ನವದೆಹಲಿ:ಯುಪಿಎಸ್ಸಿ ನಾಗರಿಕ ಸೇವೆಗಳ ಪೂವರ್ಭಾವಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಜೂನ್ 5 ರಂದು ಯುಪಿಎಸ್​ಸಿ ಪ್ರಕಟಿಸಲಿದೆ.ಈ ಕುರಿತು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬುಧವಾರ ಪ್ರಕಟಿಸಿದೆ.ಈ ಮೊದಲು ಪೂರ್ವಭಾವಿ ಪರೀಕ್ಷೆಯನ್ನು ಮೇ 31 ರಂದು ನಡೆಸಲು ಯೋಜಿಸಲಾಗಿತ್ತು, ಆದರೆ ಲಾಕ್‌ಡೌನ್ ಜಾರಿಯಿಂದಾಗಿ ಅದನ್ನು ಮುಂದೂಡಬೇಕಾಯಿತು. ಪರೀಕ್ಷೆ ಮುಂದೂಡುವ ನಿರ್ಧಾರವನ್ನು ಆಯೋಗ ಮೇ 4 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ:ಸೋಮವಾರದಿಂದ ದೇಶೀಯ ವಿಮಾನಯಾನ ಆರಂಭಅದಾದ ನಂತರ ಪೂರ್ವಭಾವಿ ಪರೀಕ್ಷೆಗೆ ಹೊಸ ದಿನಾಂಕವನ್ನು ಮೇ 20 ರಂದು ಪ್ರಕಟಿಸಬೇಕಿತ್ತು, ಆದರೆ ಆಯೋಗವು ಹೊಸ ದಿನಾಂಕವನ್ನು ಪ್ರಕಟಿಸುವ ನಿರ್ಧಾರವನ್ನು ಮತ್ತೆ ಮುಂದೂಡಿದೆ.ಅಭ್ಯರ್ಥಿಗಳು ಜೂನ್ 5 ರಂದು upsc.gov.in ನಲ್ಲಿ ಪ್ರಕಟಗೊಂಡ ನಂತರ ಆನ್‌ಲೈನ್‌ನಲ್ಲಿ ಪರೀಕ್ಷೆಯ ಪರಿಷ್ಕೃತ ದಿನಾಂಕನ್ನು ನೋಡಬಹುದು.ಪ್ರತಿ ವರ್ಷ ಏಳು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಈ ವರ್ಷ ಈ ಪರೀಕ್ಷೆಗೆ 10 ಲಕ್ಷ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
VIDEO | ಅಳಿದ ಸಂತತಿಯ ಉಳಿದ ನೆನಪುಗಳು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + two =
Remember me
