ನವದೆಹಲಿ:ಇಡೀ ಜಗತ್ತನ್ನು ಕರೊನಾ ಸಂಕಷ್ಟ ಆವರಿಸಿಕೊಂಡಿದೆ. ಇದರಿಂದ ಹೊರಬರಲು ಎಲ್ಲ ದೇಶಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ, ಆಯಾ ದೇಶದ ನಾಯಕರಿಗೆ ಹೋಲಿಸಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಖ್ಯಾತಿ ಗಗನಕ್ಕೇರಿದೆ.
ಕೋವಿಡ್​ ಕಾಲದಲ್ಲಿ ಇಡೀ ದೇಶವೇ ಮೋದಿಯನ್ನು ಹಿಂಬಾಲಿಸುತ್ತಿದೆ. ಹೀಗೆಂದು ವಿಸ್ತೃತ ಲೇಖನವನ್ನೇ ಬರೆದಿದೆ ಅಮೆರಿಕದ ನ್ಯೂಯಾರ್ಕ್​ ಟೈಮ್ಸ್​ ದಿನಪತ್ರಿಕೆ. ಒಂದು ವೇಳೆ ಸದ್ಯದಲ್ಲೇ ಭಾರತ ಕೋವಿಡ್​ ಸುಳಿಯಿಂದ ಹೊರ ಬಂದರೆ ಜಾಗತಿಕವಾಗಿ ಮೋದಿ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
ಜಗತ್ತಿನಾದ್ಯಂತ ಕೋವಿಡ್​ ಕಾಲಘಟ್ಟದ ಬಗ್ಗೆ ಬರೆಯಲಾದ ಲೇಖನದಲ್ಲಿ ಕಳೆದರಡು ತಿಂಗಳಲ್ಲಿ ಭಾರತದಲ್ಲಿ ಮೋದಿ ಮಾತನ್ನು ಒಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೊಮ್ಮೆ ಶೇ.90 ತಲುಪಿದೆ ಎಂದು ಹೇಳಿದೆ. ಇದೇ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಹೋಲಿಸಿದಲ್ಲಿ ಮೋದಿ ಉತ್ತುಂಗದಲ್ಲಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ;ಇನ್ನಷ್ಟು ಹತ್ತಿರವಾಯ್ತು ಮೌಂಟ್​ ಎವರೆಸ್ಟ್​…!
ಪುಲ್ವಾಮಾ ದಾಳಿಗೆ ನೀಡಿದ ಪ್ರತ್ಯುತ್ತರ ಮೋದಿ ಮರು ಆಯ್ಕೆಗೆ ಕಾರಣವಾಗಿದ್ದನ್ನು ಸ್ಮರಿಸಿರುವ ಪತ್ರಿಕೆ, ಸದ್ಯದಲ್ಲೇನಾದರೂ ಕೋವಿಡ್​ ಸಂಕಷ್ಟದಿಂದ ಭಾರತ ಪಾರಾಗಿದ್ದೇ ಆದಲ್ಲಿ, ಮೋದಿ ಇನ್ನಷ್ಟು ಬಲಿಷ್ಠರಾಗಿ ಹೊರಹೊಮ್ಮಲಿದ್ದಾರೆ ಎಂದು ತಿಳಿಸಿದೆ.
ಮೋದಿ ದೇಶವನ್ನು ಮುನ್ನಡೆಸುವವರೇ ಹೊರತು ನಿರಂಕುಶಾಧಿಕಾರಿಯಲ್ಲ ಎಂಬುದು ಸಾರ್ವತ್ರಿಕವಾಗಿದೆ. ಹೀಗಾಗಿ ಲಾಕ್​ಡೌನ್​ ಅವಧಿಯಲ್ಲಿ ಮೋದಿ ನೀಡಿದ ಕರೆಗಳಿಗೆ ಹೆಚ್ಚಿನ ಜನರು ಸ್ಪಂದಿಸಿದ್ದಾರೆ. ಮಾರ್ಚ್​ 22 ರಂದು ಕರೆ ನೀಡಿದ ಜನತಾ ಕರ್ಫ್ಯೂಗೆ ಇನ್ನಿಲ್ಲದ ಸ್ಪಂದನೆ ವ್ಯಕ್ತವಾಯಿತು. ನಂತರ ಮೂರು ಬಾರಿ ದೇಶವನ್ನುದ್ದೇಶಿಸಿ ಮೋದಿ ಮಾತನಾಡಿದ್ದಾರೆ. ಮೊದಲಿಗೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದರು. ಬಳಿಕ ಅದನ್ನು ವಿಸ್ತರಿಸಿದರು. ಕೊನೆಯದಾಗಿ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪುನಶ್ಚೇತನ ಪ್ಯಾಕೇಜ್​ ಘೋಷಿಸಿದರು. ಇವೆಲ್ಲ ಕ್ರಮಗಳನ್ನು ದೇಶದ ಜನರು ಸ್ವಾಗತಿಸಿದ್ದಾರೆ.
ಇದನ್ನೂ ಓದಿ;ಕೋವಿಡ್​ ಕಾಲದಲ್ಲಿ ರೈಲಿನಲ್ಲಿ ಸಂಚರಿಸುವುದೆಂದರೆ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!
ಕರೊನಾ ಸೇನಾನಿಗಳ ಗೌರವಾರ್ಥವಾಗಿ ಚಪ್ಪಾಳೆ ತಟ್ಟುವುದು, ಶಂಖ-ಜಾಗಟೆಗಳನ್ನು ಬಾರಿಸುವುದು, ಅವರಿಗಾಗಿ ಮೇಣದ ಬತ್ತಿಗಳನ್ನು ಹಚ್ಚುವ ಕರೆಗಳಿಗೆ ಕೋಟ್ಯಂತರ ಜನರು ಅಭೂತಪೂರ್ವವಾಗಿ ಸ್ಪಂದಿಸಿದರು. ಇವೆಲ್ಲವುಗಳು ‘ನಾವು ಚೆನ್ನಾಗಿದ್ದೇವೆ’ ಎಂಬ ಭಾವವನ್ನು ಜನರಲ್ಲಿ ಮೂಡಿಸಿದವು ಎಂದು ಪತ್ರಿಕೆ ತಿಳಿಸಿದೆ. ಇದರ ಹೊರತಾಗಿಯೂ, ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟ, ಅವರು ಕಾಲ್ನಡಿಗೆಯಲ್ಲಿ ಸಾಗುತ್ತಿರುವುದು, ನಿರುದ್ಯೋಗ ಸಮಸ್ಯೆ ಹಾಗೂ ಇತ್ತೀಚೆಗೆ ಉತ್ತರಪ್ರದೇಶದ ಔರಯ್ಯದಲ್ಲಿ ಟ್ರಕ್​ ಅಪಘಾತದಲ್ಲಿ 26 ಜನರು ಮೃತಪಟ್ಟ ಘಟನೆಯನ್ನು ನ್ಯೂಯಾರ್ಕ್​ ಟೈಮ್ಸ್​ ಉಲ್ಲೇಖ ಮಾಡಿದೆ.
ಕರೊನಾ ಸೋಂಕಿನ ಗಂಭೀರತೆಯನ್ನು ಮೋದಿ ಎಂದಿಗೂ ಉತ್ಪ್ರೇಕ್ಷೆ ಮಾಡಲಿಲ್ಲ. ದೇಶದ ಸನ್ನದ್ಧತೆ ಬಗ್ಗೆ ವಾಸ್ತವವನ್ನೇ ತೆರೆದಿಟ್ಟರು ಹಾಗೂ ರಾಜಕೀಯ ಸಿದ್ದಾಂತಗಳನ್ನ ಬದಿಗಿಟ್ಟು ವಿವಿಧ ರಾಜ್ಯಗಳೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸಿದ್ದು ಮೋದಿ ಪರ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕರೊನಾ ಸೋಂಕಿತರು ಹಾಗೂ ಮೃತಪಟ್ಟವರ ಸಂಖ್ಯೆ ಉಳಿದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಅತ್ಯಲ್ಪ ಎಂದು ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
