ಅಯೋಧ್ಯೆ:ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಅಯೋಧ್ಯೆ ರಾಮ ಮಂದಿರಕ್ಕೆ ಅಪೋಲೋ ವೈದ್ಯಕೀಯ ಸಂಸ್ಥೆಗಳ ಉಪಾಧ್ಯಕ್ಷೆ, ಮೆಗಾಸ್ಟಾರ್​ ಚಿರಂಜೀವಿ ಸೊಸೆ ಉಪಾಸನಾ ರಾಮ್ ಚರಣ್ ಮತ್ತು ಕುಟುಂಬದವರು ಭೇಟಿ ನೀಡಿದ್ದರು.
ಇದನ್ನೂ ಓದಿ:ಅಗ್ನಿ-5 ಕ್ಷಿಪಣಿ ಮೊದಲ ಹಾರಾಟ..ಮಿಷನ್ ದಿವ್ಯಾಸ್ತ್ರಕ್ಕಾಗಿ ಪ್ರಧಾನಿ ಮೋದಿ ಡಿಆರ್​ಡಿಒಗೆ ಶ್ಲಾಘನೆ
ಅಜ್ಜ ಪ್ರತಾಪ್ ಸಿ. ರೆಡ್ಡಿ, ಅಜ್ಜಿ ಮತ್ತು ತಾಯಿ ಅಯೋಧ್ಯೆಗೆ ಆಗಮಿಸಿದ್ದು, ಬಾಲರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಉಪಾಸನಾ ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಏತನ್ಮಧ್ಯೆ, ಅಯೋಧ್ಯೆ ರಾಮಮಂದಿರದಲ್ಲಿ ಜನವರಿ 26 ರಂದು ಪ್ರಾರಂಭವಾಗಿ 48 ದಿನಗಳ ಕಾಲ ನಡೆಯುತ್ತಿರುವ ರಾಮ್ ರಾಗ್ ಸೇವೆ ಮಾರ್ಚ್ 10ಕ್ಕೆ ಕೊನೆಗೊಳ್ಳಲಿದ್ದು, ಅಪೋಲೋ ಆಸ್ಪತ್ರೆಗಳ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ತಮ್ಮ ಮೊಮ್ಮಗಳು ಉಪಾಸನಾ ಅವರನ್ನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು. ಅವರು ಇತರ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದು, ರಾಮ ಮಂದಿರದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ರಾಮ್ ರಾಗ್ ಸೇವಾ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಗಣ್ಯರು, ನಟರು ಪಾಲ್ಗೊಂಡಿದ್ದರು. ಪ್ರಮುಖವಾಗಿ ವೈಜಯಂತಿಮಾಲಾ, ಹೇಮಾ ಮಾಲಿನಿ, ಅನುರಾಧಾ ಪೌಡ್ವಾಲ್, ಸುರೇಶ್ ವಾಡ್ಕರ್ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಗಳ ನಂತರ ಉಪಾಸನಾ ಕುಟುಂಬದ ಸದಸ್ಯರು ಬಾಲರಾಮ ದೇವರಿಗೆ ಪೂಜೆ ಸಲ್ಲಿಸಿದರು. ತದನಂತರ ಆ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಲ್ಲಿನ ಅರ್ಚಕರೊಂದಿಗೆ ಪೋಸ್ಟ್ ಮಾಡುವ ಮೂಲಕ ‘ದೇವರ ಸೇವೆಯಲ್ಲಿ ನನ್ನ ಹೃದಯ ತುಂಬಿಬಂದಿದೆ’ ಎಂದು ಉಪಾಸನಾ ಟ್ಯಾಗ್​ ಹಾಕಿದ್ದಾರೆ.
ಈ ಮಧ್ಯೆ, ಅಯೋಧ್ಯೆಯ ಸುತ್ತಮುತ್ತಲಿನ ಜನರಿಗೆ ಕ್ರಿಟಿಕಲ್ ಕೇರ್ ಸೇವೆಗಳನ್ನು ಒದಗಿಸಲು, ಅತ್ಯಾಧುನಿಕ ತುರ್ತು ಆರೈಕೆ ಕೇಂದ್ರವನ್ನು ತೆರೆಯುವುದಅಗಿ ಡಾ. ಪ್ರತಾಪೆಡ್ಡಿ ಮತ್ತು ಉಪಾಸನಾ ಪ್ರಕಟಿಸಿದರು.
ಶುಗರ್​ಗೆ ಇನ್ನು ಗುಡ್​ಬೈ:ಸಿಎಂ ಪೋಟೋದೊಂದಿಗೆ ​ಫೇಕ್ ವೀಡಿಯೋ ವೈರಲ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 + seven =
Remember me
