ನವದೆಹಲಿ:ಅಕ್ಟೋಬರ್ 4 ರಂದು ನಡೆಯಲಿರುವ ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಿದ್ದು, ಈ ಕುರಿತು ಅಧಿಕೃತ ವೆಬ್‌ಸೈಟ್ upc.gov.in ನಲ್ಲಿ ಪ್ರಕಟಣೆ ಹೊರಡಿಸಿದೆ.upsconline.nic.in ನಲ್ಲಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ, ಪರೀಕ್ಷಾ ಕೇಂದ್ರ ತಿದ್ದುಪಡಿಗಾಗಿ ಜುಲೈ 7 ರಿಂದ 13 ರ ವರೆಗೆ ಅವಕಾಶವಿರುತ್ತದೆ. ಎರಡನೇ ಹಂತದಲ್ಲಿ ಜುಲೈ 20 ರಿಂದ 24 ರ ವರೆಗೆ ಅವಕಾಶವಿರುತ್ತದೆ.
ಇದನ್ನೂ ಓದಿ:ಹಳೆಯ ಪ್ರೇಮಿ ಹತ್ತಾರು ಬಾರಿ ಇರಿದು ಆಕೆಯನ್ನು ಕೊಂದ
ಒಮ್ಮೆ ಮಾತ್ರ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶವಿದ್ದು, ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುವುದು.ಅಭ್ಯರ್ಥಿಗಳು ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.ಯುಪಿಎಸ್​ಸಿ ಪ್ರತಿ ವರ್ಷ ಐಎಎಸ್, ಐಎಫ್​ಎಸ್, ಐಆರ್​ಎಸ್ , ಐಪಿಎಸ್ ಇತ್ಯಾದಿ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ವರ್ಷ ಮೇ 31ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ದೇಶಾದ್ಯಂತ ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈಗ ಅಕ್ಟೋಬರ್ 4 ರಂದು ಪರೀಕ್ಷೆ ನಡೆಯಲಿದೆ.
ಒಂದೂವರೆ ದಿನದಲ್ಲಿ ಒಂದೂವರೆ ಕೋಟಿ ಜನರು ಫಿದಾ ಆದ್ರು; ಜಗದಗಲ ಬೆಳಗಿದ ಬೆಂಗಳೂರಿನ ಕೀರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
