ಚೆನ್ನೈ:ಭಾರತದಲ್ಲಿನ ಅಮೇರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಜುಲೈ 18 ಗುರುವಾರ ಚೆನ್ನೈಯಲ್ಲಿ ಅಮೆರಿಕದ 248ನೇ ರಾಷ್ಟ್ರೀಯ ದಿನಾಚರಣೆಯ ಸಂಭ್ರಮ ಆಚರಿಸಿದರು. ಅವರು ಬಾಹ್ಯಾಕಾಶ ಅನ್ವೇಷಣೆ ಮತ್ತು STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರಗಳಲ್ಲಿ ವಿಸ್ತರಿಸುತ್ತಿರುವ ಯು.ಎಸ್.-ಭಾರತ ಪಾಲುದಾರಿಕೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಅಮೇರಿಕದಲ್ಲಿ 1776ರ ಜುಲೈ 4 ರಂದು ಸ್ವಾತಂತ್ರ್ಯ ಘೋಷಣೆ (ಡಿಕ್ಲರೇಷನ್‌ ಆಫ್‌ ಇಂಡಿಪೆಂಡೆನ್ಸ್‌) ಮಾಡಲಾಯಿತು. ಅದರ ಸ್ಮರಣಾರ್ಥ ಅಮೇರಿಕದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.ಇದನ್ನು ಫೋರ್ಥ್ ಆಫ್ ಜುಲೈ ಎಂದೂ ಕರೆಯಲಾಗುತ್ತದೆ.
ರಾಯಭಾರಿ ಗಾರ್ಸೆಟ್ಟಿ, ಎರಡೂ ದೇಶಗಳ ನಡುವಣ ಅದರಲ್ಲೂ ಬಾಹ್ಯಾಕಾಶ ತಂತ್ರಜ್ಞಾನ ಮತ್ತು STEM ಶಿಕ್ಷಣ ವಲಯದಲ್ಲಿನ ಸಹಭಾಗಿತ್ವಗಳ ವ್ಯೂಹಾತ್ಮಕ ಸಂಬಂಧಗಳ ಮಹತ್ವವನ್ನು ಸಾರಿದರು. ಅಮೇರಿಕ-ಭಾರತದ ಬಾಹ್ಯಾಕಾಶ ಸಂಬಂಧದಲ್ಲಿ ದಕ್ಷಿಣ ಭಾರತ ಮಹತ್ವದ ಪಾತ್ರವಹಿಸುತ್ತಿದ್ದು, ಈ ವಲಯದಲ್ಲಿನ ಅನೇಕ ಉಪಕ್ರಮಗಳ ಅನುಷ್ಠಾನದಲ್ಲಿ, ಅದರಲ್ಲೂ ವಿಶೇಷವಾಗಿ ನೈಸಾರ್ (ನಾಸಾ-ಇಸ್ರೋ ಸಿಂಥಟಿಕ್ ಅಪರ್ಚರ್ ರಾಡಾರ್) ಮಿಷನ್‌ನ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯರನ್ನು ಕಳುಹಿಸುವ ಬಗ್ಗೆ ತಿಳಿಸಿದರು. “ಬಾಹ್ಯಾಕಾಶ ನಮ್ಮ ಸಂಕುಚಿತ ಗುರುತುಗಳ ತೆಗೆದೊಗೆದು, ಗಡಿ-ಸಾಗರಗಳ ಮೀರಿ ನಮ್ಮನ್ನು ಜೋಡಿಸುತ್ತದೆ. ಇದು ಇಂಡೋ-ಪೆಸಿಫಿಕ್‌ನಲ್ಲಿ ವಿಶೇಷ ಸಂಬಂಧವನ್ನು ನಿರ್ಮಿಸುತ್ತಿದೆ, ಹಾಗೆಯೇ ಅದನ್ನೂ ಮೀರಿ ಜತೆಯಾಗಿ ಒಂದು ದೊಡ್ಡ ಮಾನವ ಕುಟುಂಬವಾಗಿಸುತ್ತದೆ,” ಎಂದರು.
ಇದನ್ನೂ ಓದಿ:​ಹುಡುಗನ ಅಪ್ಪನಿಗೆ 10 ಮಕ್ಕಳು, ಹೆಣ್ಣಿನ ತಾಯಿಗೆ 6 ಮಕ್ಕಳು; ಮದುವೆ ಮಾತುಕತೆ ನೆಪದಲ್ಲಿ ಬೀಗತಿಯೊಂದಿಗೆ ವರನ ತಂದೆ ಎಸ್ಕೇಪ್
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರನ್ನು ಪ್ರತಿನಿಧಿಸಿದ್ದ ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್‌ ಪೊಯ್ಯಾಮೊಳಿ, “ಚೆನ್ನೈನಲ್ಲಿರುವ ಅಮೇರಿಕದ ದೂತಾವಾಸ ಸಂವಹನ ಮತ್ತು ಸಹಕಾರದ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಮೇರಿಕದ ಕಾನ್ಸುಲೇಟ್‌ನ ಸಹಯೋಗವು ಜಾಗತಿಕ ದೃಷ್ಟಿಕೋನಗಳು, ಸಂಶೋಧನೆ ಮತ್ತು ಉತ್ತಮ ಅಭ್ಯಾಸಗಳನ್ನು ಸಂಯೋಜಿಸುವ ಮೂಲಕ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ. ನಾವು ಅಮೇರಿಕನ್ ಇತಿಹಾಸದಲ್ಲಿನ ಮೈಲಿಗಲ್ಲನ್ನು ಸ್ಮರಿಸುವ ಈ ಹೊತ್ತಿನಲ್ಲಿ, ತಮಿಳುನಾಡು ಮತ್ತು ಅಮೇರಿಕದ ನಡುವಿನ ಸ್ನೇಹ ಸಂಬಂಧಗಳನ್ನು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ನಮ್ಮ ಯುವಕರು ಮತ್ತು ಸಮುದಾಯಗಳ ಸಮೃದ್ಧ ಭವಿಷ್ಯಕ್ಕಾಗಿ ಅಮೇರಿಕನ್ ದೂತಾವಾಸದ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಸದುಪಯೋಗಪಡಿಸಿಕೊಳ್ಳುವ ಪಾಲುದಾರಿಕೆ ಮತ್ತು ಸಹಕಾರದ ಮನೋಭಾವವನ್ನು ಮುಂದುವರಿಸೋಣ.”
ಸಮಾರಂಭದಲ್ಲಿ ಹಾಜರಿದ್ದ ಚೆನ್ನೈನಲ್ಲಿನ ಅಮೇರಿಕದ ಕಾನ್ಸಲ್‌ ಜನರಲ್‌ ಕ್ರಿಸ್‌ ಹಾಡ್ಜಸ್‌, ಮುಖ್ಯ ಅತಿಥಿ ಕಮಲ ಹಾಸನ್‌, ಅಮೇರಿಕ-ಭಾರತದ ಸಂಬಂಧಗಳ ಬಹುಮುಖಿ ಸ್ವರೂಪ ಅದರಲ್ಲೂ ವಿಶೇಷವಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು STEM ಶಿಕ್ಷಣವನ್ನು ಅಭಿವೃದ್ಧಿಪಡಿಸುವಲ್ಲಿನ ಪಾತ್ರದ ಬಗ್ಗೆ ಒತ್ತಿ ಹೇಳಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕಮಲ ಹಾಸನ್ ಬಾಹ್ಯಾಕಾಶ ವಿಷಯದ ಸುತ್ತ ಹೆಣೆಯಲಾದ ಅಮೇರಿಕ ರಾಷ್ಟೀಯ ದಿನ ಕಾರ್ಯಕ್ರಮವನ್ನು ಪ್ರಶಂಸಿಸಿದರು, ಇತ್ತೀಚಿನ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರಶಸ್ತಿ ವಿಜೇತ ಯುವ ಗಾಯಕಿ ಐನಾ ಪಡಿಯತ್‌ ಅಮೇರಿಕದ ರಾಷ್ಟ್ರಗೀತೆಯನ್ನು ಹಾಡಿದರೆ, ಪವಿತ್ರಾ ಚಾರಿ ಭಾರತದ ರಾಷ್ಟ್ರಗೀತೆ ಹಾಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 13 =
Remember me
