋತಿಚಂದ್ ವರ್ಮಾ (44) ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಅಂದಿನಿಂದ ಪತಿಗಾಗಿ ಜಾನಕಿದೇವಿ ಎಂಬಾಕೆ ಎದುರು ನೋಡುತ್ತಿದ್ದಳು.
ಇದನ್ನೂ ಓದಿ:ಅಂಜುಗೆ ಬಂಪರ್​ ಗಿಫ್ಟ್​ ಕೊಟ್ಟ ಪಾಕ್​ ಉದ್ಯಮಿ: ಉಡುಗೊರೆ ಹಿಂದಿರುವ ಅಸಲಿ ಕಾರಣವೇ ಬೇರೆ!
ಶುಕ್ರವಾರ (ಜು.28) ವೈದ್ಯರನ್ನು ನೋಡಲೆಂದು ಬಲ್ಲಿಯಾದಲ್ಲಿರುವ ಆಸ್ಪತ್ರೆಗೆ ಬಂದಿದ್ದ ಜಾನಕಿದೇವಿಗೆ ಅಲ್ಲಿನ ಗೇಟ್ ಬಳಿ ಉದ್ದ ಕೆದರಿದ ಕೂದಲು, ಗಡ್ಡ ಬಿಟ್ಟಿರುವ ವ್ಯಕ್ತಿಯೊಬ್ಬ ಕೂತಿರುವುದು ಕಾಣಿಸಿತ್ತು. ಬಳಿಕ ಹತ್ತಿರ ಹೋಗಿ ನೋಡಿದಾಗ ಆತ ತನ್ನ ಪತಿ ಅಂದುಕೊಂಡು ಆತನ ಬಳಿ ಕುಳಿತು ಕೆಲಕಾಲ ಆತನನ್ನ ಸಂತೈಸಿ, ಬಳಿಕ ಮನೆಗೆ ಕರೆಕೊಂಡು ಹೋಗಿದ್ದಳು. ಇಬ್ಬರ ಪುನರ್ಮಿಲನದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ನೆಟ್ಟಿಗರ ಗಮನ ಸೆಳೆದಿತ್ತು.
In UP's Ballia, a woman was reunited with her husband who had gone missing 10 years ago. The woman claimed she bumped into her missing husband while she was on her way to hospital.pic.twitter.com/eNGrih1p52
— Piyush Rai (@Benarasiyaa)July 29, 2023

ನೀನು ಇಷ್ಟು ದಿನ ಎಲ್ಲಿದ್ದೆ? ಎಲ್ಲಿಗೆ ಹೋಗಿದ್ದೆ? ಎಂದು ಜಾನಕಿ ಆತನ ಮುಂದೆ ಕೇಳಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಜಾನಕಿ ಏನೇ ಕೇಳಿದರು ಆತ ಮಾತ್ರ ಮೌನವಾಗಿದ್ದ. ಆತನನ್ನು ತನ್ನ ಗಂಡ ಅಂದುಕೊಂಡು ಜತೆಗೆ ಕರೆದೊಯ್ದಿದ್ದಳು. ಆದರೆ, ಆತನ ದೇಹದಲ್ಲಿರುವ ಮಚ್ಚೆಯನ್ನು ನೋಡಿದಾಗ ಆತ ತನ್ನ ಪತಿ ಮೋತಿ ಚಂದ್ ಅಲ್ಲ​ ಎಂಬುದು ಖಚಿತವಾಗಿದೆ. ಇದನ್ನು ತಿಳಿದ ಜಾನಕಿ ಒಂದು ಕ್ಷಣ ಆಘಾತಕ್ಕೊಳಗಾದಳು.
ಇದನ್ನೂ ಓದಿ:ಹೆಂಡತಿ-ಮಕ್ಕಳನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ: ಕುರಾನ್ ಉಲ್ಲೇಖಿಸಿ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಇನ್ನು ಪತ್ತೆಯಾದ ವ್ಯಕ್ತಿ ಮೋತಿ ಚಂದ್​ ಅಲ್ಲ, ಆತ ರಾಹುಲ್​. ತನ್ನ ತಪ್ಪಿನ ಅರಿವಾದ ಬಳಿಕ ಜಾನಕಿ ಕ್ಷಮೆ ಕೇಳಿದಳು. ರಾಹುಲ್ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಗ್ರಾಮದ ಮುಖಂಡರು ಮತ್ತು ಕೆಲವರು ಆತನ ಗುರುತನ್ನು ಖಚಿತಪಡಿಸಿದ್ದಾರೆ. ಬಳಿಕ ಆತನನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.(ಏಜೆನ್ಸೀಸ್​)
ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!

ಬಾಲಿವುಡ್​ನ ಈ ಸಿನಿಮಾ ಇಸ್ರೇಲ್​ಗೆ ಸಿಟ್ಟು ತರಿಸಿದ್ಯಾಕೆ? 60 ಲಕ್ಷ ಜನರ ಸಾವನ್ನು ಕ್ಷುಲ್ಲಕವಾಗಿ ತೋರಿಸಿದ್ರಾ?

ಕುಡಿದ ಮತ್ತಿನಲ್ಲಿ ಕೇರಳ ರಾಜ್ಯಪಾಲರ ಬೆಂಗಾವಲು ವಾಹನಕ್ಕೆ ಡಿಕ್ಕಿ; ಇಬ್ಬರು ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
