ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಇರಲಿದ್ದಾರೆ ಎನ್ನುವುದಂತೂ ಸತ್ಯ. ಇದೀಗ ಆಗಸದಲ್ಲೂ ರಾರಾಜಿಸುವ ಯೋಗ ಅಗಲಿದ ನಟನಿಗೆ ಒಲಿದು ಬಂದಿದೆ.
ನಟನ ಅಭಿಮಾನಿಯೊಬ್ಬಳು ನಕ್ಷತ್ರವೊಂದಕ್ಕೆ ಸುಶಾಂತ್​ ಸಿಂಗ್​ ರಜಪೂತ್​ ಹೆಸರಿಟ್ಟಿದ್ದಾಳೆ. ಅದರ ಪ್ರಮಾಣ ಪತ್ರವನ್ನು ಟ್ವಿಟರ್​ ಪೇಜ್​ನಲ್ಲಿ ಹಂಚಿಕೊಂಡು ಅಸಂಖ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಇದನ್ನೂ ಓದಿ;ಅಮಿತಾಬ್​ ಬಚ್ಚನ್​ ಮನೆಯ 43 ವರ್ಷಗಳ ಇತಿಹಾಸ ನೆಲಸಮ…!
ಅಷ್ಟಕ್ಕೂ ಸುಶಾಂತ್​ಗೆ ಬಾಹ್ಯಾಕಾಶವೆಂದರೆ ಇನ್ನಿಲ್ಲದ ಪ್ರೀತಿ. ನಕ್ಷತ್ರಗಳ ಬಗ್ಗೆಯೂ ಅಧ್ಯಯನ ನಡೆಸಿದ್ದ. ಹೀಗಾಗಿ ನಕ್ಷತ್ರವೊಂದಕ್ಕೆ ಆತನ ಹೆಸರಿಡುವುದು ಯೋಗ್ಯವಾದ ಕಾರ್ಯವೆಂದು ಅಭಿಮಾನಿ ರಕ್ಷಾ ಎಂಬುವರು ಹೇಳಿದ್ದಾರೆ.
ಎಲ್ಲಿದೆ ನಕ್ಷತ್ರ?:ನಕ್ಷತ್ರದ ಸ್ಥಳದ ಬಗ್ಗೆ ನೀಡಲಾಗಿರುವ ಮಾಹಿತಿ ಎಂದರೆ ಆರ್​ಎ 22.121. ಡಿಕ್ಲನೇಷನ್​- 10.14 ಸ್ಥಳ ಎಂದು ತೋರಿಸಲಾಗಿದೆ. ಇದನ್ನು ಸುಶಾಂತ್​ ಸಿಂಗ್​ ರಜಪೂತ್​ ಹೆಸರಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ
ಖಗೋಳಾಸಕ್ತರಿಗೆ ತಾವು ಕಂಡು ಹಿಡಿದ ಆಕಾಶಕಾಯಗಳಿಗೆ ಹೆಸರು ನೀಡುವ ಅವಕಾಶ ನೀಡಲಾಗುತ್ತದೆ. ಈ ಹಿಮದಯೇ ಹಲವು ಭಾರತೀಯರ ಹೆಸರನ್ನು ನಕ್ಷತ್ರ ಹಾಗೂ ಇತರ ಆಕಾಶ ಕಾಯಗಳಿಗೆ ಇಡಲಾಗಿದೆ.
ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
