ಅಮೆರಿಕ:ನೀರನ್ನು ಸಂರಕ್ಷಿಸುವ, ಯುಎಸ್ ಮೂಲದ ಕಂಪನಿಯೊಂದು ಕಟ್ಟಡದಿಂದ ಮರುಬಳಕೆಯಾಗುವ ತ್ಯಾಜ್ಯ ನೀರನ್ನು ಬಳಸಿಕೊಂಡು ಬಿಯರ್ ಅನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.
ಸ್ನಾನದ ನೀರು, ಬಟ್ಟೆ ತೊಳೆಯುವ ನೀರು, ಛಾವಣಿಯಿಂದ ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಂಡು, ಗಿಡಗಳಿಗೆ ಬಳಸಲಾಗುತ್ತದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
ಕಂಪನಿಯೊಂದು ಮನೆಗಳಿಂದ ಬಿಡುಗಡೆಯಾಗುವ ಕೊಳಚೆ ನೀರನ್ನು ಬಳಸಿ ಬಿಯರ್ ತಯಾರಿಸಿದೆ. ಸ್ನಾನಕ್ಕೆ, ಬಟ್ಟೆ ಒಗೆಯಲು ಬಳಸುವ ನೀರಿನಿಂದ ಬಿಯರ್ ತಯಾರಿಸುತ್ತಿರುವುದನ್ನು ತಿಳಿದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಹೋದರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ನಟಿ
ಎಪಿಕ್ ಕ್ಲೀನ್‌ಟೆಕ್ ನೀರು-ಸಂಸ್ಕರಿಸುವ ಕಂಪನಿಯಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋದ 40 ಅಂತಸ್ತಿನ ಕಟ್ಟಡವಾದ ಫಿಫ್ಟೀನ್ ಫಿಫ್ಟಿಯಲ್ಲಿ ಶವರ್‌ಗಳು, ಸಿಂಕ್‌ಗಳು ಮತ್ತು ವಾಷಿಂಗ್​​ಮೆಷಿನ್‌ಗಳಿಂದ ಮರುಬಳಕೆಯ ನೀರನ್ನು ಬಳಸಿಕೊಂಡು ಎಪಿಕ್ ಒನ್‌ವಾಟರ್ ಬ್ರೂ- ಕೋಲ್ಷ್ ಶೈಲಿಯ ಬಿಯರ್ ತಯಾರಿಸಲಾಗಿದೆ.
ಕ್ಯಾಲಿಫೋರ್ನಿಯಾ ಕಂಪನಿಯು ಮೊದಲು ತ್ಯಾಜ್ಯನೀರನ್ನು ಸಂಸ್ಕರಿಸುತ್ತದೆ. ಮರುಬಳಕೆಗೆ ಸೂಕ್ತವಾಗಿದೆ ಎಂದು ತಿಳಿದ ನಂತರ ನೀರನ್ನು ತೆಗೆದುಕೊಂಡು ಬಿಯರ್ ತಯಾರಿಸಲಾಗುತ್ತದೆ. ಮಿರರ್ ನೌ ಇನ್‌ಸ್ಟಾಗ್ರಾಮ್ ಪುಟವು ಹೊಸ ಬಿಯರ್ ಅನ್ನು ಪ್ರಕಟಿಸಿದೆ. ಮಹಿಳೆಯೊಬ್ಬರು ಬಿಯರ್ ಕುಡಿಯುತ್ತಿರುವ ಫೋಟೋವನ್ನು ಅಲ್ಲಿ ಪೋಸ್ಟ್ ಮಾಡಲಾಗಿದೆ. ಯುಎಸ್ ಕಂಪನಿಯೊಂದು ಮರುಬಳಕೆಯ ಶವರ್ ನೀರಿನಿಂದ ತಯಾರಿಸಿದ ಬಿಯರ್ ಅನ್ನು ಬಿಡುಗಡೆ ಮಾಡಿದೆ, ‘ಬಿಯರ್ ನೀರಿಗಿಂತ ಕುಡಿಯಲು ಸುರಕ್ಷಿತವಾಗಿದೆ’ ಎಂಬ ಶೀರ್ಷಿಕೆಯೊಂದಿಗೆ. ಹಂಚಿಕೊಳ್ಳಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಬಿಯರ್ ತಯಾರಿತಾಗಿ ಮದ್ಯ ಪ್ರಿಯರು ನಿರಾಶೆಗೊಂಡಿದ್ದಾರೆ.

ಇದನ್ನೂ ಓದಿ:ಏರ್ ಇಂಡಿಯಾ ವಿಮಾನದಲ್ಲಿ ಈರುಳ್ಳಿ ವಾಸನೆ: ತುರ್ತು ಭೂಸ್ಪರ್ಶ ಮಾಡಿದ ಪ್ಲೈಟ್ಎಪಿಕ್ ಕ್ಲೀನ್‌ಟೆಕ್ ನೀರನ್ನು ಸಂಸ್ಕರಿಸಲು ಮತ್ತೊಂದು ಕಂಪನಿಯ ಸಹಾಯವನ್ನು ಪಡೆಯುತ್ತದೆ. ವಾಟರ್ ಟ್ರೀಟ್ಮೆಂಟ್ ಕಂಪನಿಯು ಡೆವಿಲ್ಸ್ ಕ್ಯಾನ್ಯನ್ ಬ್ರೂಯಿಂಗ್ ಕಂ ಜತೆಗೂಡಿ ಅದರ ಆನ್‌ಸೈಟ್ ಗ್ರೇವಾಟರ್ ಮರುಬಳಕೆ ವ್ಯವಸ್ಥೆಯನ್ನು ಬಳಸಿಕೊಂಡು ಬಿಯರ್ ಅನ್ನು ತಯಾರಿಸುತ್ತಿದೆ.
ಕಚೇರಿಗೆ ಟೀ ಬರಲಿಲ್ಲ.. ಬೀದಿಬದಿ ಚಹಾ ಮಾರ್ತಿದ್ದ ವ್ಯಾಪಾರಿಗೆ ನೋಟಿಸ್​ ಕೊಟ್ಟ ಅಧಿಕಾರಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
