ಮುಂಬೈ:ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಕಳೆದ ಏಳೆಂಟು ತಿಂಗಳಿಂದ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈಗ ಅವರು ಕೋಟಿ ಬೆಲೆ ಬಾಳುವ ಹೊಸ ಮನೆಗೆ ಶಿಫ್ಟ್​​​ ಆಗಿದ್ದಾರೆ ಎನ್ನಲಾಗಿದೆ.
ನಟಿ ಊರ್ವಶಿ ರೌಟೇಲಾ 190 ಕೋಟಿ ಮೌಲ್ಯದ ಮುಂಬೈ ಮನೆಯಲ್ಲಿ ತಂಗಿದ್ದಾರೆ. ಮುಂಬೈನಲ್ಲಿರುವ ನಟಿ ಮನೆ ಐಷಾರಾಮಿಯಾಗಿದೆ. ದಿವಂಗತ, ನಿರ್ಮಾಪಕ ಯಶ್ ಚೋಪ್ರಾ ಅವರ ಮನೆಯ ಪಕ್ಕದಲ್ಲಿರುವ ಬಂಗಲೆಗೆ ನಟಿ ಸ್ಥಳಾಂತರಗೊಂಡಿದ್ದಾರೆ.
ನಾಲ್ಕು ಅಂತಸ್ತಿನ ಬಂಗಲೆಯು ಅದ್ದೂರಿ ಉದ್ಯಾನ, ಜಿಮ್ ಮತ್ತು ದೊಡ್ಡ ಬಾಲಕ್ಕನಿ ಒಳಗೊಂಡಿದೆ. ಊರ್ವಶಿ ರೌಟೇಲಾ ಅವರ ಈ ಬಂಗಲೆಯ ಬೆಲೆ 190 ಕೋಟಿ ರೂ. ಬೆಲೆ ಬಾಳುತ್ತದೆ. ಈ ಮನೆಯ ಒಳ ವಿನ್ಯಾಸ ತುಂಬಾ ವಿಶೇಷವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ; ಸಹಾಯಕ್ಕೆ ಬಾರದೆ ಕುಣಿದು ಕುಪ್ಪಳಿಸಿದ ಪತಿರಾಯ!
ವರದಿಯ ಪ್ರಕಾರ, ಊರ್ವಶಿ ರೌಟೇಲಾ ಎರಡು ತಿಂಗಳಿಂದ ಅದೇ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಈ ಸುದ್ದಿಯನ್ನು ಹೇಳಿಕೊಂಡಿಲ್ಲ. ರೌಟೇಲಾ ಈ ಮನೆಗೆ ಬಾಡಿಗೆಗೆ ನೀಡುತ್ತಿದ್ದಾರಾ ಅಥವಾ ಅದನ್ನು ಖರೀದಿಸಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. ಈ ಮನೆಯಲ್ಲಿ ತೆಗೆದ ಕೆಲವು ಫೋಟೋಗಳು ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಊರ್ವಶಿ ಇದುವರೆಗೂ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ನಟಿಯ ಆಸ್ತಿ ಮಾತ್ರ ಭರ್ಜರಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಊರ್ವಶಿ ಅವರ ಒಟ್ಟು ಸಂಪತ್ತು 30 ಮಿಲಿಯನ್ ಡಾಲರ್ ಅಂದರೆ 250 ಕೋಟಿ ರೂ.ಗೂ ಹೆಚ್ಚು.
ಈ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದೆ ಡ್ರೆಸ್ ಕೋಡ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
