ಅಲಿಘಢ: ವಿದೇಶಕ್ಕೆ ಹೋಗಬೇಕೆಂಬ ಉಮೆದಿನಲ್ಲಿ ಪಾಸ್​ಪೋರ್ಟ್​ ಮಾಡಿಸಿಕೊಳ್ಳಲು ಈ ಮಹಿಳೆ ಮುಂದಾಗಿದ್ದಳು. ಪಾಸ್​ಪೋರ್ಟ್​ ಅರ್ಜಿಯ ಪ್ರಕ್ರಿಯೆಯಾದ ಪೊಲೀಸ್​ ವೆರಿಫಿಕೇಶನ್​ಗಾಗಿ ಪೊಲೀಸ್​ ಸ್ಟೇಶನ್​ಗೆ ಹೋಗಿದ್ದಳು. ಪಾಸ್​ಪೋರ್ಟ್​ ಪರಿಶೀಲನೆ ಬದಲಾಗಿ ಪೊಲೀಸರು ಈಕೆಯ ಮೇಲೆ ಗುಂಡು ಹಾರಿಸಿದ್ದಾರೆ. ತಲೆಗೆ ಗುಂಡು ತಾಗಿರುವ ಈ ಮಹಿಳೆ ಈಗ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ.
ಉತ್ತರ ಪ್ರದೇಶದ ಅಲಿಘಡದ ಪೊಲೀಸ್​ ಠಾಣೆಯೊಂದಕ್ಕೆ ಪಾಸ್​ಪೋರ್ಟ್​ ವೆರಿಫಿಕೇಶನ್​ಗೆ ಈ ಮಹಿಳೆ ತೆರಳಿದಾಗ ಗುಂಡು ಹಾರಿ ಬಂದಿದೆ. ಈ ಗುಂಡು ನೇರವಾಗಿ ಮಹಿಳೆಯ ತಲೆಗೆ ಹೊಕ್ಕಿದೆ. ಗುಂಡು ಹಾರಿದ ಈ ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಈ ಪೊಲೀಸ್​ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮನೋಜ್ ಶರ್ಮಾ ಅವರೇ ಈ ಮಹಿಳೆಯ ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ.
ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಸ್ವಲ್ಪ ಹೊತ್ತು ನಿಂತಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಸ್ವಲ್ಪ ಸಮಯದ ನಂತರ, ಒಬ್ಬ ಪೊಲೀಸ್ ಅಧಿಕಾರಿ ಬಂದು ಸಬ್ ಇನ್ಸ್‌ಪೆಕ್ಟರ್‌ಗೆ ಪಿಸ್ತೂಲ್ ನೀಡಿದರು. ಪಿಸ್ತೂಲ್ ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಗುಂಡು ತಲುಲಿ ಮಹಿಳೆ ನೆಲಕ್ಕೆ ಬಿದ್ದಿದ್ದಾಳೆ. ಈ ದೃಶ್ಯಗಳೆಲ್ಲ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆಕಸ್ಮಿಕವಾಗಿ ಹಾರಿದೆ ಎನ್ನಲಾದ ಗುಂಡು ತಗುಲಿರುವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ರಪೋ ದರ ಯಥಾಸ್ಥಿತಿ ನಿರ್ಧಾರ: 21 ಸಾವಿರ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ನಿಫ್ಟಿ ಸೂಚ್ಯಂಕ

ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧಾರ: ಸಾಲ ಪಡೆದುಕೊಂಡವರಿಗೆ ಒಂದಿಷ್ಟು ನಿರಾಳತೆ

ಭಾರತದ ಆರ್ಥಿಕತೆ ಪ್ರಕಾಶನಮಾನ: ನೀವು ಲಾಭ ಪಡೆಯಲು ಇಲ್ಲಿದೆ ಯಶೋಮಾರ್ಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eleven =
Remember me
