ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂಡಿಯಾ ಹೆಸರಿ ವಿಪಕ್ಷ ಒಕ್ಕೂಟದ ವಿರುದ್ಧ ಹರಿಹಾಯ್ದಿದ್ದು, ತಮ್ಮ ಸರ್ಕಾರದ ಸಾಧನೆಗಳನ್ನು ಸದಸ್ಯರ ಮುಂದೆ ತೆರೆದಿಟ್ಟರು.
ಲೋಕಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್​, ಕಳೆದ 6 ದಶಕಗಳಿಂದ ನಾವು ಗರೀಬಿ ಹಠಾವೋ ಎಂಬ ಮಾತನ್ನು ಕೇಳುತ್ತಾ ಬಂದಿದ್ದೇವೆ. ಆದರೆ, ಏನಾದರೂ ಬದಲಾವಣೆ ಆಯಿತಾ? ನಮ್ಮ ಸರ್ಕಾರ ಆ ಕನಸ್ಸನ್ನು ನನಸು ಮಾಡುವತ್ತಾ ನಿಜವಾಗಿಯೂ ಕೆಲಸ ಮಾಡುತ್ತಿದೆ. ಈ ಸರ್ಕಾರದ ಅಡಿಯಲ್ಲಿ ಸುಧಾರಣೆ ಕಾಣುತ್ತಿದೆ ಎಂದು ಹೇಳಿದರು.
ಯುಪಿಎ ಹೆಸರಲ್ಲಿ ಯಾವುದೇ ವಿಶ್ವಾಸಾರ್ಹತೆ ಇಲ್ಲ. ಇದು ಜನರಿಗೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ನೆನಪಿಸುತ್ತದೆ. ಹೀಗಾಗಿ ವಿಪಕ್ಷಗಳು ಇಂಡಿಯಾ ಎಂದು ಮರುನಾಮಕರಣ ಮಾಡಿಕೊಂಡಿದೆ. ಅನೇಕ ದಶಕಗಳನ್ನು ಯುಪಿಎ ವ್ಯರ್ಥ ಮಾಡಿದೆ. ಆದರೆ, ಪ್ರತಿಯೊಂದು ಬಿಕ್ಕಟ್ಟು ಈಗ ಸುಧಾರಣೆಯತ್ತ ಬದಲಾಗುತ್ತಿದೆ. ಎನ್​ಡಿಎ ಅಡಿಯಲ್ಲಿ ಹೆಚ್ಚು ಅಭಿವೃದ್ಧಿ ಮತ್ತು ಕಡಿಮೆ ಹಣದುಬ್ಬರನ್ನು ಕಾಣುತ್ತಿದ್ದೇವೆ ಎಂದು ವಿತ್ತ ಸಚಿವೆ ತಿಳಿಸಿದರು.
ಇದನ್ನೂ ಓದಿ:ಟಾಪ್​ಲೆಸ್ ಆಗಿ ವಿಚಿತ್ರ ಭಂಗಿಯಲ್ಲಿ ಪೋಸ್​ ನೀಡಲು ಆದೇಶ: ಮಿಸ್​ ಯೂನಿವರ್ಸ್​ ಸ್ಪರ್ಧಿಗಳ ಗಂಭೀರ ಆರೋಪ
ಇದೊಂದು (ಇಂಡಿಯಾ ಒಕ್ಕೂಟ) ವಿಚಿತ್ರ ಮೈತ್ರಿಕೂಟ. ಪಂಜಾಬ್​ನಲ್ಲಿ ಕಾಂಗ್ರೆಸ್​ ಮತ್ತು ಎಎಪಿ ಕಚ್ಚಾಡುತ್ತಿವೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಮತ್ತು ಕಾಂಗ್ರೆಸ್​ ಕಿತ್ತಾಡುತ್ತಿವೆ. ಕೇರಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್​ ಬಡಿದಾಡಿಕೊಳ್ಳುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್​ ಕಾನ್ಫರೆನ್ಸ್​ ಮತ್ತು ಪಿಡಿಪಿ ಹೊಡೆದಾಡಿಕೊಳ್ಳುತ್ತಿವೆ ಎನ್ನುವ ಮೂಲಕ ಮೈತ್ರಿಕೂಟವನ್ನು ಕಿಚಾಯಿಸಿದರು.
ಯುಪಿಐ (ಪಾವತಿ ವ್ಯವಸ್ಥೆ) ಜಾಗತಿಕವಾಗಿ ಪ್ರಶಂಸೆಗೆ ಭಾಜನವಾಗಿದೆ. ಫ್ರಾನ್ಸ್, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ ಮತ್ತು ಯುಕೆಯಲ್ಲಿ ಸಹಭಾಗಿತ್ವವನ್ನು ನಿರ್ಮಿಸಲು ನಾವು ಈ ತಂತ್ರಜ್ಞಾನವನ್ನು ಬಳಸಬಹುದು. ಐಎಂಎಫ್ ಕೂಡ ತನ್ನ ಹೇಳಿಕೆಯಲ್ಲಿ ಭಾರತವು ಯುಪಿಐನೊಂದಿಗೆ ಜಾಗತಿಕ ಗುಣಮಟ್ಟವನ್ನು ಹೊಂದಿಸಿದೆ ಎಂದು ಹೇಳಿದೆ. ನಮ್ಮ ಪಾಲಿಸಿಗಳು ಸ್ಟಾರ್ಟಪ್​ಗಳಿಗೆ ಉತ್ತಮ ಬೆಂಬಲವನ್ನು ನೀಡಿವೆ. ನಾವೀಗ ಆಮದುದಾರರಿಂದ ರಫ್ತುದಾರ ರಾಷ್ಟ್ರವಾಗಿ ಬದಲಾಗಿದ್ದೇವೆ. ಸಾರ್ವಜನಿಕ ವಲಯದ ಬ್ಯಾಂಕುಗಳು 1 ಲಕ್ಷ ಕೋಟಿ ರೂಗೆ ಅಧಿಕ ಲಾಭವನ್ನು ಪಡೆದಿವೆ ಎಂದು ಸರ್ಕಾರದ ಸಾಧನೆಯನ್ನು ವಿವರಿಸಿದರು.(ಏಜೆನ್ಸೀಸ್​)
ಪೇಸಿಎಸ್ ಅಭಿಯಾನ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಂಧನ: ನಾಗಮಂಗಲದಲ್ಲಿ ಸಚಿವರ ಪರ ಧರಣಿ

RBI MPC: ಗುಡ್ ನ್ಯೂಸ್…ಸಾಲ ಮತ್ತು ಇಎಂಐ ಹೊರೆ ಹೆಚ್ಚಾಗುವುದಿಲ್ಲ, ರೆಪೋ ದರ ಮೂರನೇ ಬಾರಿಗೆ ಸ್ಥಿರ; ಶಕ್ತಿಕಾಂತ್ ದಾಸ್ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
