ಉತ್ತರಪ್ರದೇಶ:ತನ್ನ ಅತ್ತೆ ಜೊತೆ ಅಸಮಾಧಾನಗೊಂಡ ಸೊಸೆ, ಮನೆ ಸದಸ್ಯರಿಗೆ ಟೀನಲ್ಲಿ ವಿಷ ಬೆರೆಸಿ ಕುಡಿಸಿರುವ ಘಟನೆ ಬಹ್ರೀಚ್ ಪ್ರದೇಶದ ಮಚಿಯಾಹಿ ಗ್ರಾಮದಲ್ಲಿ ನಡೆದಿದೆ.
ವಿಷ ಬೆರೆತ ಟೀ ಕುಡಿದ ಬಳಿಕ 18 ತಿಂಗಳ ಮಗು ಸಾವನ್ನಪ್ಪಿದ್ದು, ನಾಲ್ಕು ಜನ ಸಂಬಂಧಿಕರು ತೀವ್ರ ಅಸ್ವಸ್ಥರಾಗಿದ್ದಾರೆ. ಆರೋಪಿ ಮಹಿಳೆಯ ಮಾವ ಪಂಚಮ್ ಜೈಸ್ವಾಲ್, ಸೋದರ ಮಾವ ಜಿತೇಂದ್ರ, ಸೊಸೆ ಶಿವಾನಿ ಮತ್ತು ಸೃಷ್ಟಿ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ 18 ತಿಂಗಳ ಮಗು ಶಿವನಾಥ, ಆರೋಪಿ ಅನಿತಾಳ ಇನ್ನೊಬ್ಬ ಅತ್ತಿಗೆಯ ಮಗನಾಗಿದ್ದನು.
ಪ್ರಕರಣದ ಹಿನ್ನೆಲೆ:
ಆರೋಪಿ ಮಹಿಳೆ ಅನಿತಾ, ಕಳೆದ ವರ್ಷ ಡಿಸೆಂಬರ್ ನಲ್ಲಿ ಜೈಸ್ವಾಲ್ ಅವರ ಪುತ್ರನ ಜೊತೆ ವಿವಾಹವಾಗಿದ್ದರು. ಆದರೆ ಆಕೆಯ ಅತ್ತೆಯೊಂದಿಗೆ ಆಗಾಗ್ಗೆ ಕೆಲ ವಿಚಾರವಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅತ್ತೆ-ಮಾವರಿಂದ ಬೇರೆಯಾಗಿ ಆರೋಪಿ ಮಹಿಳೆ ಮತ್ತು ಆಕೆಯ ಗಂಡ ವಾಸಿಸುತ್ತಿದ್ದರು.
ಆದರೆ ಘಟನೆ ನಡೆಯುವ ಒಂದು ದಿನ ಮುಂಚೆ ಆರೋಪಿ ಅನಿತಾ, ಅತ್ತೆ ಮನೆಗೆ ಬಂದಿದ್ದಾಳೆ. ಈ ವೇಳೆ ಮನೆಯಲ್ಲಿ ಟೀ ಮಾಡಿ ಅದಕ್ಕೆ ತಾನು ಮುಂಚಿತವಾಗಿ ತಂದಿದ್ದ ವಿಷ ಬೆರೆಸುವ ಮೂಲಕ ಮನೆ ಸದಸ್ಯರಿಗೆ ನೀಡಿದ್ದಾಳೆ. ನಂತರ ಈ ದುರ್ಘಟನೆ ನಡೆದಿದೆ.
ಈ ಸಂಬಂಧ ಆಕೆಯ ಮಾವ ನೀಡಿರುವ ದೂರಿನ ಮೇರೆಗೆ ಅನಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
‘ಮಗಳೇ ದಯವಿಟ್ಟು ನನ್ನನ್ನು ಕ್ಷಮಿಸು’… ಮನಕಲಕುವಂತಿದೆ ತಂದೆಯ ಡೆತ್​​ನೋಟ್
ಅಫ್ಘಾನ್ ಕ್ರಿಕೆಟರ್ ಜೊತೆ ನಿಶ್ಚಿತಾರ್ಥಕ್ಕೆ ಮುಂದಾದ ನಟಿಗೆ ತಾಲಿಬಾನಿಗಳ ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
