ನವದೆಹಲಿ:ನಾಗರೀಕ ಪರೀಕ್ಷೆ ಪಾಸು ಮಾಡುವುದು ಎಂದರೆ ಸಾಮಾನ್ಯ ಸಂಗತಿಯೇನಲ್ಲ. ಇದಕ್ಕೆ ವರ್ಷಾನುಗಟ್ಟಲೆ ಪಟ್ಟ ಶ್ರಮ, ನಿರಂತರ ಅಭ್ಯಾಸ ಇರಲೇಬೇಕು. ಈ ಪರೀಕ್ಷೆಯಲ್ಲಿ ಪಾಸು ಮಾಡುವುದು ದೊಡ್ಡ ಕನಸೇ ಆಗಿರುತ್ತದೆ. ಅದರಲ್ಲೂ ಮೊದಲ ಸ್ಥಾನ ಪಡೆಯುವುದು ಎಂದರೆ ಅದೊಂದು ತಪಸ್ಸೇ ಆಗಿರುತ್ತದೆ. ಇಂತಹ ದೊಡ್ಡ ಪರೀಕ್ಷೆಯನ್ನು ಕೇವಲ ಪಾಸು ಮಾಡಿದ್ದಷ್ಟೇ ಅಲ್ಲದೇ ಮೊದಲ ನಾಲ್ಕೂ ಸ್ಥಾನವನ್ನು ಮಹಿಳೆಯರೇ ತುಂಬುವ ಮೂಲಕ ಈ ನಾಲ್ವರು ದೇಶಕ್ಕೆ ಹೆಮ್ಮೆಯ ಪುತ್ರಿಯರಾಗಿದ್ದಾರೆ.
2021ನೇ ಸಾಲಿನ ಯುಪಿಎಸ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಕರ್ನಾಟಕದ 25 ಮಂದಿ ಆಯ್ಕೆಯಾಗಿರುವುದು ವಿಶೇಷ.
ಮೊದಲ ನಾಲ್ಕು ಸ್ಥಾನದಲ್ಲಿ ಮಹಿಳೆಯರೇ ಇದ್ದು, ಶ್ರುತಿ ಶರ್ಮಾ, ಅಂಕಿತಾ ಅಗ್ರವಾಲ್​ ಮತ್ತು ಗಾಮಿನಿ ಸಿಂಗ್ಲಾ ಹಾಗೂ ಐಶ್ವರ್ಯಾ ವರ್ಮಾ ಟಾಪರ್​​ಗಳಾಗಿದ್ದಾರೆ.
ಯುಪಿಎಸ್​ಸಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಶ್ರುತಿ ಶರ್ಮಾ ಪ್ರಥಮ ಸ್ಥಾನ ಪಡೆದುಕೊಂಡಿದ್ದರ, ಎರಡನೇ ಸ್ಥಾನವನ್ನು ಅಂಕಿತಾ ಅಗ್ರವಾಲ್​ ಮತ್ತು ಮೂರನೇ ಸ್ಥಾನದಲ್ಲಿ ಗಾಮಿನಿ ಸಿಂಗ್ಲಾ ಹಾಗೂ ನಾಲ್ಕನೇ ಸ್ಥಾನದಲ್ಲಿ ಐಶ್ವರ್ಯಾ ವರ್ಮಾ ಇದ್ದಾರೆ.
ಒಟ್ಟು 685 ಅಭ್ಯರ್ಥಿಗಳು ಪಾಸಾಗಿದ್ದು, ಕರ್ನಾಟಕದ 25 ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ. ಫಲಿತಾಂಶವನ್ನು ಯುಪಿಎಸ್​​ಸಿ ಅಧಿಕೃತ ವೆಬ್​ಸೈಟ್​ http://www.upsc.gov.in ನಲ್ಲಿ ನೋಡಬಹುದು.
ಯುಪಿಎಸ್​ಸಿ 2021ರ ನಾಗರಿಕ ಸೇವಾ ಪರೀಕ್ಷೆಗಳ ಲಿಖಿತ ಪರೀಕ್ಷೆ ಜನವರಿ ತಿಂಗಳಲ್ಲಿ ಹಾಗೂ ಏಪ್ರಿಲ್​ -ಮೇ ತಿಂಗಳಲ್ಲಿ ಸಂದರ್ಶನ ನಡೆಸಲಾಗಿತ್ತು.(ಏಜೆನ್ಸೀಸ್​)
UPSC ರಿಸಲ್ಟ್​ ಪ್ರಕಟ: ದೇಶಕ್ಕೆ ಶ್ರುತಿ ಶರ್ಮಾ ಟಾಪರ್​, ದಾವಣಗೆರೆಯ ಅವಿನಾಶ್​ಗೆ 31ನೇ ರ‌್ಯಾಂಕ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + twelve =
Remember me
