ಮುಂಬೈ:ಭಾರತ ಮತ್ತು ಪಾಕ್​​​ ನಡುವಿನ ಪಂದ್ಯ ವೀಕ್ಷಿಸಲು ಬಾಲಿವುಡ್​​ ನಟಿ ಊರ್ವಶಿ ರೌಟೇಲಾ ಅವರು ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮನಿಸಿದ್ದರು. ಈ ವೇಳೆ ನಟಿ ದುಬಾರಿ ಬೆಲೆ ಬಾಳುವ ಮೊಬೈಲ್​​ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಈ ಮೊಬೈಲ್​​​ ವಾಪಸ್​ ತಂದು ಕೊಟ್ಟರೆ ಭಾರಿ ಬಹುಮಾನ ಕೊಡುವುದಾಗಿ ನಟಿ ಹೇಳಿದ್ದಾರೆ.

ಅಕ್ಟೋಬರ್ 14ರಂದು ನಡೆದ ಭಾರತ- ಪಾಕಿಸ್ತಾನ ಕ್ರಿಕೆಟ್ (Cricket) ಪಂದ್ಯಾವಳಿ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ 24 ಕ್ಯಾರೆಟ್​​ ಚಿನ್ನದ ಐ ಫೋನ್ ಕಳೆದು ಹೋಗಿದೆ ಎಂದು  ಐರಾವತ ನಟಿ ಸೋಶಿಯಲ್​​ ಮೀಡಿಯಾ ಮೂಲಕವಾಗಿ ಅಳಲು ತೋಡಿಕೊಂಡಿದ್ದರು.
📱 Lost my 24 carat real gold i phone at Narendra Modi Stadium, Ahmedabad! 🏟️ If anyone comes across it, please help. Contact me ASAP! 🙏#LostPhone#AhmedabadStadium#HelpNeeded#indvspak@modistadium@ahmedabadpoliceTag someone who can help
— URVASHI RAUTELA🇮🇳 (@UrvashiRautela)October 15, 2023

ನನ್ನ 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದು ಹೋಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಕಳೆದು ಹೋಗಿದೆ. ಯಾರಿಗಾದರೂ ಸಿಕ್ಕಿದ್ದರೆ, ದಯವಿಟ್ಟು ತಂದು ಕೊಡಿ, ಮೊಬೈಲ್​ ನಿಮಗೆ ಸಿಕ್ಕಿದ್ದರೆ ನನ್ನ ಸಂಪರ್ಕಿಸಿ ಎಂದು ಮನವಿ ಮಾಡಿ ಟ್ವೀಟ್​​ ಮಾಡಿದ್ದರು. ಊರ್ವಶಿ ರೌಟೆಲ್ಲಾರ ಈ ಪೋಸ್ಟ್ ಅನ್ನು ಹಲವರು ಟ್ರೋಲ್ ಮಾಡಿದ್ದಾರೆ. ಆದರೆ ನಟಿ ಮಾತ್ರ ಈ ಮೊಬೈಲ್​​ ವಾಪಸ್​ ಪಡೆಯುವ ಉದ್ದೇಶದಿಂದ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಾರೆ.

ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿಲ್ಲ. ಮೊಬೈಲ್‍ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದಾರೆ.
46 ಕೋಟಿ ರೂ. ವೆಚ್ಚದಲ್ಲಿ ತಿರುಪತಿಯಲ್ಲಿ ನಿರ್ಮಾಣವಾಗುತ್ತಿದೆ ದೇಸಿ ಹಸುವಿನ ತಳಿ ಅಭಿವೃದ್ಧಿ ಕೇಂದ್ರ
46 ಕೋಟಿ ರೂ. ವೆಚ್ಚದಲ್ಲಿ ತಿರುಪತಿಯಲ್ಲಿ ನಿರ್ಮಾಣವಾಗುತ್ತಿದೆ ದೇಸಿ ಹಸುವಿನ ತಳಿ ಅಭಿವೃದ್ಧಿ ಕೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + thirteen =
Remember me
