ಕೋಲ್ಕತ:ಇಲ್ಲಿನ ಆರ್​ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೖೆನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಗಳೆದಂತೆ ರಾಜಕೀಯ ತಿರುವನ್ನು ಪಡೆದು ಕೊಳ್ಳುತ್ತಿದೆ. ಪ್ರಕರಣ ಖಂಡಿಸಿ ಮಂಗಳವಾರ ನಡೆದ ಭಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಬುಧವಾರ 12 ಗಂಟೆ ಪಶ್ಚಿಮ ಬಂಗಾಳ ಬಂದ್ (ಹರತಾಳ) ನಡೆಸುವಂತೆ ರಾಜ್ಯ ಬಿಜೆಪಿ ಮಂಗಳವಾರ ಕರೆ ನೀಡಿದೆ. ರಾಜ್ಯ ಬಂದ್​ಗೆ ಪಶ್ಚಿಮ ಬಂಗ ಛಾತ್ರ ಸಮಾಜ್ ಎಂಬ ಸ್ವತಂತ್ರ ವಿದ್ಯಾರ್ಥಿ ಸಂಘಟನೆ ಕೂಡ ಪ್ರತ್ಯೇಕವಾಗಿ ಕರೆ ನೀಡಿದೆ.
ಈ ನಡುವೆ, ಇದು ವೈದ್ಯೆಯ ಪ್ರಕರಣದಲ್ಲಿ ಜನರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಅಶಾಂತಿ ಹರಡುವ ಬಿಜೆಪಿಯ ಹುನ್ನಾರವನ್ನು ಬಯಲು ಮಾಡಿದೆ ಎಂದು ಆಳುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಡೆಸಲು ಕರೆ ಕೊಟ್ಟಿರುವ ಬಂದ್ ವೇಳೆ ಸಾಮಾನ್ಯ ಜನಜೀವನಕ್ಕೆ ತೊಂದರೆ ಆಗದಂತೆ ಖಾತರಿಪಡಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ಆಗ್ರಹಿಸಿ ಮಂಗಳವಾರ ರಾಜ್ಯ ಸರ್ಕಾರದ ಕಾರ್ಯಾಲಯಕ್ಕೆ (ನಬನ್ನಾ) ಮೆರವಣಿಗೆ ನಡೆಸಿದ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಲ್ಲದೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ್ದರು.
ಏಮ್್ಸ ತಜ್ಞರಿಗೆ ಮೊರೆ:ಟ್ರೖೆನಿ ವೈದ್ಯೆಯ ರೇಪ್-ಮರ್ಡರ್ ಪ್ರಕರಣ ಸಂಬಂಧ ಡಿಎನ್​ಎ-ಫೊರೆನ್ಸಿಕ್ ವರದಿಗಳ ವಿಚಾರದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್್ಸ) ತಜ್ಞರ ಸಲಹೆ ಪಡೆಯಲು ಸಿಬಿಐ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಯಾವುದೇ ಲೋಪದೋಷ ನುಸುಳದಂತೆ ಪ್ರಕರಣವನ್ನು ಕಟ್ಟುನಿಟ್ಟಾಗಿ ನಿಭಾಯಿಸುವ ಉದ್ದೇಶದಿಂದ ತಜ್ಞರ ಅಭಿಪ್ರಾಯ ಪಡೆಯಲು ವರದಿಗಳನ್ನು ಏಮ್ಸ್​ಗೆ ಕಳಿಸಲಾಗುತ್ತದೆ. ಬಂಧಿತ ಸಂಜಯ್ ರಾಯ್ ದುಷ್ಕೃತ್ಯ ಎಸಗಿದ ಏಕೈಕ ಆರೋಪಿಯೇ? ಎನ್ನುವುದನ್ನು ನಿರ್ಧರಿಸಲು ಕೂಡ ಈ ವರದಿಗಳು ನೆರವಾಗಲಿವೆ ಎಂದಿದ್ದಾರೆ. ರಾಯ್ ಒಬ್ಬನೇ ಕುಕೃತ್ಯದಲ್ಲಿ ಭಾಗವಹಿಸಿದ್ದನೆಂಬ ನೆಲೆಯಲ್ಲಿ ಸಿಬಿಐ ಇದುವರೆಗೆ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಏಮ್್ಸ ತಜ್ಞರ ಅಭಿಪ್ರಾಯ ಸಿಕ್ಕ ಬಳಿಕವಷ್ಟೇ ಇತರರೂ ಒಳಗೊಂಡಿರುವ ಸಾಧ್ಯತೆ ತಳ್ಳಿ ಹಾಕಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಕೋಲ್ಕತ ಪೊಲೀಸರು ಆ.10ರಂದು ರಾಯ್ನನ್ನು ಬಂಧಿಸಿದ್ದರು. 9ರಂದು ವೈದ್ಯೆಯ ಅತ್ಯಾಚಾರ-ಕೊಲೆಯಾಗಿತ್ತು.
ಇ.ಡಿ. ಕೇಸ್:ದುಷ್ಕೃತ್ಯ ನಡೆದ ಸಂಸ್ಥೆಯ ಮಾಜಿ ಪ್ರಿನ್ಸಿಪಾಲ್ ಸಂದೀಪ್ ತನ್ನ ಅಧಿಕಾರಾವಧಿಯಲ್ಲಿ ನಡೆಸಿದ್ದಾನೆ ಎನ್ನಲಾದ ಆರ್ಥಿಕ ಅವ್ಯವಹಾರಗಳ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇ.ಡಿ.) ಆತನ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಎಫ್​ಐಆರ್ ಆಧಾರದಲ್ಲಿ ಅದಕ್ಕೆ ಸಮನಾದ ಅನುಷ್ಠಾನ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಇ.ಡಿ. ದಾಖಲಿಸಿ ಕೊಂಡಿದೆ.
ಪೊಲೀಸ್ ದೌರ್ಜನ್ಯ:ಸರ್ಕಾರ ಜನರ ದನಿಗೆ ಕಿವುಡಾದ್ದರಿಂದ ಹರತಾಳಕ್ಕೆ ಕರೆ ಅನಿವಾರ್ಯ ಆಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಂತ ಮಜುಂದಾರ್ ಹೇಳಿದ್ದಾರೆ. ವೈದ್ಯ ಸೋದರಿಗೆ ನ್ಯಾಯ ಒದಗಿಸುವ ಬದಲು ಸರ್ಕಾರ ಜನರ ವಿರುದ್ಧ ಪೊಲೀಸರನ್ನು ಛೂಬಿಡುತ್ತಿದೆ ಎಂದವರು ಆರೋಪಿಸಿದ್ದಾರೆ. ಜನರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಟೀಕಿಸಿದ್ದಾರೆ.
ಪೊಲೀಸರಿಗೂ ಗಾಯ:ನಬನ್ನಾ ಅಭಿಯಾನದ ವೇಳೆ ಕೋಲ್ಕತದ ಹಲವು ಭಾಗಗಳು ಹಾಗೂ ನೆರೆಯ ಹೌರಾದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು ಚಳವಳಿಕಾರರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರಿಂದ ಉದ್ರಿಕ್ತರನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಅನಿವಾರ್ಯ ಆಯಿತೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವೈದ್ಯರ ರಕ್ಷಣೆಗಾಗಿ ಗೋವಾ ಕಾನೂನು ತಿದ್ದುಪಡಿ:ಹಲ್ಲೆ ಘಟನೆಗಳಿಂದ ವೈದ್ಯರೂ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಕ್ಲಿನಿಕಲ್ ಎಸ್ಟಾಬ್ಲಿಷ್​ವೆುಂಟ್ ಕಾಯ್ದೆಗೆ ತಿದ್ದುಪಡಿ ತರಲು ಗೋವಾ ಸರ್ಕಾರ ನಿರ್ಧರಿಸಿದೆ. ಸಿಎಂ ಪ್ರಮೋದ್ ಸಾವಂತ್ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕೋಲ್ಕತದಲ್ಲಿ ಟ್ರೖೆನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಘಟನೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಹಿರಿಯ ಅಧಿಕಾರಿಗಳ ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪದಾಧಿಕಾರಿಗಳ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆ. 15ರೊಳಗೆ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ತೀರ್ವನಿಸಲಾಗಿದೆ. ಆಸ್ಪತ್ರೆಗಳ ಮೂಲಸೌಕರ್ಯದಲ್ಲಿ ಅಗತ್ಯ ಬದಲಾವಣೆ ಮಾಡಲಾಗುವುದು. ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಸಾವಂತ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + two =
Remember me
