ಮುಂಬೈ:ಸೋಶಿಯಲ್​ ಮೀಡಿಯಾ ಸ್ಟಾರ್​ ಉರ್ಫಿ ಜಾವೇದ್ ಚಿತ್ರವಿಚಿತ್ರ ಬಟ್ಟೆಗಳಿಂದ, ಅರೆಬರೆ ದೇಹ ಪ್ರದರ್ಶನ ಮಾಡೋದಕ್ಕೇ ಫೇಮಸ್. ಉರ್ಫಿ ಈ ಬಾರಿಯ ವೇಷ ಸಖತ್​ ವೈರಲ್​​ ಆಗಿದೆ.
ಉರ್ಫಿ ಜಾವೇದ್ ಅವರು ನೀಲಿ ಬಣ್ಣದ ಡ್ರೆಸ್ ಧರಿಸಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇಂಟರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ ಈ ಉಡುಪನ್ನು ದಿಂಬಿನೊಂದಿಗೆ ತೊಟ್ಟಿದ್ದಾಳೆ. ಇದರಿಂದ ಹಲವರು ಅಚ್ಚರಿಗೊಂಡಿದ್ದಾರೆ.
A post shared by Voompla (@voompla)

ಉರ್ಫಿ ಜಾವೇದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಆದರೆ, ಈಗ ಜನರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿ ಹೇಳಿದರು: “ಇಂತಹ ಸೋಮಾರಿಗಳಿಗೆ ಇದು ಪರಿಪೂರ್ಣ ಉಡುಗೆ. ಇನ್ನೊಬ್ಬರು ತಮಾಷೆಯಾಗಿ ಹೇಳಿದರು, “ಉರ್ಫಿ  ತನ್ನದೇ ಆದ ಚೀಲ ಮತ್ತು ಹಾಸಿಗೆಯನ್ನು ಹೊತ್ತಿದ್ದಾಳೆ.”  ಎಂದು ಹೇಳಿದರು.
ಈ ವಿಡಿಯೋಗೆ ಸಂಬಂಧಿಸಿದಂತೆ ಕೆಲವರು ನಟಿಯ ಸ್ಟೈಲ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ವಿಲಕ್ಷಣ ಡ್ರೆಸಿಂಗ್ ಸೆನ್ಸೇ ಆಕೆಗೆ ಫಾಲೋವರ್‌ಗಳನ್ನು ತಂದುಕೊಟ್ಟಿದೆ. ಹಾಕುವ ಬಹುತೇಕ ಬಟ್ಟೆಗಳಿಗೆ ಟ್ರೋಲ್ ಆದರೂ, ನಗಿಸಿಕೊಂಡರೂ, ಉಗಿಸಿಕೊಂಡರೂ ಕ್ಯಾರೇ ಎನ್ನದೆ ಮರುದಿನವೇ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗುತ್ತಾಳೆ ಉರ್ಫಿ
ಹೊಸದಾಗಿ ಮದುವೆಯಾಗುವ ಜೋಡಿಗಳಿಗೆ ಸಾನಿಯಾ ಮಿರ್ಜಾ ಕೊಟ್ಟ ಟಿಪ್ಸ್​ ಏನು ಗೊತ್ತಾ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − 6 =
Remember me
