ಮುಂಬೈ:ವಿಚಿತ್ರವಾದ ಬಟ್ಟೆ ಧರಿಸುವ ಮೂಲಕವಾಗಿ ನಟಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಟೊಮ್ಯಾಟೋ ಮೇಲೆ ಕಣ್ಣು ಹಾಕಿದ್ದಾರೆ.
ಟೊಮ್ಯಾಟೋ ಬೆಲೆ ಗಗನಕ್ಕೇರಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಟೊಮ್ಯಾಟೋದಿಂದ ಮಾಡಿದ ಕಿವಿಯೋಲೆಯನ್ನು ಅವರು ಧರಿಸಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ.
A post shared by Uorfi Javed (@urf7i)
ಟೊಮ್ಯಾಟೋ ದುಬಾರಿಯಾಗಿದೆ. ಒಂದು ಕೆಜಿ ಟೊಮ್ಯಾಟೋ ಬೆಲೆ ಸುಮಾರು 120 ರೂಪಾಯಿಗೂ ಹೆಚ್ಚಾಗಿದ್ದು, ಟೊಮ್ಯಾಟೋ ಇಲ್ಲದೆ ಗೃಹಿಣಿಯರು ಸಾಂಬಾರು ಮಾಡುವಂತಾಗಿದೆ. ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದರೆ ಉರ್ಫಿ ಟೊಮ್ಯಾಟೋ ಬಳಿಸಿ ಫ್ಯಾಷನ್ ಮಾಡುತ್ತಿದ್ದಾರೆ.
ಇದನ್ನೂ ಓದಿ:Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…
ಟೊಮ್ಯಾಟೊ ಇಯರಿಂಗ್ಸ್ ಮಾಡಿ ಧರಿಸಿದ್ದಾರೆ. ಕೈಯಲ್ಲೊಂದು ಟೊಮ್ಯಾಟೊ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಯ್ಯೋ ಊರ್ಫಿ ಸಖತ್​​ ದುಬಾರಿ.. ನಿಮ್ಮ ಇಯರಿಂಗ್ಸ್ ನಿಮಗೆ ಭಾರವಾಗ್ತಿಲ್ವಾ? ಮೇಡಂ ಕಿವಿ ಹರಿದೋಗುತ್ತದೆ, ಟೊಮ್ಯಾಟೋ ಕೊಟ್ಟಿದ್ರೆ ಸಾಂಬಾರ್​​ ಮಾಡಬಹುದು ಇತ್ತು ಎಂದು ಕಾಮೆಂಟ್​ ಮಾಡುತ್ತಾ ತಮಾಷೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!; ರಕ್ತ ಹೀರುವ ಇವುಗಳನ್ನು ಓಡಿಸಲು ಈ 5 ಸಲಹೆಗಳನ್ನು ಪಾಲಿಸಿ…
ಕೆಲವು ದಿನಗಳ ಹಿಂದೆ ಉರ್ಫಿ ಕಣ್ಣಿನ ಸರ್ಜರಿಗೆ ಒಳಗಾಗಿದ್ದು, ಅದರಿಂದಾಗಿ ಕಣ್ಣಿನ ಕೆಳಭಾಗ ನೋವುಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಕಣ್ಣಿನ ಸುತ್ತಲೂ ಒಂದು ರೀತಿಯ ಅಲರ್ಜಿಯಾಗಿದ್ದು, ಅದನ್ನು ಮೇಕಪ್ ನಿಂದ ಮುಚ್ಚಲೂ ಸಾಧ್ಯವಾಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಕಳ್ಳತನ; ಖದೀಮರು ಅರೆಸ್ಟ್​​

Sign in to your account
Please enter an answer in digits:five × 1 =
Remember me
