ನವದೆಹಲಿ:ಲಡಾಖ್​ ಪೂರ್ವಭಾಗದಲ್ಲಿ ಜಮಾವಣೆಗೊಳಿಸಿದ್ದ ತನ್ನ ಸೇನೆಯನ್ನು ಹಿಂಪಡೆದುಕೊಳ್ಳುವ ಮೂಲಕ ಚೀನಾ ಆ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಗೆ ಸಹಕರಿಸುತ್ತಿದೆ. ಆದರೂ, ಜಾಗತಿಕ ರಾಜಕಾರಣದಲ್ಲಿ ಲಡಾಖ್​ ಬಿಕ್ಕಟ್ಟಿನ ಪರಿಣಾಮಗಳು ಮಾತ್ರ ಢಾಳಾಗಿ ಕಾಣಿಸುತ್ತಲೇ ಇವೆ.
ಹೊಸ ವಿದ್ಯಮಾನವೊಂದರಲ್ಲಿ ಟಿಕ್​ಟಾಕ್​ ಸೇರಿ ಚೀನಾದ ಎಲ್ಲ ಆ್ಯಪ್​ಗಳನ್ನು ನಿಷೇಧಿಸಲು ಅಮೆರಿಕ ಕೂಡ ಚಿಂತನೆ ಆರಂಭಿಸಿದೆ. ಈ ವಿಷಯವನ್ನು ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ತನ್ನನ್ನೇ ತಾನು ಅಪಹರಣ ಮಾಡಿಕೊಂಡ ಈ ಯುವಕ! ಕಾರಣ ಮಾತ್ರ ಬಲು ವಿಚಿತ್ರ…
ನಾನು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗಿಂತ ದೊಡ್ಡವನಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟಿಕ್​ಟಾಕ್​ ಸೇರಿ ಚೀನಾದ ಎಲ್ಲ ಆ್ಯಪ್​ಗಳನ್ನು ನಿಷೇಧಿಸಲು ಚಿಂತನೆ ನಡೆಸಿರುವ ವಿಷಯವನ್ನು ನಿಮಗೆ ತಿಳಿಸಲು ಬಯಸುತ್ತೇನೆ ಎಂದು ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ದಟ್ಟವಾಗಿ ಮೂಡಿದೆ. ಚೀನಾದ ಎಲ್ಲ ಸರಕುಗಳನ್ನು ತಿರಸ್ಕರಿಸಲು ಇಡೀ ಭಾರತ ಅಲಿಖಿತವಾಗಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಟಿಕ್​ಟಾಕ್​ ಸೇರಿ ಚೀನಾದ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಕೂಡ ಇದೇ ಹಾದಿಯಲ್ಲಿ ಸಾಗಲು ನಿರ್ಧರಿಸಿದೆ ಎನ್ನಲಾಗಿದೆ.
30 ಕೆ.ಜಿ ಚಿನ್ನ ಕಳ್ಳಸಾಗಣೆ ಹಿಂದೆ ಇದ್ದದ್ದು ಈ ಪ್ರಭಾವಿ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
