ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್​. ಜಗನ್ಮೋಹನ್​ ರೆಡ್ಡಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ ಮೂಲದ ವೈದ್ಯ ಅಮೆರಿಕದಲ್ಲಿ ಕೇಸು ದಾಖಲಿಸಿದ್ದಾರೆ. ಈ ಮೇರೆಗೆ ಮೂವರಿಗೂ ನೋಟಿಸ್ ಜಾರಿಯಾಗಿದೆ.
ಡಾ. ಲೋಕೇಶ್​ ವುಯೂರ್ರು ಎಂಬವರು ಯುಎಸ್ ಡಿಸ್ಟ್ರಿಕ್ಟ್​ ಕೋರ್ಟ್​ ಫಾರ್​ ದ ಡಿಸ್ಟ್ರಿಕ್ಟ್​ ಆಫ್​ ಕೊಲಂಬಿಯಾದಲ್ಲಿ ಮೇ 24ರಂದು ಕೇಸು ದಾಖಲಿಸಿದ್ದರು. ಈ ಮೇರೆಗೆ ಜುಲೈ 22ರಂದು ಸಮನ್ಸ್ ಜಾರಿಯಾಗಿದ್ದು, ಆ. 4ರಂದು ಈ ಮೂವರಿಗೂ ಅದನ್ನು ರವಾನಿಸಲಾಗಿದೆ.
ಆರೋಪಿಗಳ ಪಟ್ಟಿಯಲ್ಲಿ ವರ್ಲ್ಡ್​ ಎಕನಾಮಿಕ್​ ಫೋರಮ್​ನ ಸ್ಥಾಪಕ ಮತ್ತು ಅಧ್ಯಕ್ಷ ಪ್ರೊ. ಕ್ಲಾಸ್ ಸ್ಕ್ವಾಬ್​ ಹೆಸರು ಕೂಡ ಇದೆ. ಭ್ರಷ್ಟಾಚಾರ ಹಾಗೂ ಪೆಗಾಸಸ್​ ಸ್ಪೈವೇರ್​ ದುರ್ಬಳಕೆ ಆರೋಪ ಹೊರಿಸಿ ಮೂವರ ವಿರುದ್ಧ ಈ ದೂರನ್ನು ನೀಡಲಾಗಿದೆ. ಈ ಮೂವರು ಯುಎಸ್​ಗೆ ನಗದು ವರ್ಗಾವಣೆ ಮಾಡುತ್ತಿದ್ದು, ವಿರೋಧಿಗಳ ವಿರುದ್ಧ ಪೆಗಾಸಸ್​ ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ಮೂಲಗಳು ತಿಳಿಸಿವೆ.– ಏಜೆನ್ಸೀಸ್​
ಮಗನ ಉದ್ಯೋಗಕ್ಕಾಗಿ ಸಂಸದೆಯ ಕಾಲಿಗೆ ಬಿದ್ದ ಮಹಿಳೆ; ಹೈಕೋರ್ಟ್ ತೀರ್ಪಿಗೂ ಬಗ್ಗದ ಆಡಳಿತ ಮಂಡಳಿ?

ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
