ನವದೆಹಲಿ:ಉತ್ತರಪ್ರದೇಶದಲ್ಲಿ ಏಕಕಾಲಕ್ಕೆ 25 ಶಾಲೆಗಳಲ್ಲಿ ಕೆಲಸ ಮಾಡುತ್ತ ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ವೇತನ ಗಳಿಸಿರುವ ವಿಜ್ಞಾನ ಶಿಕ್ಷಕಿಯ ವಂಚನೆ ಪ್ರಕರಣ ದಿನೇದಿನೆ ಹೊಸ ತಿರುವು ಪಡೆಯುತ್ತಿದೆ.
ಸದ್ಯ ಖಾಸ್​ಗಂಜ್​ ಪೊಲೀಸರು ಒಬ್ಬಳನ್ನು ಬಂಧಿಸಿದ್ದು, ಆಕೆಯ ಹೆಸರು ಪ್ರಿಯಾ ಸಿಂಗ್​ ಎಂದಾಗಿದೆ. ಅನಾಮಿಕಾ ಶುಕ್ಲಾ ಹೆಸರಿನಲ್ಲಿ ತಾನು ಕೆಲಸ ಮಾಡುತ್ತಿದ್ದುದಾಗಿ ಆಕೆ ಹೇಳಿಕೊಂಡಿದ್ದಾಳೆ. ಇದರರ್ಥ ನಿಜವಾದ ಅನಾಮಿಕಾ ಶುಕ್ಲಾ ಇನ್ನೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ ಹಾಗೂ ಈಕೆಯ ಹೆಸರಿನಲ್ಲಿ ಈಕೆಯ ಶೈಕ್ಷಣಿಕ ದಾಖಲೆಗಳನ್ನು ಬಳಸಿ ಇನ್ನೂ ಹಲವರು ಕೆಲಸ ಮಾಡುತ್ತಿದ್ದಾರೆ.
ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ. ಪ್ರಿಯಾ ಮಧ್ಯವರ್ತಿಗಳ ಮೂಲಕ 5 ಲಕ್ಷ ರೂ. ಲಂಚ ನೀಡಿ ಈ ಕೆಲಸ ಗಿಟ್ಟಿಸಿಕೊಂಡಿದ್ದಾಗಿ ಹೇಳುತ್ತಿದ್ದಾಳೆ. ಎಲ್ಲೆಡೆ ಇದೇ ಮಧ್ಯವರ್ತಿಗಳು ವಂಚನೆ ನಡೆಸಿರುವ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ;ಈ-ಮೇಲ್​ಗೆ ಕೂಡಲೇ ರಿಪ್ಲೈ ಮಾಡಿದ್ದಕ್ಕೆ ಕೋಟ್ಯಧಿಪತಿಯಾಗುವ ಅವಕಾಶ ಕಳೆದುಕೊಂಡ…!
ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ದೂರಿನನ್ವಯ ಅನಾಮಿಕಾ ಶುಕ್ಲಾ ವಿರುದ್ಧ ಐದು ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದೆ. ರಾಯ್​ಬರೇಲಿ, ಅಂಬೇಡ್ಕರ್​ನಗರ, ಬಾಗ್​ಪತ್​, ಅಲಿಗಢ, ಸಹರಾನ್​ಪುರ್​ ಜಿಲ್ಲೆಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ವಾರಣಾಸಿ ಹಾಗೂ ಅಮೇಥಿ ಜಿಲ್ಲೆಗಳಲ್ಲಿ ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.
ಅನಾಮಿಕಾ ಶುಕ್ಲಾ ಲಖನೌದ ಕಸ್ತೂರಬಾ ಬಾಲಿಕಾ ಶಾಲೆಯಲ್ಲಿ 10ನೇ ತರಗತಿ ಹಾಗೂ ಪಾರಸಪುರದ ಬೇಣಿ ಮಾಧವ ಕಾಲೇಜಿನಲ್ಲಿಯೇ ಪಿಯು ಶಿಕ್ಷಣ ಪಡೆದಿದ್ದಾಳೆ. ರಘುಕುಲ ಮಹಿಳಾ ವಿದ್ಯಾಪೀಠದಲ್ಲಿ 2012ರಲ್ಲಿ ಪದವಿ ಪೂರ್ಣಗೊಳಿಸಿದ್ದಾಳೆ. ಬೇರೆ ಜಿಲ್ಲೆಗಳಲ್ಲಿ ಅನಾಮಿಕಾ ವಿರುದ್ಧ ಪ್ರಕರಣಗಳು ದಾಖಲಾಗಬೇಕಿವೆ. ಅಗತ್ಯ ಬಿದ್ದರೆ ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಎಡಿಜಿಪಿ ಪ್ರಶಾಂತಕುಮಾರ್​ ತಿಳಿಸಿದ್ದಾರೆ.
ಇದನ್ನೂ ಓದಿ;ಈ ಬ್ಯಾಟರಿ ಬಳಸಿದ್ರೆ 20 ಲಕ್ಷ ಕಿ.ಮೀ. ಸಂಚರಿಸುತ್ತೆ ಕಾರು…! ಎಲೆಕ್ಟ್ರಿಕ್​ ವಾಹನ ಕ್ಷೇತ್ರದಲ್ಲಿ ಮಿಂಚಿನ ಸಂಚಾರ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಕಚೇರಿಗೆ ಹಾಜರಾಗುವಂತೆ ಅನಾಮಿಕಾಗೆ ಹಲವು ಬಾರಿ ನೋಟಿಸ್​ ನೀಡಲಾಗಿತ್ತು. ಅದಕ್ಕೆ ಉತ್ತರಿಸದೇ ಸ್ನೇಹಿತರ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಳು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಿಯಾ ಸಿಂಗ್​ ಸೆರೆಯಾಗಿದ್ದಾಳೆ. ಮೀರತ್​ ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಕೂಡ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿದ್ದರು. ಅವರಿಗೆ ವಾಟ್ಸ್​ಆ್ಯಪ್​ನಲ್ಲಿಯೇ ರಾಜೀನಾಮೆ ಪತ್ರ ರವಾನಿಸಿದ್ದಳು.
ಬೆಂಗಳೂರಿನಲ್ಲಿ ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಹೊಸ ಬದುಕು ಕಟ್ಟಿಕೊಳ್ಳುವಾಸೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
