ಮುಂಬೈ:ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಅರ್ಧ ಮರ್ಧ ಬಟ್ಟೆ ಹಾಕಿಕೊಳ್ಳುವ ಮೂಲಕವಾಗಿ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಸದ್ಯಕ್ಕೆ ತಮ್ಮ ಸೆ* ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
”ಫಾಲೋ ಕರ್ ಲೇ ಯಾರ್” ಎಂಬ ವೆಬ್ ಸರಣಿಯಲ್ಲಿ ಮಾತನಾಡಿರುವ ಉರ್ಫಿ ಜಾವೇದ್, ನಾನು ಕಳೆದ ಮೂರು ವರ್ಷಗಳಿಂದ ಸೆ* ಮಾಡಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಈ ಮೂರು ವರ್ಷದಲ್ಲಿ ನಾನು ಕಿಸ್ ಕೂಡ ಮಾಡಿಲ್ಲ, ಪುರುಷನ ಜೊತೆ ರೊಮ್ಯಾಂಟಿಕ್ ಆಗಿ ಮಾತನಾಡಿಯೂ ಇಲ್ಲ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
ನಾನು ಸಾಯುವದರೊಳಗೆ ನನ್ನ ಬಳಿ ಪ್ರೈವೆಟ್ ಜೆಟ್ ಇರಬೇಕು ಅನ್ನುವುದು ನನ್ನ ಆಸೆ. ಹೀಗಾಗಿ ನಾನು ಎಲ್ಲಿಯವರೆಗೆ ಪ್ರೈವೆಟ್ ಜೆಟ್ ಖರೀದಿ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾನು ಈ ಮೋಹ ಮತ್ತು ಕಾಮದಿಂದ ದೂರ ಇರುವುದಾಗಿ ಮೂರು ವರ್ಷದ ಹಿಂದೆ ಶಪಥ ಮಾಡಿದ್ದೆ. ನಾನು ತುಂಬಾನೇ ಸ್ವಾಭಿಮಾನಿ. ನಾನು ಈ ಹಂತಕ್ಕೆ ಬರಲು ನನ್ನ ಪರಿಶ್ರಮವೇ ಕಾರಣ, ಬದುಕಿನಲ್ಲಿ ಏನೆಲ್ಲ ಇದೆ ಅದೆಲ್ಲವನ್ನು ನಾನೇ ಪಡೆದುಕೊಂಡಿದ್ದೇನೆ, ನನ್ನ ಸಂಗಾತಿ ಜೊತೆ ನಾನು ದುರ್ಬಲವಾಗಿ ಕಾಣಿಸಿಕೊಳ್ಳಲು ಇಷ್ಟ ಪಡಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ ಉರ್ಫಿ ಜಾವೇದ್ ಸೆ* ಕುರಿತು ಮಾತನಾಡಿದ ಈ ಮಾತು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
”ಫಾಲೋ ಕರ್ ಲೇ ಯಾರ್” ಎಂಬ ವೆಬ್ ಸರಣಿ ಮೂಲಕ ಉರ್ಫಿ ಜಾವೇದ್, ತಮ್ಮ ಬದುಕಿನ ಚಿತ್ರಣವನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 8 =
Remember me
