ಮುಂಬೈ:ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಮುಂಬೈ ಕಚೇರಿಯನ್ನು ಬೃಹನ್ಮುಂಬೈ ಪಾಲಿಕೆ ಒಡೆದುಹಾಕಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿರುವುದೇ. ಇದೀಗ ಯಾವ ಕಾರಣಕ್ಕಾಗಿ ತನ್ನ ಕಚೇರಿಯನ್ನು ಒಡೆಯಲಾಗಿದೆ ಮತ್ತು ಏನು ಮಾಡಿದ್ದರೆ ಕಟ್ಟಡಕ್ಕೆ ಏನೂ ತೊಂದರೆಯಾಗುತ್ತಿರಲಿಲ್ಲ ಎನ್ನುವುದರ ಬಗ್ಗೆ ಕಂಗನಾ ರಣಾವತ್​ ಮಾತನಾಡಿದ್ದಾರೆ.
ಇದನ್ನೂ ಓದಿ:ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!
ನಟಿ ಉರ್ಮಿಳಾ ಮಾತೋಂಡ್ಕರ್ ಅವರು ಇತ್ತೀಚೆಗೆ ಶಿವಸೇನೆ ಪಕ್ಷ ಸೇರಿದ್ದಾರೆ. ಪಕ್ಷ ಸೇರಿದ ಬೆನ್ನಲ್ಲೇ ಅವರು 3 ಕೋಟಿ ರೂಪಾಯಿ ಮೌಲ್ಯದ ಕಚೇರಿಯನ್ನು ಮುಂಬೈನಲ್ಲಿ ಖರೀದಿಸಿದ್ದಾರೆ. ಇದಕ್ಕೆ ಟಾಂಟ್​ ನೀಡಿರುವ ಕಂಗನಾ, “ಉರ್ಮಿಳಾ ಜೀ, ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಕಚೇರಿಯನ್ನು ಕಾಂಗ್ರೆಸ್​ ನಾಶ ಮಾಡಿತು. ಬಿಜೆಪಿ ಮನವೊಲಿಸಲು ಹೋಗಿದ್ದಕ್ಕೆ ನನಗೆ ಸಿಕ್ಕಿದ್ದು, 25-30 ಕೇಸುಗಳು. ನಾನು ಮೂರ್ಖಳಾಗದೆ ನಿಮ್ಮಷ್ಟೇ ಜಾಣೆಯಾಗಿದ್ದರೆ ಕಾಂಗ್ರೆಸ್​ಗೆ ಖುಷಿ ಪಡಿಸುತ್ತಿದ್ದೆ. ನಾನದೆಷ್ಟು ಮೂರ್ಖಳು? ” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಅಂತ್ಯಸಂಸ್ಕಾರ ಮಾಡಲು ಬಂದಿದ್ದವರ ಮೇಲೆ ಕುಸಿದ ಛಾವಣಿ! 18 ಮಂದಿ ದುರ್ಮರಣ
ಇದಕ್ಕೆ ಪ್ರತಿಕ್ರಿಯಿಸಿರುವ ಉರ್ಮಿಳಾ, ತಾನು ಆ ಫ್ಲಾಟ್​ನ್ನು 2011ರಲ್ಲಿಯೇ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಾನು ರಾಜಕೀಯಕ್ಕೆ ಬರುವ ಮುನ್ನವೇ ನಟನೆಯಿಂದ ಸಂಪಾದಿಸಿದ ಹಣದಲ್ಲಿ ಫ್ಲಾಟ್​ ಖರೀದಿಸಿದ್ದಾಗಿ ಆಕೆ ತಿಳಿಸಿದ್ದಾರೆ. (ಏಜೆನ್ಸೀಸ್​)
https://twitter.com/KanganaTeam/status/1345610003596541954?s=20
गणपति बाप्पा मोरया 🙏🏼@KanganaTeampic.twitter.com/m8mRgbsg6o
— Urmila Matondkar (@UrmilaMatondkar)January 3, 2021

ಸಿವಿಲ್ ಆಸ್ಪತ್ರೆಯಲ್ಲೇ ಮಹಿಳೆಯ ಮರ್ಡರ್! ಪ್ರೀತಿಸಿ ಮೋಸ ಮಾಡಿದವಳ ಜೀವವನ್ನೇ ತೆಗೆದ ಪಾಗಲ್​ ಪ್ರೇಮಿ!

ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
