ಬೆಂಗಳೂರು:ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡಿದ್ದು 24 ಕ್ಯಾರೆಟ್ ಗೋಲ್ಡ್ ಕೇಕ್ ಕಟ್  ಕಟ್ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಊರ್ವಶಿ ರೌಟೇಲಾ ಈ ಬಾರಿ ಯೊಯೊ ಹನಿಸಿಂಗ್ ಜೊತೆ ಬರ್ತ್​ಡೇ ಆಚರಿಸಿ ಚಂದದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಊರ್ವಶಿ ತನ್ನ 30ನೇ ಹುಟ್ಟುಹಬ್ಬದಂದು ನಿಜವಾದ ಚಿನ್ನದ ಲೇಪಿತ ಕೇಕ್ ಅನ್ನು ಕತ್ತರಿಸಿದ್ದು, ಇದೀಗ ಚರ್ಚೆಯ ವಿಷಯವಾಗಿದೆ.
ಲವ್​ ಡೋಸ್ 2 ಸೆಟ್​ನಲ್ಲಿ ಬರ್ತ್​ಡೇ ಸೆಲೆಬ್ರೇಷನ್. 24 ಕ್ಯಾರೆಟ್ ಗೋಲ್ಡ್ ಕೇಕ್. ಥಾಂಕ್ಯೂ ಹನಿಸಿಂಗ್ ಎಂದು ನಟಿ ಬರೆದುಕೊಂಡಿದ್ದಾರೆ. ರೆಡ್ ರೋಸ್ ಹಾಗೂ ರೆಡ್ ಹಾರ್ಟ್ ಎಮೋಜಿಯನ್ನು ಕೂಡಾ ನಟಿ ಕ್ಯಾಪ್ಶನ್​ನಲ್ಲಿ ಸೇರಿಸಿಕೊಂಡಿದ್ದಾರೆ.
ನಟಿ ಬ್ರಾಡ್ ನೆಕ್​​ಸ್ಟೈಲ್​ನ ರೆಡ್ ಗೌನ್ ಧರಿಸಿದ್ದರು. ಅವರು ಖುಷಿಯಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಹನಿ ಸಿಂಗ್ ಮತ್ತು ಊರ್ವಶಿ ಮಾತ್ರ ಕಾಣಿಸಿದ್ದಾರೆ. ಕೇಕ್ ಗಾತ್ರ ದೊಡ್ಡದಾಗಿದ್ದು ಕಂಪ್ಲೀಟ್​ ಕೇಕ್ ಗೋಲ್ಡ್ ಪ್ಲೇಟೆಡ್ ಆಗಿತ್ತು. ಊರ್ವಶಿ ರೌಟೇಲಾ ಅವರ ಹುಟ್ಟುಹಬ್ಬದ ಆಚರಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯೂ ನಟಿ ತಮ್ಮ ಹುಟ್ಟುಹಬ್ಬಕ್ಕೆ ಹಣ ಖರ್ಚು ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
