ನವದೆಹಲಿ:ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಿಗಳು ಚೀನಾ ಮೂಲದ ಟಿಕ್​ಟಾಕ್​ ಆ್ಯಪ್​ ಕುರಿತು ತನಿಖೆ ಆರಂಭಿಸಿದ್ದಾರೆ. ಅಮೆರಿಕದ ವಿತ್ತ ಕಾರ್ಯದರ್ಶಿ ಸ್ಟೀವ್​ ಮ್ನುಚಿನ್​ ಈ ವಿಷಯ ತಿಳಿಸಿದ್ದಾರೆ.
ಚೀನಾ ಮೂಲದ ವಿಡಿಯೋ ಶೇರಿಂಗ್​ ಆ್ಯಪ್​ ಕುರಿತು ಈಗಾಗಲೆ ತನಿಖೆ ಆರಂಭವಾಗಿದೆ. ಈ ವಾರದಲ್ಲಿ ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ತನ್ಮೂಲಕ ವಿತ್ತ ಸಚಿವಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗಿಸುವಂಥ ವಿದೇಶಿ ಹೂಡಿಕೆಗಳ ಕುರಿತು ಪರಿಶೀಲನೆ ನಡೆಸುವ ಅಮೆರಿಕದಲ್ಲಿನ ವಿದೇಶಿ ಹೂಡಿಕೆಯ ಸಮಿತಿ (ಸಿಎಫ್​ಐಯುಎಸ್​) ಟಿಕ್​ಟಾಕ್​ ಕುರಿತು ತನಿಖೆ ನಡೆಸುತ್ತಿದೆ ಎಂಬ ಅಂಶವನ್ನು ಅಮೆರಿಕ ಸರ್ಕಾರ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ.
ಚೀನಾದ ಟಿಕ್​ಟಾಕ್​ನ ಮೂಲ ಕಂಪನಿ ಬೀಜಿಂಗ್​ ಬೈಟ್​ಡಾನ್ಸ್​ ಟೆಕ್ನಾಲಜಿ ಕಂಪನಿಯು Musical.ly ಎಂಬ ಅಮೆರಿಕದ ಸಾಮಾಜಿಕ ಜಾಲತಾಣದ ಆ್ಯಪ್​ ಅನ್ನು 1 ಶತಕೋಟಿ ಡಾಲರ್​ಗೆ ಖರೀದಿಸಿತ್ತು. ಈ ಆ್ಯಪ್​ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದುದ್ದಲ್ಲದೆ, ಸೆನ್ಸಾರ್​ ಮಾಡುತ್ತಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ಸಿಎಫ್​ಐಯುಎಸ್​ ಈ ವಹಿವಾಟಿನ ಕುರಿತು ತನಿಖೆಗೆ ಮುಂದಾಗಿತ್ತು.
ಇದನ್ನೂ ಓದಿ:ಎತ್ತರದ ಕಟ್ಟಡದಿಂದ ಜಿಗಿದ ಯುವಕ ತಕ್ಷಣವೇ ಎದ್ದು ನಿಂತ: ಆತ್ಮಹತ್ಯೆ ಯತ್ನ ಬೆನ್ನಲ್ಲೆ ನಡೆಯಿತು ಚಮತ್ಕಾರ!
ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಟಿಕ್​ಟಾಕ್​ನ ಅಧಿಕಾರಿಗಳು, ತಮ್ಮ ಆ್ಯಪ್​ನ ಭದ್ರತಾ ಮೂಲಸೌಕರ್ಯವನ್ನು ಹೆಚ್ಚಿಸುವ ಜತೆಗೆ ಸುರಕ್ಷತೆಯ ಅಂಶಗಳಿಗೆ ಒತ್ತು ನೀಡುವ ಸಲುವಾಗಿ ಅದನ್ನು ಉತ್ತಮಪಡಿಸಲು ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.
ಒಂದು ವೇಳೆ ಅಮೆರಿಕದ ರಾಷ್ಟ್ರೀಯ ಭದ್ರತೆ ಧಕ್ಕೆಯನ್ನುಂಟು ಮಾಡುವ ಅಂಶಗಳು ಟಿಕ್​ಟಾಕ್​ ಆ್ಯಪ್​ನಲ್ಲಿ ಇರುವುದು ಸ್ಪಷ್ಟವಾದಲ್ಲಿ, Musical.lyನೊಂದಿಗಿನ ವಹಿವಾಟನ್ನು ರದ್ದುಗೊಳಿಸುವಂತೆ ಬೈಟ್​ಡಾನ್ಸ್​ ಮೇಲೆ ಸಮಿತಿಯು ಒತ್ತಡ ಹೇರಬಹುದಾಗಿದೆ.
ಮುಂಬೈ ತಲುಪಿರುವ ಬಿಹಾರ ಪೊಲೀಸರು; ರಿಯಾ ಮನೆ ಬಾಗಿಲು ಬಡಿಯುತ್ತಾರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − two =
Remember me
