ಹೈದರಾಬಾದ್​:ಖ್ಯಾತ ಬಹುಭಾಷ ನಟಿ ಹಾಗೂ ಶಾಸಕಿ ರೋಜಾ ಅವರ ಮೇಲೆ ಸ್ವಪಕ್ಷೀಯದವರೇ ಹಲ್ಲೆಗೆ ಯತ್ನ ನಡೆಸಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
90 ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ನಟಿ ರೋಜಾ ಪ್ರಮುಖ ನಟಿಯಾಗಿದ್ದರು. ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷ ನಟಿಯಾಗಿ ಮಿಂಚಿದ್ದರು. ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದ ಬಳಿಕ 1999ರಲ್ಲಿ ಆಂಧ್ರ ಪ್ರದೇಶದ ರಾಜಕೀಯಕ್ಕೆ ಪ್ರವೇಶ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ನಗರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.
ವೈಎಸ್ಆರ್ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವರನ್ನು ಇತ್ತೀಚೆಗೆ ಆಂಧ್ರಪ್ರದೇಶ ರಾಜ್ಯದ ಕೈಗಾರಿಕಾ ಮೂಲ ಸೌಕರ್ಯ ನಿಗಮದ ಅಧ್ಯಕ್ಷೆಯಾಗಿಯೂ ನೇಮಕ ಮಾಡಲಾಗಿದೆ. ಹೀಗಾಗಿ ಚಿತ್ತೂರ್​ ಜಿಲ್ಲೆಯ ಕೆ.ವಿ.ಪುರಂನಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಚೇರಿ ಉದ್ಘಾಟನೆಗೆ ತೆರಳಿದ್ದರು. ಇದೇ ಸಮಯದಲ್ಲಿ ವೈಎಸ್ಆರ್ ಕಾಂಗ್ರೆಸ್​ನ ವಲಯ ಒಕ್ಕೂಟ ಸಮಿತಿಯ ಸದಸ್ಯ ಅಮ್ಮೂಲ್​ ಎಂಬಾತ 200 ಬೆಂಬಲಿಗರೊಂದಿಗೆ ರೋಜಾ ಅವರ ಕಾರನ್ನು ತಡೆದು, ದಾಳಿ ಮಾಡಲು ಯತ್ನಿಸಿದ್ದಾನೆ. ಆದರೆ, ಸ್ಥಳದಲ್ಲಿದ್ದ ಪೊಲೀಸರು ರೋಜಾರನ್ನು ರಕ್ಷಿಸಿ, ಅಲ್ಲಿಂದ ಸುರಕ್ಷಿಸಿತವಾಗಿ ವಾಪಸ್​ ಕಳುಹಿಸಿದ್ದಾರೆ.
ರೋಜಾ ಮತ್ತು ಅಮ್ಮೂಲ್​ ನಡುವಿನ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಆದರೆ, ಸ್ವಪಕ್ಷಿಯರಿಂದಲ್ಲೆ ಹಲ್ಲೆ ಯತ್ನ ವಿಚಾರವನ್ನು ರೋಜಾ ನಿರಾಕರಿಸಿದ್ದಾರೆ. ಆದರೆ, ಇದು ಪ್ರತಿಪಕ್ಷ ತೆಲುಗು ದೇಶಂ ಪಕ್ಷದವರ ಕೈವಾಡ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್​)
நகரி தொகுதி எம்.எல்.ஏவான ரோஜாவின் காரை முற்றுகையிட்டு அவரது கட்சியினரே தாக்க முயற்சி. தொகுதிப் பக்கம் ரோஜா தலைகாட்டவில்லை எனக்குற்றச்சாட்டு. சினிமா டூ அரசியல்.. கொஞ்சம் கஷ்டம்தான் போலையே..#Roja#Attack#Nagaripic.twitter.com/RxnVwLau4w— மகாலிங்கம் பொன்னுசாமி / Mahalingam Ponnusamy (@mahajournalist)January 6, 2020
நகரி தொகுதி எம்.எல்.ஏவான ரோஜாவின் காரை முற்றுகையிட்டு அவரது கட்சியினரே தாக்க முயற்சி. தொகுதிப் பக்கம் ரோஜா தலைகாட்டவில்லை எனக்குற்றச்சாட்டு. சினிமா டூ அரசியல்.. கொஞ்சம் கஷ்டம்தான் போலையே..#Roja#Attack#Nagaripic.twitter.com/RxnVwLau4w
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
