ಲಖನೌ:ನಕಲಿ ಯುಪಿಎಸ್​ಸಿ ಪ್ರಮಾಣ ಪತ್ರಗಳ ಮೂಲಕ ಮಹಿಳಾ ಪೊಲೀಸ್​ ಅಧಿಕಾರಿಯನ್ನು ನಂಬಿಸಿ ಮದುವೆಯಾಗಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ವಿಜಯ್​ ಸಿಂಗ್​​ (22) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಗೊಂಡಾ ಮೂಲದವನು. ಪ್ರತಿನಿತ್ಯ ಥಳಿಸುವ ಮೂಲಕ ಗಂಡ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳಾಧಿಕಾರಿ ದೂರು ದಾಖಲಿಸಿದ ಬಳಿಕ ವಿಚಾರಣೆ ನಡೆಸಿದಾಗ ಆರೋಪಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ.
ಆರೋಪಿ ವಿಜಯ್​ 2023ರಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಮದುವೆಯಾಗಿದ್ದ. ತಾನು ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್​ ಮಾಡಿದ್ದು, ಮುಂದಿನ ಪ್ರಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ನಕಲಿ ಪ್ರಮಾಣ ಪತ್ರಗಳ ಮೂಲಕ ಮಹಿಳೆಯನ್ನು ನಂಬುವಂತೆ ಮಾಡಿದ್ದ. ವಿಜಯ್​ ಆಡಿದ ಬೆಣ್ಣೆಯಂತಹ ಮಾತುಗಳು ಆತನ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿತು. ಅಲ್ಲದೆ, ಒಳ್ಳೆಯ ಸಂಪಾದನೆ ಇರುವ ಸ್ಥಾನವನ್ನು ಅಲಂಕರಿಸುತ್ತಿದ್ದಾನೆ ಎಂಬ ದುರಾಸೆಯಲ್ಲಿ ಸರಿಯಾಗಿ ಆತನ ಬಗ್ಗೆ ವಿಚಾರಿಸದೆ ಮಹಿಳಾಧಿಕಾರಿ ವಂಚನೆಗೆ ಒಳಗಾಗಿದ್ದಾರೆ.
ಇತ್ತೀಚೆಗೆ ಮಹಿಳಾಧಿಕಾರಿ, ಗಂಡ ವಿಜಯ್ ಯುಪಿಎಸ್​ಸಿ ಸ್ಥಾನಮಾನದ ಬಗ್ಗೆ ಸಂಶಯ ವ್ಯಕ್ತಪಡಿಸಿ, ದಾಖಲೆಗಳನ್ನು ನೀಡುವಂತೆ ಕೇಳಿದಳು. ಆದರೆ, ಅವುಗಳನ್ನು ಕೊಡಲು ವಿಜಯ್​ ವಿಫಲವಾಗಿದ್ದು, ತನ್ನ ರಾಕ್ಷಸಿ ಗುಣವನ್ನು ಹೊರಹಾಕಿದ ವಿಜಯ್​, ವಂಚನೆ ಮಾಡಿದ ಸುದ್ದಿಯನ್ನು ಹೊರಗಡೆ ಹರಡಿದರೆ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ.
ಗಂಡನ ಗೊಡ್ಡು ಬೆದರಿಕೆಗೆ ಜಗ್ಗದ ಮಹಿಳೆ, ಧೈರ್ಯ ಮಾಡಿ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರ ಪ್ರಕಾರ, ಅಪರಾಧಿ ಈ ಹಿಂದೆ ತನ್ನ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆಂದು ತಿಳಿದುಬಂದಿದೆ. ವಿಜಯ್ ವಿರುದ್ಧ ವಂಚನೆ, ಫೋರ್ಜರಿ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ಗೆ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸವಾಲು; ಮೂರು ಸ್ಥಾನ ಭರ್ತಿಗೆ ಅವಕಾಶ

ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್​ ಪಥುಮ್​ ನಿಸ್ಸಂಕ; ಜಯಸೂರ್ಯರ 24 ವರ್ಷಗಳ ದಾಖಲೆ ಪತನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − eight =
Remember me
