ಮುಂಬೈ:ಉರ್ಫಿ ಜಾವೇದ್ ಯಾವಾಗಲೂ ತನ್ನ ವಿಚಿತ್ರವಾದ ಫ್ಯಾಷನ್ ಮೂಲಕವಾಗಿ ಚರ್ಚೆಯಾಗುತ್ತಾ ನೆಟ್ಟಿಗರ ಕೆಂಗಣ್ಣಿಗರ ಗುರಿ ಆಗುತ್ತಲಿರುತ್ತಾಳೆ. ಈ ಫ್ಯಾಷನ್​ ಉರ್ಫಿ ಸೋಶಿಯಲ್​ ಮೀಡಿಯಾ ಖಾತೆಗಳಿಗೆ ಸಂಕಷ್ಟ ತಂದಿದ್ದು, ಆತಂಕವನ್ನುಂಟು ಮಾಡಿದೆ. ಹೀಗಾಗಿ ಈ ಕುರಿತಾಗಿ ಉರ್ಫಿ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಒಟಿಟಿ ಮೂಲಕವಾಗಿ ಜನಮನ್ನಣೆ ಪಡೆದ ಉರ್ಫಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಖ್ಯಾತಿಯನ್ನು ಹೊಂದಿದ್ದಾರೆ, ಸೋಶಿಯಲ್​​ ಮೀಡಿಯಾದ ಬಳಕೆಗೆ ಇರುವ ಕೆಲವು ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ತನ್ನ Instagram ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು  ಹಂಚಿಕೊಂಡಿದ್ದಾರೆ. ಆದಾಗ್ಯೂ, ಇದು ಮೊದಲ ಬಾರಿಗೆ ಅಲ್ಲ, ಆಕೆಯ ಖಾತೆಯನ್ನು ಕೆಲವು ದಿನಗಳ ಹಿಂದೆ ಕೂಡಾ ನಿಷ್ಕ್ರಿಯಗೊಳಿಸಲಾಗಿತ್ತು. ನಟಿ ಈಗ ಅಸಮಾಧಾನಗೊಂಡಿದ್ದೇನೆಂದು ವ್ಯಕ್ತಪಡಿಸಿದ್ದಾರೆ.

ಸ್ಕ್ರೀನ್‌ಶಾಟ್‌ ಹಂಚಿಕೊಂಡ ಅವರು, “ ನನ್ನ ಸೋಶಿಯಲ್​ ಮೀಡಿಯಾ ಖಾತೆಯು ಪ್ರಮುಖ ದೋಷಗಳನ್ನು ಎದುರಿಸುತ್ತಿದೆ. ಪ್ರತಿದಿನ ನನ್ನ ಪೋಸ್ಟ್‌ನಲ್ಲಿ ನಾನು ಅಧಿಸೂಚನೆಯನ್ನು ಪಡೆಯುತ್ತಿದ್ದೇನೆ. ಕೆಲವು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಸೂಚನೆ ನೀಡಲಾಗುತ್ತಿದೆ. ನಂತರ ಅದನ್ನು ಮತ್ತೆ ಮರು ಪೋಸ್ಟ್ ಮಾಡಲಾಗುತ್ತದೆ, (ನಾನು ಪ್ರತಿದಿನ ಅದೇ ಪೋಸ್ಟ್‌ಗೆ ಅದೇ ಅಧಿಸೂಚನೆಯನ್ನು ಮತ್ತೆ ಮತ್ತೆ ಸ್ವೀಕರಿಸುತ್ತೇನೆ). ಪ್ರತಿ ಬಾರಿ ನಾನು ಏನನ್ನಾದರೂ ಪೋಸ್ಟ್ ಮಾಡುತ್ತೇನೆ. ನನ್ನ ಫಾಲೋವರ್ಸ್​​ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ನಂತರ ಮತ್ತೆ ಹೆಚ್ಚಾಗುತ್ತದೆ ನಂತರ ಮತ್ತೆ ಕಡಿಮೆಯಾಗುತ್ತದೆ . ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ♀️ @metaindia.” ಎಂದು ಬರೆದುಕೊಂಡು ಬೇಸರ ಹೊರ ಹಾಕಿದ್ದಾರೆ.
A post shared by Uorfi (@urf7i)
ಉರ್ಫಿ ಜಾವೇದ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ OTT ನಲ್ಲಿ ಭಾಗವಹಿಸಿದ ನಂತರ ಅವರು ಖ್ಯಾತಿಗೆ ಏರಿದರು. ರಿಯಾಲಿಟಿ ಟಿವಿ ಶೋ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − nine =
Remember me
