ಹೈದರಾಬಾದ್:ಚಿತ್ರನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್​ನಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದ ಸುದ್ದಿ ಇಂದು ಎಲ್ಲೆಡೆ ವ್ಯಾಪಿಸಿರುವಾಗಲೇ ಹೃದಯಾಘಾತದಿಂದಾಗಿ ಪತ್ರಕರ್ತರೊಬ್ಬರು ಸಾವಿಗೀಡಾದ ಸುದ್ದಿ ಹೊರಬಿದ್ದಿದೆ.
ಉರ್ದು ಮ್ಯಾಗಜಿನ್ ಸಿಯಾಸತ್​ನ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್​ (60) ಸಾವಿಗೀಡಾದ ಪತ್ರಕರ್ತ. ಕ್ರಾಂತಿಕಾರಿ ಕವಿ ಗದ್ದರ್ (ಗುಮ್ಮಡಿ ವಿಠಲ್ ರಾವ್​) ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಅಲಿ ಖಾನ್ ಅಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಇದನ್ನೂ ಓದಿ:ಸ್ಪಂದನಾ ಪಾರ್ಥಿವ ಶರೀರದ ಪೋಸ್ಟ್​ ಮಾರ್ಟಂ ಮುಕ್ತಾಯ; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್ಸ್​
ಹೈದರಾಬಾದ್​ನ ಅಲ್ವಾಲ್​ನ ಭೂದೇವಿನಗರದ ಮಹಾಬೋಧಿ ವಿದ್ಯಾಲಯದಲ್ಲಿ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಗದ್ದರ್ ಅಂತ್ಯಸಂಸ್ಕಾರ ನಡೆದಿತ್ತು. ಅಲ್ಲಿಗೆ ತೆರಳಿ ಹೃದಯಾಘಾತಕ್ಕೆ ಒಳಗಾಗಿ ಎದೆನೋವಿನಿಂದ ಬಳಲುತ್ತಿದ್ದ ಅಲಿ ಖಾನ್ ಅವರನ್ನು ಹೈದರಾಬಾದ್​ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪತ್ನಿಯ ಸ್ಮರಣಾರ್ಥ ದೇವಸ್ಥಾನ ನಿರ್ಮಿಸಿ ಆಕೆಯ ಮೂರ್ತಿಗೆ ನಿತ್ಯವೂ ಪೂಜೆ ಸಲ್ಲಿಸುತ್ತಿರುವ ಪತಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
