ಅಹಮದಾಬಾದ್​​:ಭಾರತ ಮತ್ತು ಪಾಕ್​​​ ನಡುವಿನ ಪಂದ್ಯ ವೀಕ್ಷಿಸಲು ಬಾಲಿವುಡ್​​ ನಟಿ ಊರ್ವಶಿ ರೌಟೇಲಾ ಅವರು ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮನಿಸಿದ್ದರು. ಈ ವೇಳೆ ನಟಿ ದುಬಾರಿ ಬೆಲೆ ಬಾಳುವ ಮೊಬೈಲ್​​ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಸುಂದರವಾದ ನೀಲಿ ಬಣ್ಣದ ಡ್ರೆಸ್​​ ಧರಿಸಿ ಭಾರತ ಕ್ರಿಕೆಟ್​ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದರು. ಈ ವೇಳೆ ಚಿನ್ನದಿಂದ ಮಾಡಲಾದ ಐ ಫೋನ್​ ಕಳೆದುಕೊಂಡಿದ್ದಾರೆ. ಈ ಕುರಿತಾಗಿ ನಟಿ ಟ್ವೀಟ್​​ ಮಾಡಿದ್ದಾರೆ.

ನನ್ನ 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದು ಹೋಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಕಳೆದು ಹೋಗಿದೆ. ಯಾರಿಗಾದರೂ ಸಿಕ್ಕಿದ್ದರೆ, ದಯವಿಟ್ಟು ತಂದು ಕೊಡಿ, ಮೊಬೈಲ್​ ನಿಮಗೆ ಸಿಕ್ಕಿದ್ದರೆ ನನ್ನ ಸಂಪರ್ಕಿಸಿ ಎಂದು ಮನವಿ ಮಾಡಿ ಟ್ವೀಟ್​​ ಮಾಡಿದ್ದಾರೆ. ಊರ್ವಶಿ ರೌಟೆಲ್ಲಾರ ಈ ಪೋಸ್ಟ್ ಅನ್ನು ಹಲವರು ಟ್ರೋಲ್ ಮಾಡಿದ್ದಾರೆ.
📱 Lost my 24 carat real gold i phone at Narendra Modi Stadium, Ahmedabad! 🏟️ If anyone comes across it, please help. Contact me ASAP! 🙏#LostPhone#AhmedabadStadium#HelpNeeded#indvspak@modistadium@ahmedabadpoliceTag someone who can help
— URVASHI RAUTELA🇮🇳 (@UrvashiRautela)October 15, 2023

ಊರ್ವಶಿ ರೌಟೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಇದೊಂದು ಪ್ರಚಾರ ಪಡೆಯುವ ತಂತ್ರ ಎಂದು ಕೆಲವರು ಆರೋಪ ಮಾಡಿದ್ದಾರೆ. ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ನಟಿಗೆ ಪ್ರಶ್ನೆ ಮಾಡಿದ್ದಾರೆ.

ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಗೃಹ ಮಂತ್ರಿ ಅಮಿತ್ ಶಾ ಅವರಿಂದ ಹಿಡಿದು ಹಲವು ಬಾಲಿವುಡ್ ತಾರೆಯರು, ಸ್ಯಾಂಡಲ್​ವುಡ್ ತಾರೆ ರಮ್ಯಾ ಸೇರಿದಂತೆ ಇನ್ನೂ ಹಲವರು ಭಾರತ-ಪಾಕಿಸ್ತಾನ ಪಂದ್ಯವನ್ನು ಕಣ್​ ತುಂಬಿಕೊಂಡರು.
ಹುಡುಕಿದ್ರೂ ಸಿಗ್ತಿಲ್ಲ ನಟ ಪ್ರಭಾಸ್​ ಇನ್​ಸ್ಟಾಗ್ರಾಂ ಖಾತೆ!; ಇದು ಹ್ಯಾಕರ್​ಗಳ ಕೈಚಳಕವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
