ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಮತ್ತು ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆಗೆ ಹೊಸ ದಿನಾಂಕ ಬಿಡುಗಡೆ ಮಾಡಿದೆ.ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಯುಪಿಎಸ್ಸಿ ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಅಕ್ಟೋಬರ್ 18 ರಂದು ಮತ್ತು ಕಂಬೈನ್ಡ್ ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆ ಅಕ್ಟೋಬರ್ 17 ಮತ್ತು 18 ರಂದು ನಡೆಯಲಿದೆ.ಈ ಮೊದಲು ನಿರ್ಧರಿಸಿದಂತೆ ಯುಪಿಎಸ್ಸಿ ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆಯನ್ನು ಜೂನ್ 27 ಕ್ಕೆ ಮತ್ತು ಎಂಜಿನಿಯರಿಂಗ್ ಮುಖ್ಯ ಪರೀಕ್ಷೆಯನ್ನು ಜೂನ್ 28 ರಂದು ನಡೆಸಬೇಕಾಗಿತ್ತು. ಕೋವಿಡ್ -19 ದಿಂದಾಗಿ ಪರೀಕ್ಷೆಗಳನ್ನು ನಂತರ ಕ್ರಮವಾಗಿ ಆಗಸ್ಟ್ 8 ಮತ್ತು 9 ಕ್ಕೆ ಮುಂದೂಡಲಾಗಿತ್ತು. ನಂತರ ಎರಡೂ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ದಿನಾಂಕಗಳನ್ನು ನಂತರ ಸೂಚಿಸುವುದಾಗಿ ಯುಪಿಎಸ್‌ಸಿ ಜುಲೈ 2 ರಂದು ತಿಳಿಸಿತ್ತು. ‘
ಇದನ್ನೂ ಓದಿ:ಸಾಲ ಭಾದೆ ತಾಳದೆ ತಂದೆ ಅಪ್ರಾಪ್ತೆಯರ ಮದುವೆ ಮಾಡಲು ಮುಂದಾಗಿದ್ದ : ಮದ್ವೆ ನಡೀತಾ?
ಪರಿಷ್ಕೃತ ಯುಪಿಎಸ್‌ಸಿ 2020 ರ ವೇಳಾಪಟ್ಟಿ ಪ್ರಕಾರ, 2020 ರ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯ ಅಧಿಸೂಚನೆಯನ್ನು ಜುಲೈ 22 ರಂದು ಬಿಡುಗಡೆ ಮಾಡಲಾಗುವುದು ಮತ್ತು ಅದರ ಪರೀಕ್ಷೆಯು ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿದೆ.ಇದಲ್ಲದೆ, ಎನ್‌ಡಿಎ, ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್ 6 ರಂದು ನಡೆಯಲಿದೆ. ಈ ಬಾರಿ ಎನ್‌ಡಿಎ, ಎನ್‌ಎ (I) ಮತ್ತು (II) ಪರೀಕ್ಷೆಗಳಿಗೆ ಸಾಮಾನ್ಯ ಪರೀಕ್ಷೆ ನಡೆಯಲಿದೆ.ಅಲ್ಲದೆ, ಯುಪಿಎಸ್ಸಿ ಸಿವಿಲ್ ಸರ್ವೀಸಸ್ 2019 ರ ಉಳಿದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ನಾಳೆ ಜುಲೈ 20 ರಿಂದ ಪುನರಾರಂಭಗೊಳ್ಳಲಿದೆ.
ಎಂಟು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಕರೊನಾ ಡ್ರಗ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 19 =
Remember me
